ದೀಪಾವಳಿಗೆ ಭರ್ಜರಿ ಕೊಡುಗೆ ಘೋಷಿಸಿದ ಜಾವಾ ಯೆಜ್ಡಿ, 1,888 ರೂ EMI ಸೌಲಭ್ಯ!

First Published | Oct 30, 2023, 3:52 PM IST

ದೀಪಾವಳಿ ಹಬ್ಬಕ್ಕೆ  ಜಾವಾ ಯೆಜ್ಡಿ ಭರ್ಜರಿ ಕೊಡುಗೆ ಘೋಷಿಸಿದೆ. ಹಬ್ಬದ ಋತುವಿನಲ್ಲಿ ಬೈಕ್ ಖರೀದಿಸುವ ಗ್ರಾಹಕರಿಗೆ ಅತೀ ಕಡಿಮೆ ಇಎಂಐ ಸೌಲಭ್ಯ, ವಾರೆಂಟಿ ವಿಸ್ತರಣೆ ಸೇರಿದಂತೆ ಹಲವು ಕೊಡುಗೆ ನೀಡಿದೆ. ಸ್ಪೆಷಲ್ ಆಫರ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ನವರಾತ್ರಿ ಹಬ್ಬದ ಸಂಭ್ರಮ ಮುಗಿದಿದೆ. ಇದೀಗ ದೀಪಾವಳಿ ಹಬ್ಬ. ಇದೇ ವೇಳೆ ಜಾವಾ ಯಜ್ಡಿ ನೂತನ ಬೈಕ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದೆ. ಇದರೊಂದಿಗೆ ಗ್ರಾಹಕರು ಜಾವಾ ಯಜ್ಡಿ ಬೈಕ್ ಸುಲಭವಾಗಿ ತಮ್ಮದಾಗಿಸಿಕೊಳ್ಳಬಹುದು.  

ಆಕರ್ಷಕ ಇಎಂಐಗಳು: ಮೋಟಾರ್ ಸೈಕಲ್ ಉತ್ಸಾಹಿಗಳು ಈಗ ಕೇವಲ 1,888 ರೂ.ಗಳಿಂದ ಪ್ರಾರಂಭವಾಗುವ ʻಇಎಂಐʼಗಳೊಂದಿಗೆ ಇತಿಹಾಸದ ಮೋಟರ್‌ ಸೈಕಲ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು. ʻಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ʼ ಶ್ರೇಣಿಯನ್ನು ವ್ಯಾಪಕ ಶ್ರೇಣಿಯ ಸವಾರರಿಗೆ ಲಭ್ಯವಾಗುವಂತೆ ಈ ಅಭೂತಪೂರ್ವ ಬೆಲೆಯನ್ನು ವಿನ್ಯಾಸಗೊಳಿಸಲಾಗಿದೆ

Tap to resize

ವಿಸ್ತರಿತ ವಾರಂಟಿ: ದೀಪಾವಳಿಯವರೆಗೆ ಮಾಡಿದ ಪ್ರತಿ ಬುಕಿಂಗ್‌ಗೆ ನಾಲ್ಕು ವರ್ಷಗಳ ಅಥವಾ 50,000 ಕಿ.ಮೀ ವಿಶೇಷ ವಿಸ್ತರಿತ ವಾರಂಟಿ ನೀಡಲಾಗುತ್ತದೆ. ಇದು ತನ್ನ ಉತ್ಪನ್ನದ ಮೇಲೆ ಬ್ರಾಂಡ್‌ನ ವಿಶ್ವಾಸವನ್ನು ಪ್ರದರ್ಶಿಸುವುದು ಮಾತ್ರವಲ್ಲದೆ, ಸವಾರರು ತಮ್ಮ ಮೋಟಾರ್ ಸೈಕಲ್‌ಗಳನ್ನು ʻಹೆಚ್ಚುವರಿ ಮನಃಶಾಂತಿʼಯೊಂದಿಗೆ ಆನಂದಿಸುವುದನ್ನು ಖಚಿತಪಡಿಸುತ್ತದೆ.

ಸೀಮಿತ ಅವಧಿ: ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ, ಆದ್ದರಿಂದ ಈ ಅದ್ಭುತ ಕೊಡುಗೆಯ ಲಾಭವನ್ನು ಪಡೆಯಲು ಮೋಟರ್‌ ಸೈಕಲ್‌ ಉತ್ಸಾಹಿಗಳು ತ್ವರಿತವಾಗಿ ಕಾರ್ಯಪ್ರವೃತ್ತರಾಗಬೇಕಿದೆ.
 

ಐಕಾನಿಕ್ ಸರಣಿ: ʻಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ʼ ಸರಣಿಯು ಹಲವಾರು ಐಕಾನಿಕ್ ಮಾದರಿಗಳನ್ನು ಹೊಂದಿದ್ದು, ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಮೋಡಿ ಮತ್ತು ಪಾತ್ರವನ್ನು ಹೊಂದಿದೆ. ಪ್ರತಿಯೊಬ್ಬ ಸವಾರನ ಶೈಲಿ ಮತ್ತು ಆದ್ಯತೆಗೆ ಸರಿಹೊಂದುವಂತೆ ಈ ಬೈಕ್‌ಗಳನ್ನು ರೂಪಿಸಲಾಗಿದೆ.
 

ಪಾರಂಪರಿಕ: ʻಜಾವಾʼ ಮತ್ತು ʻಯೆಜ್ಡಿ ಮೋಟಾರ್ ಸೈಕಲ್ʼಗಳು ದಶಕಗಳಿಂದ ಭಾರತೀಯ ಮೋಟಾರ್ ಸೈಕ್ಲಿಂಗ್ ಸಂಸ್ಕೃತಿಯ ಒಂದು ಭಾಗವಾಗಿವೆ. ಈ ʻಕ್ಲಾಸಿಕ್ʼ ಬೈಕ್‌ ಅನ್ನು ಹೊಂದುವುದೆಂದರೆ ಅದು ಒಂದು ಮೋಟಾರ್‌ ಸೈಕಲ್‌ ಖರೀದಿಸಿದಂತಲ್ಲ; ಇದರ ಮಾಲೀಕರು ಶ್ರೀಮಂತ ಪರಂಪರೆಯೊಂದರ ಭಾಗವಾಗುತ್ತಾರೆ.

ʻಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ʼ ಸರಣಿಯು ತನ್ನ ಅಪ್ರತಿಮ ವಿನ್ಯಾಸ, ಅಸಾಧಾರಣ ಕಾರ್ಯಕ್ಷಮತೆ ಮತ್ತು ದಶಕಗಳ ಹಿಂದಿನ ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿದೆ. ಈ ವಿಶೇಷ ಕೊಡುಗೆಯೊಂದಿಗೆ, ಬ್ರಾಂಡ್ ತನ್ನ ಪಾರಂಪರಿಕ ಮೋಟಾರ್ ಸೈಕಲ್‌ಗಳನ್ನು ವ್ಯಾಪಕ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುವುದರ ಜೊತೆಗೆ, ಅವರಿಗೆ ʻಹೆಚ್ಚುವರಿ ಮನಃಶಾಂತಿʼ ನೀಡುವ ಗುರಿಯನ್ನು ಹೊಂದಿದೆ.  

ʻಜಾವಾʼ ಬೈಕ್ ಸರಣಿಯು ʻಜಾವಾʼ, ʻಜಾವಾ 42ʼ, ʻಜಾವಾ 42 ಬಾಬ್ಬರ್ʼ ಮತ್ತು ʻಜಾವಾ ಪೆರಾಕ್ʼ ಬೈಕ್‌ಗಳನ್ನು ಒಳಗೊಂಡಿದೆ. ʻಯೆಜ್ಡಿ ಮೋಟಾರ್ ಸೈಕಲ್ʼ ಸರಣಿಯು ʻಯೆಜ್ಡಿ ರೋಸ್ಟರ್ʼ, ʻಯೆಜ್ಡಿ ಸ್ಕ್ರಾಂಬ್ಲರ್ʼ ಮತ್ತು ʻಯೆಜ್ಡಿ ಅಡ್ವೆಂಚರ್ʼ ಬೈಕುಗಳನ್ನು ಒಳಗೊಂಡಿದೆ.

Latest Videos

click me!