ಬೆಂಗಳೂರು ಮೂಲದ ಒಬೆನ್ ಇವಿ ಬೈಕ್ ಭಾರಿ ಬೇಡಿಕೆ ವ್ಯಕ್ತವಾಗಿದೆ. ಬರೋಬ್ಬರಿ 25000 ಬೈಕ್ ಬುಕಿಂಗ್ ಆಗಿದೆ. ವಿಶೇಷ ಅಂದರೆ 15 ದಿನದಲ್ಲಿ 25000 ಬೈಕ್ ಬುಕಿಂಗ್ ಆಗಿದೆ. ಇದರ ಬೆಲೆ ಇತರ ಪೆಟ್ರೋಲ್ ಬೈಕ್‌ಗಳಿಂತ ಅತೀ ಕಡಿಮೆ.
ಓಬೆನ್ ಎಲೆಕ್ಟ್ರಿಕ್ ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಕಂಪನಿ. ಈಗಾಗಲೇ ಹಲವು ಇವಿ ಬೈಕ್‌ಗಹಳನ್ನು ಒಬೆನ್ ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಇದೀಗ ಒಬೆನ್ ರೋರ್ Evo ಬೈಕ್ ಭಾರಿ ಬೇಡಿಕೆ ಪಡೆದುಕೊಂಡಿದೆ. ಬಿಡುಗಡೆಯಾದ 15 ದಿನಗಳಲ್ಲಿ ಬೈಕ್ ಬರೋಬ್ಬರಿ 25,000 ಬುಕಿಂಗ್ ಪಡೆದುಕೊಂಡಿದೆ. ಇದೀಗ 90 ನಗರ ಹಾಗೂ ಪಟ್ಟಣಗಳಲ್ಲಿ ಡೆಲಿವರಿ ಆರಂಭಗೊಂಡಿದೆ.
25
ಓಬೆನ್ ರೋರ್ Evo ಬೈಕ್ ಬೆಲೆ ಎಷ್ಟು?
ಬಹುತೇಕರು ಇದೀಗ ಇವಿಯತ್ತ ವಾಲುತ್ತಿದ್ದಾರೆ. ಈ ಪೈಕಿ ಒಬೆನ್ ಎಲೆಕ್ಟ್ರಿಕ್ ಬೈಕ್ ಖರೀದಿಸಲು ಜನರು ಮುಂದಾಗುತ್ತಿದ್ದಾರೆ. ಕಾರಣ ಇದರ ಪರ್ಫಾಮೆನ್ಸ್, ಮೈಲೇಜ್ ಹಾಗೂ ಬೆಲೆ. ಈ ಪೈಕಿ ಒಬೆನ್ ರೋರ್ Evo ಬೈಕ್ ಆರಂಭಿಕ ಬೆಲೆ 1.25 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಈ ಬೆಲೆಗೆ ಇತರ ಯಾವುದೇ ಬೈಕ್ ಖರೀದಿಸುವುದು ಕಷ್ಟವಾಗಲಿದೆ.
35
ರೋರ್ Evo ಬೈಕ್ ಮೇಲೇಜ್ ಎಷ್ಟಿದೆ?
ಒಬೋನ್ Evo ಬೈಕ್ ಒಂದು ಬಾರಿ ಚಾರ್ಜ್ ಮಾಡಿದರೆ 180 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದು IDC ಸರ್ಟಿಫೈಡ್ ರೇಂಜ್. ಇನ್ನು ಬೈಕ್ ಟಾಪ್ ಸ್ಪೀಡ್ 110 ಕಿಲೋಮೀಟರ್ ಪ್ರತಿ ಗಂಟೆಗೆ. 0-40 ಕಿಲೋಮೀಟರ್ ಸ್ಪೀಡ್ ಕೇವಲ 3 ಸೆಕೆಂಡ್‌ನಲ್ಲಿ ತಲುಪಲಿದೆ.
ಒಬೆನ್ ಎಲೆಕ್ಟ್ರಿಕ್ ರೋರ್ Evo ಬೈಕ್ ಬ್ಯಾಟರಿ 8 ವರ್ಷಗಳ ವಾರೆಂಟಿ ಇದೆ. ಈ ಸೆಗ್ಮೆಂಟ್‌ನಲ್ಲಿ ಗರಿಷ್ಠ ವರ್ಷಗಳ ವಾರೆಂಟಿ ಇದಾಗಿದೆ. ಇತ್ತ ಶೇಕಡಾ 80ರಷ್ಟು ಚಾರ್ಜ್ ಫಾಸ್ಟ್ ಚಾರ್ಜಿಂಗ್ ಮೂಲಕ 90 ನಿಮಿಷದಲ್ಲಿ ಆಗಲಿದೆ. ಬೈಕ್‌ನಲ್ಲಿ 3.4kWh ಲೀಥಿಯಂ ಐಯನ್ ಬ್ಯಾಟರಿ ಬಳಸಲಾಗಿದೆ.12.06 hp ಮೋಟರ್ ನೀಡಲಾಗಿದ್ದು, ಉತ್ತಮ ಪರ್ಫಾಮೆನ್ಸ್ ನೀಡಲಿದೆ.
55
ರೋರ್ Evo ಬೈಕ್ ಫೀಚರ್ಸ್
ಬೈಕ್‌ನಲ್ಲಿ ಮೊಬೈಲ್ ಚಾರ್ಜಿಂಗ್ ಸ್ಲಾಟ್ ಹಾಗೂ ಸ್ಪೇಸ್, 5 ಇಂಚಿನ TFT ಡಿಸ್‌ಪ್ಲೇ, ಚಕ್ರದ ಏರ್ ಅಪ್‌ಡೇಟ್, ನ್ಯಾವಿಗೇಶನ್, ಜಿಯೋ ಫೆನ್ಸಿಂಗ್, ಎಮರ್ಜೆನ್ಸಿ ಎಸ್ಒಎಸ್, ಒಬೆನ್ ARGUS ಕೆನೆಕ್ಟೆಡ್ ಫೀಚರ್ಸ್, ಎಐ ಬೇಸ್ ರೈಡ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.