ಹೊಸ ಫೀಚರ್ ಹೊಸ ಕಲರ್ ರಾಯಲ್ ಎನ್‌ಫೀಲ್ಡ್ ಹಂಟರ್ 350 ಲಾಂಚ್, ಬೆಲೆ 1.49 ಲಕ್ಷ ರೂ

Published : Apr 27, 2025, 07:35 PM ISTUpdated : Apr 27, 2025, 07:51 PM IST

ಹೊಚ್ಚ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350 ಲಾಂಚ್ ಆಗಿದೆ. ಹಲವು ಹೊಸತನದೊಂದಿಗೆ ಬಿಡುಗಡೆಯಾದ ಈ ಬೈಕ್ ಕೇವಲ 1.49 ಲಕ್ಷ ರೂಗೆ ಲಭ್ಯವಿದೆ. ಹೊಸ ಹಂಟರ್‌ಗೂ ಈಗಾಗಲೇ ಮಾರುಕಟ್ಟೆಯಲ್ಲಿರುವ ಹಂಟರ್ ಬೈಕ್‌ಗೂ ಇರೋ ವ್ಯತ್ಯಾಸವೇನು?

PREV
17
ಹೊಸ ಫೀಚರ್ ಹೊಸ ಕಲರ್ ರಾಯಲ್ ಎನ್‌ಫೀಲ್ಡ್ ಹಂಟರ್ 350 ಲಾಂಚ್, ಬೆಲೆ 1.49 ಲಕ್ಷ ರೂ

ಮುಂಬೈ(ಏ.27) ರಾಯಲ್ ಎನ್‌ಫೀಲ್ಡ್ ಬೈಕ್ ಎಲ್ಲರಿಗೂ ಇಷ್ಟ. ಅದರಲ್ಲೂ ಹಂಟರ್ 350 ಇದೀಗ ಬಹುತೇಕರ ನೆಚ್ಚಿನ ಬೈಕ್ ಆಗಿ ಹೊರಹೊಮ್ಮಿದೆ. ಮಹಿಳೆಯರೂ ಈ ಬೈಕ್ ಸಲೀಸಾಗಿ ರೈಡ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಹಂಟರ್ ಬೈಕ್ ಮಾರಾಟವಾಗೋ ಮೂಲಕ ಹೊಸ ದಾಖಲೆ ಬರೆದಿದೆ. ಇದರ ಬೆನ್ನಲ್ಲೇ ಇದೀಗ ರಾಯಲ್ ಎನ್‌ಫೀಲ್ಡ್ ತನ್ನ ಹಂಟರ್ 350 ಬೈಕ್‌ನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡಿದೆ. ಇದು 2025ರ ರಾಯಲ್ ಎನ್‌ಫೀಲ್ಡ್ ಹಂಟರ್ 350. ಹಲವು ಹೊಸತನಗಳು ಈ ಬೈಕ್‌ನಲ್ಲಿದೆ. ಇದರ ಬೆಲೆ ಕೇವಲ 1,49,900 ರೂ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ.
 

27

ಸದ್ಯ ಮಾರುಕಟ್ಟೆಯಲ್ಲಿ ಯಾವುದೇ ಸ್ಕೂಟರ್, ಬೈಕ್ ಖರೀದಿಸಬೇಕಾದರೂ 1 ಲಕ್ಷ ರೂ ಸರಾಸರಿಯಾಗಿದೆ. 150 ಸಿಸಿ ಬೈಕ್ ಬೆಲೆ ಸರಾಸರಿ 1.30  ಲಕ್ಷ ರೂ ಮೇಲಿದೆ. ಹೀಗಿರುವಾಗ ರಾಯಲ್ ಎನ್‌ಫೀಲ್ಡ್ ತನ್ನ ಸ್ಟೆಲೀಶ್, ಸುಲಭ ಹಾಗೂ ಅರಾಮದಾಯಕ ರೈಡಿಂಗ್, ಸಿಟಿ ಹಾಗೂ ಲಾಂಗ್ ರೈಡ್‌ಗೆ ಹೇಳಿ ಮಾಡಿಸಿದ ಹಂಟರ್ 350 ಬೈಕ್‌ನ್ನು 1,49,900 ರೂಪಾಯಿ ಆರಂಭಿಕ ಬೆಲೆಯಲ್ಲಿ ನೀಡುತ್ತಿದೆ. ಇದರ ಜೊತೆಗೆ ಹೆಚ್ಚುವರಿ ಫೀಚರ್ಸ್ ಕೂಡ ಲಭ್ಯವಿದೆ.
 

37

ಮುಂಬೈನಲ್ಲಿ ನಡೆದ ಹಂಟರ್‌ ಹುಡ್ ಕಾರ್ಯಕ್ರಮದಲ್ಲಿ ಹಂಟರ್ 350 ಬೈಕ್ ಬಿಡುಗಡೆ ಮಾಡಲಾಗಿದೆ. ಮಹಿಳಾ ಪ್ರಧಾನವಾಗಿದ್ದ ಈ ಕಾರ್ಯಕ್ರಮದಲ್ಲಿ ಮಹಿಳೆಯರ ಡಿಜೆ, ರ್ಯಾಪ್ ಸಾಂಗ್ ಸೇರಿದಂತೆ ಹಲವು ಕಾರ್ಯಕ್ರಮ ಈ ಬಿಡುಗಡೆ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು. ಜೊತೆಗೆ ಹಂಟರ್ 350 ಬೈಕ್ ಎಲ್ಲರ ಆಕರ್ಷಿಸಿತ್ತು. 
 

47

ಹಂಟರ್ 350 ಬೈಕ್ ಬೆಲೆ:
ಹೊಸ ಹಂಟರ್ 350 ಬೈಕ್ ಹಲವು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಆರಂಭಿಕ ಬೆಲೆ 1,49,900 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟಾಪ್ ಮಾಡೆಲ್ ಬೆಲೆ 1,81,750 ರೂಪಾಯಿ(ಎಕ್ಸ್ ಶೋ ರೂಂ).

ಬೇಸ್(ಫ್ಯಾಕ್ಟರಿ ಬ್ಲಾಕ್) 1,49,900 ರೂಪಾಯಿ(ಎಕ್ಸ್ ಶೋರೂಂ)
ಮಿಡ್ (ರಿಯೋ ವೈಟ್, ಡ್ಯಾಪರ್ ಗ್ರೇ) 1,76,750 ರೂಪಾಯಿ(ಎಕ್ಸ್  ಶೋ ರೂಂ)
ಟಾಪ್ (ಟೊಕಿಯೋ ಬ್ಲಾಕ್, ಲಂಡನ್ ರೆಡ್, ರೆಬೆಲ್ ಬ್ಲೂ) 1,81,750 ರೂಪಾಯಿ(ಎಕ್ಸ್ ಶೋ ರೂಂ)
 

57

ಹೊಸ ಹಂಟರ್‌ನಲ್ಲಿರುವ ಫೀಚರ್ಸ್
ಹೊಸ ಹಂಟರ್ ಹೊಚ್ಚ ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ಸ್ ಹೊಂದಿದೆ. ಜೊತೆಗೆ ರೇರ್ ಸಸ್ಪೆನ್ಶನ್ ನವೀಕರಿಸಲಾಗಿದೆ. ಈ ಮೂಲಕ ರೈಡಿಂಗ್ ಕಂಫರ್ಟ್ ನೀಡಲಾಗಿದೆ. ಟೈಪ್ ಸಿ ಫಾಸ್ಟಿಂಗ್ ಚಾರ್ಜಿಂಗ್ ಫೀಚರ್ ನೀಡಲಾಗಿದೆ. ಇದರಿಂದ ಮೊಬೈಲ್ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಿದೆ. ಹ್ಯಾಂಡಲ್‌ಬಾರ್‌ನಲ್ಲಿ ಹೊಸತನ ತರಲಾಗಿದೆ. ಡಿಜಿಟಲ್-ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಲಿಪ್ ಅಸಿಸ್ಟ್ ಕ್ಲಚ್ ಸೇರಿದಂತೆ ಕೆಲ ಹೊಸ ಫೀಚರ್ಸ್‌ನಿಂದ ಸಿಟಿಯ ಟ್ರಾಫಿಕ್ ಹಾಗೂ ಲಾಂಗ್ ರೈಡ್‌ನಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲಾಗಿದೆ. ಇದರಿಂದ ಕುಳಿತುಕೊಳ್ಳುವ ಪೊಸಿಶನ್ ಸೇರಿದಂತೆ ಎಲ್ಲವನ್ನೂ ಅತ್ಯಂತ ಸೂಕ್ಷ್ಮವಾಗಿ ನವೀಕರಿಸಲಾಗಿದೆ.

67

ಗ್ರೌಂಡ್ ಕ್ಲಿಯರೆನ್ಸ್ 10ಎಂಎಂ ಹೆಚ್ಚಿಸಲಾಗಿದೆ. ಇದರಿಂದ ಹೊಸ ಹಂಟರ್ ಒಟ್ಟು 160 ಎಂಎಂ ಗ್ರೌಂಡ್ ಕ್ಲೀಯರೆನ್ಸ್ ನೀಡಲಿದೆ. ಹೀಗಾಗಿ ಗುಂಡಿ ಬಿದ್ದ ರಸ್ತೆಯಲ್ಲೂ ಸಲೀಸಾಗಿ ಸಾಗಲಿದೆ. ಹೊಸ ಹಂಟರ್‌ ಮೂರು ಹೆಚ್ಚುವರಿ ಕಲರ್‌‌ನಲ್ಲಿ ಲಭ್ಯವಿದೆ. ಈ ಪೈಕಿ ರಿಯೋ ವೈಟ್, ಟೊಕಿಯೋ ಬ್ಲಾಕ್ ಹಾಗೂ ಲಂಡನ್ ರೆಡ್ ಹೊಸದಾಗಿ ಬಿಡುಗಡೆಯಾದ ಬಣ್ಣಗಳು. ಇದಕ್ಕೆ ತಕ್ಕಂತೆ ಪೆಟ್ರೋಲ್ ಟ್ಯಾಂಕ್ ಮೇಲೆ ಗ್ರಾಫಿಕ್ಸ್ ವಿನ್ಯಾಸಾ ಮಾಡಲಾಗಿದೆ. ಇದು ಬೈಕ್ ಅಂದ ಮತ್ತಷ್ಟು ಹೆಚ್ಚಿಸಿದೆ.  
 

77

ಹೊಸ ಹಂಟರ್ 350 ಎಂಜಿನ್
ಹೊಚ್ಟ ಹೊಸ ರಾಯಲ್ ಎನ್‌ಫೀಲ್ಡ್ ಹಂಟರ್ 350ಯಲ್ಲಿ ಎಂಜಿನ್‌ನಲ್ಲಿ ಬದಲಾವಣೆ ಇಲ್ಲ. 349 ಸಿಸಿ ಏರ್ ಹಾಗೂ ಆಯಿಲ್ ಕೂಲ್ಡ್, ಜೆ ಸೀರಿಸ್ ಎಂಜಿನ್ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು 20.2 ಬಿಹೆಚ್‌ಪಿ ಪವರ್ ಹಾಗೂ 27 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ರೈಡಿಂಗ್ ವೇಳೆ ಹೆಚ್ಚಿನ ಪವರ್ ಅನುಭವವಾಗಲಿದೆ.

Read more Photos on
click me!

Recommended Stories