ಭಾರತದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ ಐಕಾನಿಕ್ ಯಮಹಾ RX100, ಕೈಗೆಟುಕುವ ಬೆಲೆಯಲ್ಲಿ ಬೈಕ್!

First Published | Feb 21, 2024, 3:30 PM IST

ಯಮಹಾ RX100 ಬೈಕ್ ಸ್ಥಗಿತಗೊಂಡು ದಶಕಗಳೇ ಉರುಳಿದೆ. ಆದರೆ ಈಗಲೂ RX100 ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. RX100 ಸೌಂಡ್ ಕೇಳಿದರೆ ಸಾಕು ಒಂದು ಬಾರಿ ಕಣ್ಣರಳಿಸಿ ನೋಡದೇ ಇರಲು ಸಾಧ್ಯವಿಲ್ಲ. ಇದೀಗ ಯಮಹಾ ತನ್ನ ಐಕಾನಿಕ್ RX100 ಬೈಕ್‌ನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಬಿಡುಗಡೆ ದಿನಾಂಕ, ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಈಗಾಗಲೇ ಹಳೇ ಐಕಾನಿಕ್ ಬೈಕ್ ಹೊಸ ಅವತಾರದಲ್ಲಿ ಬಿಡುಗಡೆ ಮಾಡಿ ಭಾರಿ ಯಶಸ್ಸು ಕಂಡಿದೆ. ಜಾವಾ, ಯೆಜ್ಡಿ ಬೈಕ್‌ಗಳು ಭಾರಿ ಬೇಡಿಕೆ ಪಡೆದುಕೊಂಡಿದೆ. ಇದೀಗ ಈ ಎಲ್ಲಾ ದಾಖಲೆ ಪುಡಿ ಮಾಡಲು ಮತ್ತೊಂದು ಐಕಾನಿಕ್ ಬೈಕ್ ಬಿಡುಗಡೆಯಾಗುತ್ತಿದೆ.
 

ದಶಕಗಳ ಮೊದಲೇ ಸ್ಥಗಿತಗೊಂಡು ಇದೀಗ ಕೆಲವೇ ಕೆಲವು ಮಂದಿಯಲ್ಲಿರುವ ಈ ಬೈಕ್ ಬೇರೆ ಯಾವುದು ಅಲ್ಲ, ಒನ್ ಅಂಡ್ ಒನ್ಲಿ ಯಮಹಾ RX100. ಇದೀಗ ಯಮಹಾ ಭಾರತದಲ್ಲಿ RX100 ಬೈಕ್ ಹೊಸ ಅವತಾರದಲ್ಲಿ ಬಿಡುಗಡೆ ಮಾಡುತ್ತಿದೆ.

Tap to resize

ಯಮಹಾ ಇಂಡಿಯಾ ಇದೀಗ RX100 ಬೈಕ್‌ನ್ನು ಬಿಡುಗಡೆ ಮಾಡುತ್ತಿದೆ. ಆದರೆ ಎಂಜಿನ್ ಬದಲು. ಹೊಸ ಅವತಾರದ RX100 ಬೈಕ್ 225.9 ಸಿಸಿ ಎಂಜಿನ್ ಬಳಸಲಾಗುತ್ತಿದೆ.

20.1 bhp ಪವರ್ ಹಾಗೂ 19.93 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ವಿಶೇಷ ಅಂದರೆ ನೂತನ ಯಮಹಾ  RX100 ಬೆಲೆ 1.25 ಲಕ್ಷ ರೂಪಾಯಿಂದ 1.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.

ಹಲವು ಬಾರಿ ಯಮಹಾ RX100 ಬೈಕ್ ಬಿಡುಗಡೆ ಕುರಿತು ಊಹಾಪೋಹಳು ಎದ್ದಿತ್ತು. ಆದರೆ ಈ ಬಾರಿ ಯಮಹಾ ಇಂಡಿಯಾ ಅಧ್ಯಕ್ಷ ಇಶಿನ್ ಚಿಹಾನ ಈ ಮಾತನ್ನು ಖಚಿತಪಡಿಸಿದ್ದಾರೆ.

1980ರಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಯಮಹಾ RX100 ಬೈಕ್ ದಶಕಗಳ ಭಾರತದ ಬೈಕ್ ಮಾರುಕಟ್ಟೆ ಆಳಿತ್ತು. ಆದರೆ 2 ಸ್ಟ್ರೋಕ್ ಎಂಜಿನ್ ಕಾರಣ ಸ್ಥಗಿತಗೊಂಡಿತು. ಎಮಿಶನ್ ನಿಯಮಗಳಿಗೆ 2 ಸ್ಟ್ರೋಕ್ ಎಂಜಿನ್ ವಿರುದ್ಧವಾಗಿತ್ತು. 
 

2005ರ ವರೆಗೆ ಯಮಹಾ RX100 ಬೈಕ್ ಲಭ್ಯವಿತ್ತು. ಇದರಲ್ಲಿ RX135 ವೇರಿಯೆಂಟ್ ಕೂಡ ಬಿಡುಗಡೆಯಾಗಿತ್ತು. ಆದರೆ ಬಳಿಕ ಯಮಹಾ RX100 ಸ್ಥಗಿತಗೊಂಡಿತು. ಇದೀಗ ಈ ವರ್ಷದ ಅಂತ್ಯದಲ್ಲಿ ಯಮಹಾ RX100 ಮತ್ತೆ ಬಿಡುಗಡೆಯಾಗುವ ಸಾಧ್ಯತೆ ಇದೆ.

ಯಮಹಾ RX100 ಬೈಕ್ ಕ್ರೇಜ್ ಈಗಲೂ ಹಾಗೇ ಇದೆ.ಸೆಕೆಂಡ್ ಹ್ಯಾಂಡ್ ಯಮಹಾ RX100 ಬೈಕ್‌ಗೆ ಭಾರಿ ಬೇಡಿಕೆ ಇದೆ. ಇದರ ಶಬ್ದ, ಕ್ರೋಮ್ ಫಿನಿಶಿಂಗ್ ಬಾಡಿ, ವಿನ್ಯಾಸ ಎಲ್ಲವೂ ಕ್ಲಾಸಿಕ್.

Latest Videos

click me!