ಫ್ಲಿಪ್‌ಕಾರ್ಡ್ ಬಿಗ್ ಬಿಲಿಯನ್ ಡೇಸ್ ಮೂಲಕ ಬೈಕ್ ಖರೀದಿಸುವ ಗ್ರಾಹಕರಿಗೆ ಜಾವಾ ಯೆಝಡಿ ಕಂಪನಿ ಕಡೆಯಿಂದ 4 ವರ್ಷ ಅಥವಾ 50,000 ಕಿಲೋಮೀಟರ್ ವಾರೆಂಟಿ, 4 ವರ್ಷ ಲೇಬರ್ ಫ್ರೀ ಸರ್ವೀಸ್ ಸೇರಿದಂತೆ ಹಲವು ಸೌಲಭ್ಯಗಳನ್ನೂ ನೀಡುತ್ತಿದೆ. ದೇಶದ ಪೂರ್ವ ಭಾಗದಲ್ಲಿ 14,000 ರೂಪಾಯಿ ಮೌಲ್ಯದ ಉಚಿತ ರೋಡ್ ಸೈಡ್ ಅಸಿಸ್ಟೆನ್ಸ್, 1,500 ರೂಪಾಯಿ ಹಾಗೂ 2,500 ರೂಪಾಯಿ ಆ್ಯಕ್ಸೆಸರಿ ಉಚಿತವಾಗಿ ಸಿಗಲಿದೆ. ಇದರ ಜೊತೆಗೆ 10,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ ಲಭ್ಯವಿದೆ.