ಕರ್ನಾಟಕದಲ್ಲಿ ಆಯ್ದ ವಾಹನಗಳಿಗೆ ಹಬ್ಬದ ಡಿಸ್ಕೌಂಟ್ ಆಫರ್ ಘೋಷಿಸಿದ ಯಮಹಾ!

Published : Sep 25, 2024, 08:20 PM IST

ಕರ್ನಾಟಕದಲ್ಲಿ ಯಮಹಾ ಸ್ಕೂಟರ್ ಹಾಗೂ ಬೈಕ್ ಖರೀದಿಸುವ ಗ್ರಾಹಕರಿಗೆ ಇದೀಗ ಹಬ್ಬದ ವಿಶೇಷ ಆಫರ್ ಲಭ್ಯವಿದೆ. ಪ್ರಮುಖವಾಗಿ ಫ್ಯಾಸಿನೋ, ಎಫ್‌ಜಿ ಸೀರಿಸ್ ಹಾಗೂ ರೇ ಝೆಡ್ಆರ್ ದ್ವಿಚಕ್ರವಾಹನಕ್ಕೆ ಆಫರ್ ನೀಡಲಾಗಿದೆ.

PREV
15
ಕರ್ನಾಟಕದಲ್ಲಿ ಆಯ್ದ ವಾಹನಗಳಿಗೆ ಹಬ್ಬದ ಡಿಸ್ಕೌಂಟ್ ಆಫರ್ ಘೋಷಿಸಿದ ಯಮಹಾ!

ನವರಾತ್ರಿ  ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ದೇಶ ಹಬ್ಬದ ತಯಾರಿಯಲ್ಲಿದೆ. ಇತ್ತ ಆಟೋಮೊಬೈಲ್ ಕಂಪನಿಗಳು ಹಬ್ಬದ ವೇಳೆ ಮಾರಾಟ ಹೆಚ್ಚಿಸಲು ವಿಶೇಷ ಆಫರ್ ನೀಡುತ್ತಿದೆ. ಇದೀಗ ಯಮಹಾ ತನ್ನ ಆಯ್ದ ಬೈಕ್ ಹಾಗೂ ಸ್ಕೂಟರ್‌ಗೆ ಹಬ್ಬದ ವಿಶೇಷ ಆಫರ್ ಘೋಷಿಸಿಸಿದೆ.

25

ವಿಶೇಷ ಅಂದರೆ ಈ ಆಫರ್ ಕರ್ನಾಟಕದಲ್ಲಿ ಮಾತ್ರ. ಕರ್ನಾಕದ ಎಲ್ಲಾ ಯಮಹಾ ಅಧಿಕೃತ ಡೀಲರ್ ಬಳಿ ಈ ಆಫರ್ ಲಭ್ಯವಿದೆ. ಯಮಹಾ ಹಬ್ಬದ ಆಫರ್ 1500ಸಿಸಿ ಎಫ್‌ಜಿ ಮಾಡೆಲ್ ಬೈಕ್ ಹಾಗೂ 125ಸಿಸಿ Fi ಹೈಬ್ರಿಡ್ ಸ್ಕೂಟರ್‌ಗಳಿಗೆ ಅನ್ವಯವಾಗಲಿದೆ. ಈ ಹಬ್ಬದ ಸಂಭ್ರಮವನ್ನು ಯಮಹಾ ಜೊತೆ ಆಚರಿಸಲು ಈ ಆಫರ್ ಘೋಷಿಸಿದೆ.

35

FZ-S Fi Ver 4.0, FZ-S Fi Ver 3.0, FZ Fi ಬೈಕ್ ಖರೀದಿಯಲ್ಲಿ 7,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ. ಇಷ್ಟೇ ಅಲ್ಲ ಎಫ್‌ಜಿ ಸೀರಿಸ್ ಬೈಕ್ ಖರೀದಿ ಡೌನ್‌ಪೇಮೆಂಟ್ ಬೆಲೆಯನ್ನೂ ಕಡಿತಗೊಳಿಸಿದೆ. 7,999 ರೂಪಾಯಿ ಡೌನ್‌ಪೇಮೆಂಟ್‌ನಲ್ಲಿ ಇದೀಗ ಎಫ್‌ಝಿ ಸೀರಿಸ್ ಖರೀದಿಸಲು ಸಾಧ್ಯವಿದೆ.

45

ಫ್ಯಾಸಿನೋ 125 ಎಫ್ಐ ಹೈಬ್ರಿಡ್, ರೇ ಝೆಡ್ ಆರ್ ಎಫ್ಆರ್ 125 ಎಫ್ಐ ಹೈಬ್ರಿಡ್ ಸ್ಕೂಟರ್ ಖರೀದಿಯಲ್ಲಿ 4,000 ರೂಪಾಯಿ ಕ್ಯಾಶ್‌ಬ್ಯಾಕ್ ನೀಡಲಾಗಿದೆ. ಇಷ್ಟೇ ಅಲ್ಲ 2,999 ರೂಪಾಯಿ ಡೌನ್‌ಪೇಮೆಂಟ್‌ನಲ್ಲಿ ಸ್ಕೂಟರ್ ಖರೀದಿ ಸಾಧ್ಯ. ಅತೀ ಕಡಿಮೆ ಮುಂಗಡ ಪಾವತಿಯಲ್ಲಿ ಸ್ಕೂಟರ್ ಖರೀದಿಸಿ ಹಬ್ಬ ಆಚರಿಸಲು ಆಫರ್ ನೀಡಲಾಗಿದೆ.

55

ಬೈಕ್ ಹಾಗೂ ಸ್ಕೂಟರ್ ಮಾರುಕಟ್ಟೆಯಲ್ಲಿ ಯಮಹಾ ಅಗ್ರಸ್ಥಾನ ಪಡೆದಿದೆ. ಭಾರತದಲ್ಲಿ ಯಮಹಾ ಸುದೀರ್ಘ ಇತಿಹಾಸ ಹೊಂದಿದೆ. ಆರ್‌ಎಕ್ಸ್ 100‌ನಿಂದ ಹಿಡಿದು ಈಗನ YZF-R3 ಸೇರಿದಂತೆ ಯಮಹಾ ಬೈಕ್‌ಗಳಿಗೆ ಅತೀ ದೊಡ್ಡ ಅಭಿಮಾನಿ ಬಳಗವೇ ಇದೆ. ಸ್ಪೋರ್ಟ್ಸ್ ಬೈಕ್‌ನಲ್ಲಿ ಯಮಹಾ ಹಲವು ಯುವ ಸಮೂಹದ ಮೊದಲ ಆಯ್ಕೆಯಾಗಿದೆ.

Read more Photos on
click me!

Recommended Stories