ಭಾರತದಲ್ಲಿ ದ್ವಿಚಕ್ರ ವಾಹನಕ್ಕೆ ಭಾರಿ ಬೇಡಿಕೆ. ಬಹುತೇಕರ ಸಾರಿಗೆ ಸಂಪರ್ಕ ಇದೇ ಆಗಿದೆ. ಈ ಪೈಕಿ ಯುವ ಸಮೂಹ ಹೆಚ್ಚಾಗಿ ಸ್ಪೋರ್ಟಿ ಬೈಕ್ ಖರೀದಿಸಲು ಬಯಸುತ್ತಿದೆ.
ಸ್ಪೋರ್ಟ್ಸ್ ಬೈಕ್ ಬೆಲೆ ದುಬಾರಿ. ಆದರೆ ಕೈಗೆಟುಕುವ ದರದಲ್ಲಿ ಸ್ಪೋರ್ಟಿ ಲುಕ್ ಹೊಂದಿರುವ ಬೈಕ್‌ಗಳು ಭಾರತದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಬೈಕ್ ಬೇಡಿಕೆ ಇದೀಗ ಹೆಚ್ಚಾಗಿದೆ.
85 ಸಾವಿರ ರೂಪಾಯಿಂದ ಆರಂಭಗೊಂಡು 1.3 ಲಕ್ಷ ರೂಪಾಯಿ ಒಳಗೆ ಲಭ್ಯವಿರುವ ಅತ್ಯುತ್ತಮ ಸ್ಪೋರ್ಟಿ ಬೈಕ್ ವಿವರ ಇಲ್ಲಿ ನೀಡಲಾಗಿದೆ. ಈ ಬೈಕ್ ಭಾರತದಲ್ಲಿ ಭಾರಿ ಬೇಡಿಕೆ ಬೈಕ್ ಆಗಿವೆ.
ಹೀರೋ ಎಕ್ಸ್‌ಸ್ಟ್ರೀಮ್ 160R ಸಿಂಗಲ್ ಡಿಸ್ಕ್ ಬೈಕ್ ಅತ್ಯಂತ ಆಕರ್ಷಕವಾಗಿದೆ. ಸ್ಪೋರ್ಟ್ ಲುಕ್ ಜೊತೆಗೆ ಪರ್ಫಾಮೆನ್ಸ್ ಕೂಡ ಉತ್ತಮವಾಗಿದೆ. ಇದರ ಬೆಲೆ 1,21,636 ರೂಪಾಯಿ(ಎಕ್ಸ್ ಶೋ ರೂಂ)
ಸ್ಪೋರ್ಟಿ ಲುಕ್ ಹೊಂದಿರು ಬೈಕ್ ಪೈಕಿ ಟಿವಿಎಸ್ ಅಪಾಚೆ RTR 160 ಬೈಕ್ 159.7 cc ಎಂಜಿನ್ ಹೊಂದಿದೆ. ಈ ಬೈಕ್ ಬೆಲೆ 1,22,920(ಎಕ್ಸ್ ಶೋ ರೂಂ). ಸಿಂಗಲ್ ಚಾನೆಲ್ ಎಬಿಎಸ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ
ಹೋಂಡಾ SP 125 ಡ್ರಮ್ ವೇರಿಯೆಂಟ್ ಬೈಕ್ ಕೂಡ ಅತ್ಯುತ್ತಮ ಸ್ಪೋರ್ಟಿ ಲುಕ್ ಹೊಂದಿದೆ. 123.94 cc ಎಂಜಿನ್ ಹೊಂದಿರುವ ಈ ಬೈಕ್ ಬೆಲೆ 86,017 ರೂಪಾಯಿ(ಎಕ್ಸ್ ಶೋ ರೂಂ)
ಬಜಾಜ್ ಪಲ್ಸರ್ 150 ಸಿಂಗಲ್ ಡಿಸ್ಕ್ ವೇರಿಯೆಂಟ್ ಬೈಕ್ ಹೆಚ್ಚು ಸ್ಟೈಲೀಶ್ ಆಗಿದ್ದು, 149.5 cc ಎಂಜಿನ್ ಹೊಂದಿದೆ. ಈ ಬೈಕ್ ಬೆಲೆ 1,10,419 ರೂಪಾಯಿ(ಎಕ್ಸ್ ಶೋ ರೂಂ)
ಬಜಾಜ್ ಅವೆಂಜರ್ ಸ್ಟ್ರೀಟ್ 160 ಬೈಕ್ 160 cc ಎಂಜಿನ್ ಹೊಂದಿದೆ. ಕ್ರೂಸ್ ಸ್ಟೈಲ್ ಬೈಕ್ ಸ್ಪೋರ್ಟೀವ್ ಲುಕ್ ಹೊಂದಿದೆ. ಈ ಬೈಕ್ ಬೆಲೆ 1,16,832 ರೂಪಾಯಿ(ಎಕ್ಸ್ ಶೋ ರೂಂ)