ಗ್ರಾಹಕರು ಅಮೆಜಾನ್‌ನಲ್ಲಿ ಪ್ರೈಮ್ ಡೇ ಆಫರ್‌ಗಳೊಂದಿಗೆ ಎಕ್ಸ್-ಶೋರೂಮ್ ಮೊತ್ತವನ್ನು ಪಾವತಿಸಿ ಬೈಕ್ ಬುಕ್ ಮಾಡಬೇಕು. ಆ ಬಳಿಕ ಹತ್ತಿರದ ಅಧಿಕೃತ ಡೀಲರ್ ನಿಮ್ಮನ್ನು ಸಂಪರ್ಕಿಸಿ, ಆನ್-ರೋಡ್ ಬೆಲೆ, ವಿಮೆ ಹಾಗೂ ನೋಂದಣಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಾರೆ. ಆಕ್ಸೆಸರಿಗಳನ್ನು ಶೋರೂಮ್‌ನಲ್ಲೇ ಖರೀದಿಸಿ, ಅಲ್ಲಿಂದಲೇ ನಿಮ್ಮ ನೆಚ್ಚಿನ ಬೈಕ್ ಡೆಲಿವರಿ ಪಡೆಯಬಹುದು.
ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಗ್ರಾಹಕರಿಗೆ ಚಿಂತೆರಹಿತ ಮಾಲೀಕತ್ವದ ಭರವಸೆಯನ್ನೂ ನೀಡುತ್ತದೆ.
* 4 ವರ್ಷ ಅಥವಾ 50,000 ಕಿ.ಮೀ. ವರೆಗಿನ ಸ್ಟ್ಯಾಂಡರ್ಡ್ ವಾರಂಟಿ.
* 6 ವರ್ಷಗಳವರೆಗೆ ವಿಸ್ತರಿತ ವಾರಂಟಿ ಆಯ್ಕೆಗಳು.
* 8 ವರ್ಷಗಳವರೆಗೆ ರೋಡ್‌ಸೈಡ್ ಅಸಿಸ್ಟೆನ್ಸ್ ಸೇವೆ.
ದೇಶಾದ್ಯಂತ ಇರುವ 400 ಕ್ಕೂ ಹೆಚ್ಚು ಸರ್ವೀಸ್ ಸೆಂಟರ್‌ಗಳಲ್ಲಿ 5 ವರ್ಷಗಳವರೆಗೆ ಎಎಂಸಿ ಸೇವೆ ಲಭ್ಯವಿದೆ.