29,900 ರೂನಿಂದ ಆರಂಭ, 100 ಕಿ.ಮೀ ಮೈಲೇಜ್, ನೆಕ್ಸ್‌ಝು ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ!

First Published | Mar 23, 2024, 5:34 PM IST

ನೆಕ್ಸ್‌ಝು ಹೊಚ್ಚ ಹೊಸ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡಿದೆ. ಇದರ ಬೆಲೆ 29,900 ರೂಪಾಯಿಯಿಂದ ಆರಂಭಗೊಳ್ಳುತ್ತದೆ. ಗರಿಷ್ಠ 100 ಕಿ.ಮೀ ಮೈಲೇಜ್ ನೀಡಲಿದೆ. ನಾಲ್ಕು ವೇರಿಯೆಂಟ್ ಎಲೆಕ್ಟ್ರಿಕ್ ಸೈಕಲ್ ಮಾಹಿತಿ ಇಲ್ಲಿದೆ.

ಎಲೆಕ್ಟ್ರಿಕ್ ಸೈಕಲ್ ಇದೀಗ ಬೇಡಿಕೆ ಪಡೆದುಕೊಳ್ಳುತ್ತಿದೆ. ಪರಿಸರಕ್ಕೆ ಪೂರಕ ಹಾಗೂ ನಗರ ಪ್ರದೇಶಗಳ ಸಾರಿಗೆ ಸಂಪರ್ಕವಾಗಿ ಎಲೆಕ್ಟ್ರಿಕ್ ಸೈಕಲ್ ಮಾರುಕಟ್ಟೆ ವಿಸ್ತರಣೆಗೊಳ್ಳುತ್ತಿದೆ. ಇದೀಗ ನೆಕ್ಸ್‌ಝು ಕಂಪನಿ ಹೊಚ್ಚ ಹೊಸ 4 ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ ಮಾಡಿದೆ.
 

5.2 ಎಎಚ್ ನಿಂದ ಆರಂಭಿಸಿ 14.5 ಎಎಚ್ ವರೆಗೆ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವ ಸ್ವಾಪ್(ವಿನಿಮಯ) ಬ್ಯಾಟರಿಗಳನ್ನು ಹೊಂದಿವೆ. ರಾಂಪಸ್ ಪ್ಲಸ್, ಬಝಿಂಗಾ, ರೋಡ್‌ಲಾರ್ಕ್ ಸೇರಿದ 4 ಮಾಡೆಲ್ ಬಿಡುಗಡೆಯಾಗಿದೆ.
 

Tap to resize

ರೋಡ್‌ಲಾರ್ಕ್ ಮತ್ತು ಬಝಿಂಗಾ ಶ್ರೇಣಿಯ ಇವಿ- ಸೈಕಲ್‌ಗಳು ಈಗ 5.2 ಎಎಚ್, 8.7 ಎಎಚ್ ಮತ್ತು 14.5 ಎಎಚ್ ನ 3 ವಿಭಿನ್ನ ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಹೊಂದಿದ್ದು, ಇದು ಕ್ರಮವಾಗಿ 30 ಕಿಮೀ, 45 ಕಿಮೀ ಮತ್ತು 100 ಕಿಮೀ ರೇಂಜ್ ಅನ್ನು ಒದಗಿಸುತ್ತದೆ. ಪರಿಷ್ಕೃತ ಬ್ಯಾಟರಿ ಆಯ್ಕೆಗಳ ಮೂಲಕ, ಗ್ರಾಹಕರು ಈಗ ತಮ್ಮ ಅವಶ್ಯಕತೆಯ ಆಧಾರದ ಮೇಲೆ ಇವಿ ಸೈಕಲ್‌ಗಳನ್ನು ಖರೀದಿಸಲು ಆಯ್ಕೆ ಮಾಡಬಹುದು.

ಎಲ್ಲಾ ಮೂರು ಬ್ಯಾಟರಿಗಳ ಆಯ್ಕೆಗಳು ಸ್ವ್ಯಾಪ್ (ವಿನಿಮಯ) ಮಾಡಿಕೊಳ್ಳಬಹುದಾದ ಮತ್ತು ಬ್ಯಾಟರಿಗಳನ್ನು ಸುಲಭವಾಗಿ ಮನೆಗೆ ಸಾಗಿಸಿ ಚಾರ್ಜ್‌ಗೆ ತೆಗೆದುಕೊಂಡು ಹೋಗಬಹುದಾದ ಹೆಚ್ಚುವರಿ ಅನುಕೂಲತೆಗಳ ಜೊತೆಗೆ ಲಭ್ಯವಾಗಲಿದೆ. ಇದರೊಂದಿಗೆ, ಎತ್ತರದ ಪ್ರದೇಶದಲ್ಲಿ ವಾಸಿಸುವ ಹೆಚ್ಚಿನ ಜನರು ಎಲೆಕ್ಟ್ರಿಕ್ ಸೈಕಲ್ ಗಳನ್ನು ಬಳಸಿಕೊಳ್ಳಬಹುದಾಗಿದೆ.
 

ಈ ಎಲೆಕ್ಟ್ರಿಕ್ ಸೈಕಲ್ ಬೆಲೆ 29,900 ರೂಪಾಯಿಯಿಂದ ಆರಂಭಗೊಳ್ಳುತ್ತದೆ. ಗರಿಷ್ಠ ಬೆಲೆ 39,950 ರೂಪಾಯಿ. ಬ್ಯಾಟರಿಗೆ ಅನುಗುಣವಾಗಿ ಬೆಲೆಗಳು ಬದಲಾಗುತ್ತದೆ. ಇದರ ಜೊತೆಗೆ ಹೆಚ್ಚುವರಿ ಆ್ಯಕ್ಸಸರೀಸ್ ಕೂಡ ಲಭ್ಯವಿದೆ.
 

ಇದು ಸಮಸ್ಯೆ ಮುಕ್ತ ದೈನಂದಿನ ಪ್ರಯಾಣವನ್ನು ಸುಲಭ ಮಾಡಲು ವಿನ್ಯಾಸಗೊಳಿಸಲಾಗಿದೆ. ತ್ವರಿತ ವಾಣಿಜ್ಯ ಕಂಪನಿಗಳಿಗೆ ಕಾರ್ಯಾಚರಣೆಯ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡಲು ರೂ.1750ರ ಹೆಚ್ಚುವರಿ ವೆಚ್ಚದಲ್ಲಿ ರೋಡ್‌ಲಾರ್ಕ್ ಮತ್ತು ಬಝಿಂಗಾ ಸಹ ಸರಕು ಆಯ್ಕೆಯೊಂದಿಗೆ ಲಭ್ಯವಿದೆ.
 

ಆಕರ್ಷಕ ಬೆಲೆಯಲ್ಲಿ ಸ್ವ್ಯಾಪ್ ಮಾಡಬಹುದಾದ ಬ್ಯಾಟರಿಗಳನ್ನು ಪರಿಚಯಿಸುವ ಮೂಲಕ, ಇವಿ ಸೈಕಲ್ ಪ್ರಸ್ತುತ ಇವಿ 2ಡಬ್ಲ್ಯೂ ಉದ್ಯಮದಲ್ಲಿನ ಅತ್ಯಂತ ಲಾಭದಾಯಕ ಉತ್ಪನ್ನ ಆಗಿದೆ ಎಂದು ನೆಕ್ಸ್‌ಝು ಮೊಬಿಲಿಟಿಯ ಬಿಸಿನೆಸ್ ಹೆಡ್ ಚಿಂತಾಮಣಿ ಸರ್ದೇಸಾಯಿ ಹೇಳಿದ್ದಾರೆ.
 

ಬಝಿಂಗಾ ಪುರುಷ ಮತ್ತು ಸ್ರ್ತೀಯರು ಇಬ್ಬರೂ ಬಳಸಬಹುದಾದ ಉತ್ಪನ್ನವಾಗಿದ್ದು, ಆಧುನಿಕ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ರಚಿಸಲಾಗಿದೆ ಮತ್ತು ವಿನ್ಯಾಸಗೊಳಿಸಲಾಗಿದೆ. ಈ ಉತ್ಪನ್ನ ಅನೇಕ ವೈಶಿಷ್ಟ್ಯಗಳೊಂದಿಗೆ ಅಪೂರ್ವ ಸೌಂದರ್ಯವನ್ನು ಹೊಂದಿದೆ. ರೋಡ್‌ಲಾರ್ಕ್ ಕ್ರೀಡಾ ಚಟುವಟಿಕೆಗಳಿಗಾಗಿಯೇ ನಗರದಲ್ಲಿರುವ ಪುರುಷ ಗ್ರಾಹಕರನ್ನು ಗುರಿಯಾಗಿಸಿಕೊಂಡು ತಯಾರಿಸಲಾಗಿದೆ ಎಂದಿದ್ದಾರೆ. 

Latest Videos

click me!