ಆಕರ್ಷಕ ಬೆಲೆಯಲ್ಲಿ ಹೊಚ್ಚ ಹೊಸ ಡ್ಯುಯೆಲ್ ಟೋನ್ ಜಾವಾ ಪೆರಾಕ್ ಬೈಕ್ ಬಿಡುಗಡೆ!

First Published Apr 11, 2024, 7:06 PM IST

ಜಾವಾ ಯೆಜ್ಡಿ ಮೋಟಾರ್‌ಸೈಕಲ್ ಕೈಗೆಟುವ ಬೆಲೆಯಲ್ಲಿ ಬಾಬರ್ ಬೈಕ್ ಬಿಡುಗಡೆ ಮಾಡಿದೆ. ಇದೀಗ ಡ್ಯುಯೆಲ್ ಟೋನ್ ಕಲರ್‌ನಲ್ಲಿ ಹೊಸ ಬೈಕ್ ಬಿಡುಗಡೆಯಾಗಿದೆ. ಹೊಸ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 

ಹೊಸ ಡ್ಯುಯೆಲ್ ಟೋನ್ ಬಣ್ಣದಲ್ಲಿ  ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಕಂಪನಿ ತನ್ನ ಪ್ರಮುಖ ಉತ್ಪನ್ನವಾದ ಜಾವಾ ಪೆರಾಕ್  ಬೈಕ್ ಬಿಡುಗಡೆ ಮಾಡಿದೆ. ಈ ಪೆರಾಕ್ ಹೊಸ ಫಾರ್ವರ್ಡ್- ಸೆಟ್ ಫೂಟ್ ಪೆಗ್‌ ಮತ್ತು ಸುಧಾರಿತ ಮೊನೊ-ಶಾಕ್ ಗಳನ್ನು ಹೊಂದಿದೆ. ಹೊಸ ಜಾವಾ 42 ಬಾಬರ್ ಈಗ ರೂ 2.09 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ಬೆಲೆಯಲ್ಲಿ ಲಭ್ಯವಿದೆ. ಹೊಸ ಅಲಾಯ್ ವೀಲ್ ವೇರಿಯಂಟ್ ಗಳು ಕೂಡ ದೊರೆಯುತ್ತದೆ.
 

ಜಾವಾ ಪೆರಾಕ್ ಮತ್ತು ವಿವಿಧ ಜಾವಾ 42 ಬಾಬರ್ ವೇರಿಯಂಟ್ ಬೆಲೆ
ಜಾವಾ ಪೆರಾಕ್: ರೂ. 2,13,187
ಜಾವಾ 42 ಬಾಬರ್ - ಮೂನ್‌ಸ್ಟೋನ್ ವೈಟ್: ರೂ 2,09,500
ಜಾವಾ 42 ಬಾಬರ್ - ಮಿಸ್ಟಿಕ್ ಕಾಪರ್ ಸ್ಪೋಕ್ ವೀಲ್: ರೂ 2,12,500
ಜಾವಾ 42 ಬಾಬರ್ - ಮಿಸ್ಟಿಕ್ ಕಾಪರ್ ಅಲಾಯ್ ವೀಲ್: ರೂ 2,18,900
ಜಾವಾ 42 ಬಾಬರ್ - ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಸ್ಪೋಕ್ ವೀಲ್: ರೂ 2,15,187
ಜಾವಾ 42 ಬಾಬರ್ - ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಅಲಾಯ್ ವೀಲ್: ರೂ 2,19,950
ಜಾವಾ 42 ಬಾಬರ್ – ಬ್ಲ್ಯಾಕ್ ಮಿರರ್ : ರೂ. 2,29,500
 

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಕಂಪನಿಯು ಅದರ ಸಾಂಪ್ರದಾಯಿಕ ಮಾಡೆಲ್ ಗಳಾದ ಜಾವಾ ಪೆರಾಕ್ ಮತ್ತು ಜಾವಾ 42 ಬಾಬರ್‌ಗಳ ಜೊತೆಗೆ ಬಾಬರ್ ವಿಭಾಗವನ್ನು ಮರುಪರಿಷ್ಕರಣೆ ಗೊಳಿಸುವ ಪ್ರಕ್ರಿಯೆಯನ್ನು ಮುಂದುವರಿಸಿದೆ. ಈ ಬೈಕ್‌ಗಳು ಭಾರತದಲ್ಲಿ ಬಾಬರ್ ಸಂಸ್ಕೃತಿಯನ್ನು ಪರಿಚಯಿಸಿದ್ದು ಮಾತ್ರವಲ್ಲದೆ ಅತ್ಯುಪೂರ್ವ ಸ್ಟೈಲ್ ಮತ್ತು ಅತ್ಯುತ್ತಮ ಸಾಹಸಮಯ ಕಾರ್ಯಕ್ಷಮತೆಯನ್ನು ಮೆಚ್ಚುವ ಉತ್ಸಾಹಿಗಳ ವಲಯದಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ.

ಸ್ಟೈಲ್ ಮತ್ತು ಕಾರ್ಯಕ್ಷಮತೆ ಎರಡಕ್ಕೂ ಆದ್ಯತೆ ನೀಡುವ ರೈಡರ್‌ಗಳನ್ನು ಗಮನದಲ್ಲಿ ಇರಿಸಿಕೊಂಡು ರೂಪುಗೊಂಡಿರುವ ಬಾಬರ್ ತನ್ನ ವಿಶಿಷ್ಟ ಆಕರ್ಷಣೆಯಿಂದಲೇ ಭಾರಿ ಜನಪ್ರಿಯತೆ ಗಳಿಸಿದೆ. ಜಾವಾ ಪೆರಾಕ್ ಮತ್ತು ಜಾವಾ 42 ಬಾಬರ್ ಈ ವಿಭಾಗದಲ್ಲಿ ರೈಡರ್ ಗಳಿಗೆ ಅತ್ಯುತ್ತಮ ಅನುಭವವನ್ನು ಒದಗಿಸುತ್ತವೆ. 

ಹೆರಿಟೇಜ್ ಸಂಗ್ರಹದ 2024ರ ಜಾವಾ ಪೆರಾಕ್ ಬೈಕ್ ಪ್ರೀಮಿಯಂ ಬಾಬರ್ ವಿಭಾಗದಲ್ಲಿ ಅದರ ಉತ್ತಮ ಫಿಟ್ ಆಂಡ್ ಫಿನಿಶ್ ಸ್ಟೈಲ್ ನಿಂದ, ಅತ್ಯುತ್ತಮ ರೈಡಿಂಗ್ ಕಾರ್ಯಕ್ಷಮತೆ ಮತ್ತು ಕಾಲಕ್ಕೆ ತಕ್ಕಂತೆ ಇರುವ ವಿನ್ಯಾಸದಿಂದ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ.
 

ಹೊಸ ಜಾವಾ ಪೆರಾಕ್ ಆಕರ್ಷಕ ಸ್ಟೆಲ್ತ್ ಮ್ಯಾಟ್ ಬ್ಲ್ಯಾಕ್/ ಮ್ಯಾಟ್ ಗ್ರೇ ಡ್ಯುಯಲ್- ಟೋನ್ ಸ್ಕೀಮ್ ಅನ್ನು ಹೊಂದಿದ್ದು, ಇದು ಡೀಟೇಲಿಂಗ್ ಕಡೆಗೆ ಹೆಚ್ಚಿನ ಗಮನವನ್ನು ನೀಡಿದೆ. ಈ ಬೈಕ್ ಗಳು ಅಧಿಕೃತ ಹಳೆಯ ವಿನ್ಯಾಸವನ್ನು ನೆನಪಿಸುವ ಸುಂದರವಾಗಿ ರಚಿಸಲಾಗಿರುವ ಹಿತ್ತಾಳೆಯ ಟ್ಯಾಂಕ್ ಬ್ಯಾಡ್ಜಿಂಗ್ ಮತ್ತು ಇಂಧನ ತುಂಬುವ ಕ್ಯಾಪ್ ಅನ್ನು ಒಳಗೊಂಡಿದೆ.
 

ಜೊತೆಗೆ ಹೆಚ್ಚಿನ ಸೌಕರ್ಯ ಒದಗಿಸಲು ಕ್ಲಾಸಿಕ್ ಶೈಲಿಯ ಕ್ವಿಲ್ಟೆಡ್ ಟ್ಯಾನ್ ಸೀಟ್ ಅನ್ನು ಕೂಡ ಹೊಂದಿದೆ. ಫಾರ್ವರ್ಡ್- ಸೆಟ್ ಫೂಟ್ ಪೆಗ್‌, 155 ಎಂಎಂ ಫಾರ್ವರ್ಡ್‌ ಗಳ ಪರಿಚಯದಿಂದಾಗಿ ಇವುಗಳ ಒಟ್ಟಾರೆ ರೈಡಿಂಗ್ ಅನುಭವ ಮತ್ತಷ್ಟು ಆನಂದದಾಯಕವಾಗಲಿದೆ

ಮಿಸ್ಟಿಕ್ ಕಾಪರ್ ಮತ್ತು ಜಾಸ್ಪರ್ ರೆಡ್ ಡ್ಯುಯಲ್-ಟೋನ್ ವೇರಿಯಂಟ್ ಗಳು ಈಗ ಪ್ರೀಮಿಯಂ ಡೈಮಂಡ್-ಕಟ್ ಅಲಾಯ್ ವೀಲ್ ಗಳೊಂದಿಗೆ ಲಭ್ಯವಿದೆ. ಎಲ್ಇಡಿ ಲೈಟಿಂಗ್, ಡಿಜಿಟಲ್ ಇನ್ಸ್ಟ್ರುಮೆಂಟೇಶನ್, ಯುಎಸ್‌ಬಿ ಚಾರ್ಜಿಂಗ್, ಅಡ್ಜಸ್ಟೇಬಲ್ ಸೀಟ್ ಮತ್ತು ಬಹು ಲಗ್ಗೇಜ್ ಆಯ್ಕೆಗಳಂತಹ ಆಧುನಿಕ ಫೀಚರ್ ಗಳ ಸಂಪೂರ್ಣ ಲಭ್ಯತೆ ಹೊಂದಿರುವ 42 ಬಾಬರ್ ಕಾರ್ಯನಿರ್ವಹಣೆ ಮತ್ತು ಸ್ಟೈಲಿನ ಮಧ್ಯೆ ಅತ್ಯುತ್ತಮ ಸಮತೋಲನ ಹೊಂದಿದೆ
 

click me!