ಅಕ್ಷಯ ತೃತೀಯ ಬಂಪರ್ ಆಫರ್, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ 40,000 ರೂ ಡಿಸ್ಕೌಂಟ್

Published : May 01, 2025, 12:13 PM ISTUpdated : May 01, 2025, 12:29 PM IST

ಅಕ್ಷಯ ತೃತೀಯಕ್ಕೆ ಓಲಾ ಲಿಮಿಟೆಡ್ ಟೈಮ್ ಆಫರ್ ಘೋಷಿಸಿದೆ. ಬರೋಬ್ಬರಿ 40,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಿದೆ. ಇದೀಗ ಓಲಾ ಸ್ಕೂಟರ್ ಕೈಗೆಟುಕುವ ದರಲ್ಲಿ ಲಭ್ಯವಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ. 

PREV
15
ಅಕ್ಷಯ ತೃತೀಯ ಬಂಪರ್ ಆಫರ್, ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ 40,000 ರೂ ಡಿಸ್ಕೌಂಟ್
ಓಲಾ ಸ್ಕೂಟರ್ ಆಫರ್

ಅಕ್ಷಯ ತೃತೀಯದ ನಿಮಿತ್ತ 72 ಗಂಟೆಗಳ 'ಎಲೆಕ್ಟ್ರಿಕ್ ರಶ್' ಆಫರ್ ಘೋಷಿಸಲಾಗಿದೆ.  ಓಲಾ ಇದೀಗ ಭರ್ಜರಿ ಡಿಸ್ಕೌಂಟ್, ವಾರಂಟಿ ಮತ್ತು ಒಂದೇ ದಿನದ ಡೆಲಿವರಿ ನೀಡುತ್ತಿದೆ. ಈ ಮೂಲಕ ಮಾರಾಟದಲ್ಲಿ ಭಾರಿ ಏರಿಕೆಗೆ ಮುಂದಾಗಿದೆ. ಇದು ಸೀಮಿತ ಅವಧಿಯ ಆಫರ್. ಹೀಗಾಗಿ ತ್ವರಿತವಾಗಿ ಬುಕ್ ಮಾಡಿದವರಿಗೆ ಲಭ್ಯವಾಗಲಿದೆ. 

25
ಓಲಾ ಸ್ಕೂಟರ್‌ಗಳ ಆಫರ್

ಓಲಾ ಲಿಮಿಟೆಡ್ ಆಫರ್‌ನಲ್ಲಿ ಬರೋಬ್ಬರಿ 40,000 ರೂಪಾಯಿ ಉಳಿತಾಯ ಮಾಡಬಹುದು. ಕಾರಣ ಓಲಾ ಸ್ಕೂಟರ್ ಮೇಲೆ ಭಾರಿ ಡಿಸ್ಕೌಂಟ್ ನೀಡಲಾಗಿದೆ. ಓಲಾ ಎಲೆಕ್ಟ್ರಿಕ್ S1 ಸರಣಿಯ ಸ್ಕೂಟರ್‌ಗಳ ಮೇಲೆ ₹40,000 ವರೆಗೆ ಡಿಸ್ಕೌಂಟ್. ಜನರೇಷನ್ 2 ಸ್ಕೂಟರ್‌ಗಳು ₹67,499 ರಿಂದ ಮತ್ತು ಜನರೇಷನ್ 3 ಸ್ಕೂಟರ್‌ಗಳು ₹73,999 ರಿಂದ ಶುರುವಾಗುತ್ತಿದೆ.

35
ಬ್ಯಾಟರಿ ಬದಲಾಯಿಸಬಹುದಾದ ಓಲಾ ಸ್ಕೂಟರ್

ಜನರೇಷನ್ 2 S1X ₹67,499, ₹83,999 ಮತ್ತು ₹90,999 ದರಗಳಲ್ಲಿ 2kWh, 3kWh ಮತ್ತು 4kWh ರೂಪಾಂತರಗಳಲ್ಲಿ ಲಭ್ಯ. S1 Pro ₹1,11,999 ರಿಂದ ಶುರು. ಓಲಾದಲ್ಲಿ ಬ್ಯಾಟರಿ ಬದಲಾಯಿಸಬಲ್ಲ, ಪೋರ್ಟೇಬಲ್ ಬ್ಯಾಟರಿ ಸೌಲಭ್ಯದ ಸ್ಕೂಟರ್ ಲಭ್ಯವಿದೆ.  ಹೀಗಾಗಿ ಬ್ಯಾಟರಿ ಕಳಚಿ ಸುಲಭವಾಗಿ ಚಾರ್ಜಂಗ್ ಮಾಡುವುದು ಅಥವಾ ಬ್ಯಾಟರಿ ಎಕ್ಸ್‌ಚೇಂಜ್ ಬಳಿ ಬದಲಾಯಿಸಲು ಸಾಧ್ಯವಿದೆ. 

45

ಜನರೇಷನ್ 3 S1 Pro+ 5.3kWh ಮತ್ತು 4kWh ಬ್ಯಾಟರಿ ಆಯ್ಕೆಗಳೊಂದಿಗೆ ₹1,88,200 ಮತ್ತು ₹1,48,999 ದರಗಳಲ್ಲಿ ಲಭ್ಯ. S1 Pro ₹1,29,999 ಮತ್ತು ₹1,12,999 ದರಗಳಲ್ಲಿ ಲಭ್ಯ. S1 X ₹73,999 ರಿಂದ ಶುರು, S1 X+ (4kWh) ₹1,09,999. ಓಲಾ ಸ್ಕೂಟರ್ ಲಿಮಿಟೆಡ್ ಪೀರಿಯೆಟ್ ಆಫರ್ ಕುರಿತು ಹತ್ತಿರದ ಓಲಾ ಡೀಲರ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಪರೀಕ್ಷಿಸಿ. 

55
ಓಲಾ ಸ್ಕೂಟರ್‌ಗಳ ಆಫರ್

#ಹೈಪರ್‌ಡ್ರೈವ್ ಸೇವೆಯೊಂದಿಗೆ ಒಂದೇ ದಿನದ ಡೆಲಿವರಿ ಮತ್ತು ತ್ವರಿತ ನೋಂದಣಿ. ಪ್ರಸ್ತುತ ಬೆಂಗಳೂರಿನಲ್ಲಿ ಮಾತ್ರ ಲಭ್ಯ. ಇತೆರೆಡೆ ಒಂದೇ ದಿನದಲ್ಲಿ ಡೆಲಿವರಿ ಸಾಧ್ಯವಿಲ್ಲ. ಆದರೆ 40,000 ರೂಪಾಯಿ ಡಿಸ್ಕೌಂಟ್ ಲಭ್ಯವಿದೆ. 

ಸೂಚನೆ: ಓಲಾ ಅಕ್ಷಯ ತೃತೀಯ ಡಿಸ್ಕೌಂಟ್ ಆಫರ್ ಕುರಿತು ಅಧಿಕೃತ ಡೀಲರ್ ಅಥವಾ ವೆಬ್‌ಸೈಟ್ ಮೂಲಕ ಖಚಿತಪಡಿಸಿಕೊಳ್ಳಿ. ಡಿಸ್ಕೌಂಟ್ ಹಾಗೂ ಆಫರ್, ರಾಜ್ಯದಿಂದ ರಾಜ್ಯ, ನಗರದಿಂದ ನಗರಕ್ಕೆ ಬದಲಾಗು ಸಾಧ್ಯತೆ ಇದೆ. 

Read more Photos on
click me!

Recommended Stories