ಮಾರ್ಚ್ 31ರ ವರೆಗೆ ಒಲಾ ಡಿಸ್ಕೌಂಟ್ ಆಫರ್, 84,999 ರೂಗೆ ಎಲೆಕ್ಟ್ರಿಕ್ ಸ್ಕೂಟರ್!

Published : Mar 20, 2024, 05:07 PM IST

ಒಲಾ ಈಗಾಗಲೇ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಆಫರ್ ಮಾರ್ಚ್ 31ಕ್ಕೆ ಅಂತ್ಯಗೊಳ್ಳುತ್ತಿದೆ. ಭರ್ಜರಿ ಬೆಲೆ ಕಡಿತ ಮಾಡಿರುವ ಓಲಾ 84,999 ರೂಪಾಯಿಗೆ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತಿದೆ.  

PREV
18
ಮಾರ್ಚ್ 31ರ ವರೆಗೆ ಒಲಾ ಡಿಸ್ಕೌಂಟ್ ಆಫರ್, 84,999 ರೂಗೆ ಎಲೆಕ್ಟ್ರಿಕ್ ಸ್ಕೂಟರ್!

ಬೆಂಗಳೂರು ಮೂಲದ ಓಲಾ ತನ್ನ ಡಿಸ್ಕೌಂಟ್ ಆಫರ‌ನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ. ಈ ಅವಧಿಯೊಳಗೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಮಾಡುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.
 

28

ಒಲಾ ಪ್ರಮುಖವಾಗಿ ಆಯ್ದೆ ಸ್ಕೂಟರ್‌ಗೆ ಡಿಸ್ಕೌಂಟ್ ಆಫರ್ ನೀಡಿದೆ.  S1 ಏರ್, S1 X+, ಹಾಗೂ S1 ಪ್ರೋ ಸ್ಕೂಟರ್ ಮೇಲೆ ಓಲಾ ಭಾರಿ ಬೆಲೆ ಕಡಿತ ಮಾಡಿದೆ.

38

ಒಲಾ S1 X+ ಸ್ಕೂಟರ್ ಬೆಲೆ 1,09,999 ರೂಪಾಯಿ. ಆದರೆ ಬರೋಬ್ಬರಿ 25,000 ರೂಪಾಯಿ ಬೆಲೆ ಕಡಿತ ಮಾಡಿರುವ ಓಲಾ ಇದೀಗ 84,999 ರೂಪಾಯಿಗೆ9ಎಕ್ಸ್ ಶೋರೂಂ) ಸ್ಕೂಟರ್ ನೀಡುತ್ತಿದೆ.
 

48

ಓಲಾ ಎಸ್1 ಏರ್ ಸ್ಕೂಟರ್ ಮೂಲ ಬೆಲೆ 1,19,999 ರೂಪಾಯಿ. ಆದರೆ ಮಾರ್ಚ್ 31ರೊಳಗೆ ಬುಕ್ ಮಾಡುವುದಾದರೆ ಈ ಸ್ಕೂಟರ್ 1,04,999 ರೂಪಾಯಿಗೆ ಲಭ್ಯವಿದೆ(ಎಕ್ಸ್ ಶೋ ರೂಂ)
 

58

ಓಲಾ ಎಸ್1 ಪ್ರೋ ಸ್ಕೂಟರ್ ಮೂಲ ಬೆಲೆ 1,47,999 ರೂಪಾಯಿ. ಡಿಸ್ಕೌಂಟ್ ಆಫರ್ ಮೂಲಕ ಈ ಸ್ಕೂಟರ್ 1,29,999 ರೂಪಾಯಿಗೆ(ಎಕ್ಸ್ ಶೋ ರೂಂ) ಲಭ್ಯವಿದೆ. 
 

68

ಬೆಲೆ ಜೊತೆಗೆ ಆಕರ್ಷಕ ಬಣ್ಣಗಳಲ್ಲಿ ಓಲಾ ಸ್ಕೂಟರ್ ಲಭ್ಯವಿದೆ. ಪ್ರಮುಖವಾಗಿ 5 ಬಣ್ಣಗಳಲ್ಲಿ ಸ್ಕೂಟರ್ ಲಭ್ಯವಿದೆ. ಈ ಪೈಕಿ ಡ್ಯುಯೆಲ್ ಟೋನ್ ಕಲರ್ ಕೂಡ ಲಭ್ಯವಿದೆ.
 

78

ಒಂದು ಬಾರಿ ಚಾರ್ಜ್ ಮಾಡಿದರೆ 143ಕಿ.ಮಿ ಮೈಲೇಜ್ ನೀಡಲಿದೆ. ಗರಿಷ್ಠ ವೇಗ 120 ಕಿ.ಮೀ ಪ್ರತಿ ಗಂಟೆಗೆ. ಇಕೋ, ನೀರ್ಮಲ್, ಸ್ಪೊರ್ಟ್ ಹಾಗೂ ಹೈಪರ್ ನಾಲ್ಕ್ ಮೊಡ್‌ಗಳಲ್ಲಿ ಸ್ಕೂಟರ್ ರೈಡ್ ಮಾಡಬಹುದು.
 

88

ಡಿಸೆಂಬರ್ 2023ರಲ್ಲಿ ಓಲಾ ಡಿಸ್ಕೌಂಟ್ ಆಫರ್ ಘೋಷಿಸಿತ್ತು. ಈ ಆಫರ್ 2024ರ ಫೆಬ್ರವರಿಗೆ ಅಂತ್ಯಗೊಂಡಿತ್ತು. ಆದರೆ ಒಲಾ ಇದೇ ಆಫರ್‌ನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ.
 

Read more Photos on
click me!

Recommended Stories