ಆಕರ್ಷಕ ಲುಕ್; ಬಜಾಜ್ ಅಟೋ ಪಲ್ಸರ್ NS 125 ಸ್ಪೋಟ್ರ್ಸ್ ಬೈಕ್ ಬಿಡುಗಡೆ!

First Published | Apr 21, 2021, 9:50 PM IST

ಕಡಿಮೆ ಬೆಲೆಯಲ್ಲಿ ಸ್ಪೋರ್ಟ್ಸ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. NS ಸ್ಪೋರ್ಟ್ಸ್ ವರ್ಶನ್ ಪಲ್ಸರ್ 125 NS ಬೈಕ್ ಬಿಡುಗಡೆಯಾಗಿದೆ. ಆಕರ್ಷಕ ಲುಕ್, ದಕ್ಷ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳು ಈ ಬೈಕ್‌ನಲ್ಲಿದೆ.

ವಿಶ್ವದ ಮೆಚ್ಚುಗೆಗೆ ಪಾತ್ರವಾಗಿರುವ ಭಾರತದ ಬಜಾಜ್ ಆಟೊ, ದೇಶದಲ್ಲಿ ಹೊಸ ಪಲ್ಸರ್ NS125 ಬಿಡುಗಡೆ ಮಾಡಿದೆ. ಹೊಸ ಪಲ್ಸರ್ NS125, ಭಾರತದ ಅತ್ಯಂತ ಜನಪ್ರಿಯ ಸ್ಪೋಟ್ರ್ಸ್ ಮೋಟರ್ ಸೈಕಲ್ ಬ್ರ್ಯಾಂಡ್ ಆಗಿರುವ ಪಲ್ಸರ್ ‘NS' ಶ್ರೇಣಿಯ ಮೋಟಾರ್ ಸೈಕಲ್‍ಗಳಿಗೆ ಹೊಸ ಸೇರ್ಪಡೆಯಾಗಿದೆ. ಯುವ ಉತ್ಸಾಹಿಗಳನ್ನು ಗುರಿಯಾಗಿಸಿಕೊಂಡ ಪಲ್ಸರ್ NS125 ದಕ್ಷ ಕಾರ್ಯಕ್ಷಮತೆ ಮತ್ತು ವೈವಿಧ್ಯಮಯ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸ್ಪೋಟ್ರ್ಸ್ ಬೈಕ್ ಅಭಿಮಾನಿಗಳಿಗೆ ಹೊಸ ಬ್ರ್ಯಾಂಡ್‍ನ NS125,ವಿಶಿಷ್ಟ ರೋಮಾಂಚನದ ಅನುಭವ ನೀಡಲಿದೆ.
ಪಲ್ಸರ್ NS125, 125CC BS6 DTS-I ಎಂಜಿನ್ ಹೊಂದಿದ್ದು, ಇದು ಗರಿಷ್ಠ ಮಟ್ಟದ ಶಕ್ತಿ ಒದಗಿಸಲಿದೆ. ತಕ್ಷಣಕ್ಕೆ ಥ್ರೋಟಲ್ ಪ್ರತಿಕ್ರಿಯೆ ನೀಡುವುದರಿಂದ 12 PS ಶಕ್ತಿಯನ್ನು ನೀಡುತ್ತದೆ. ಈ ವಿಭಾಗದಲ್ಲಿಯೇ ಇದು ಗರಿಷ್ಠ ಮಟ್ಟದ್ದಾಗಿದೆ. ಸರಿಸಾಟಿಯಿಲ್ಲದ ಪಿಕ್‍ಅಪ್‍ಗಾಗಿ 11 NM ಗರಿಷ್ಠ ಟಾರ್ಕ್ ನೀಡುತ್ತದೆ.
Tap to resize

ರೂ 93,690 (ಎಕ್ಸ್ ಷೋರೂಂ ದೆಹಲಿ) ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಬೈಕ್‍ನ ಹೊರಭಾಗವು ಉನ್ನತ ಗ್ಲೋಸ್ ಮೆಟಾಲಿಕ್ ಪೇಂಟ್, ಪೆರಿಮೀಟರ್ ಫ್ರೇಮ್ ಮತ್ತು ಅನನ್ಯ ಕಂಚಿನ ಛಾಯೆ ಹೊಂದಿರುವ ಮಿಶ್ರಲೋಹಗಳು, ಅವಳಿ ಪೈಲಟ್ ಲ್ಯಾಂಪ್‍ಗಳೊಂದಿಗೆ ತೋಳದ ಕಣ್ಣಿನ ಆಕಾರದ ಹೆಡ್ ಲ್ಯಾಂಪ್ ಕ್ಲಸ್ಟರ್ ಗಮನ ಸೆಳೆಯುತ್ತದೆ. ಹಿಂಭಾಗದಲ್ಲಿನ ಇನ್ಫಿನಿಟಿ ಟ್ವಿನ್-ಸ್ಟ್ರಿಪ್ ಎಲ್‍ಇಡಿ ದೀಪಗಳು ಮತ್ತು ಸ್ಪೋರ್ಟಿ ಸ್ಪ್ಲಿಟ್ ಗ್ರ್ಯಾಬ್ ರೈಲ್ ಮತ್ತು ಕಣ್ಣು ಸೆಳೆಯುವ ಬೆಲ್ಲಿ ಪ್ಯಾನ್ ಗಮನ ಸೆಳೆಯುತ್ತವೆ.
‘ಗರಿಷ್ಠ ಸಿಸಿ ಪಲ್ಸರ್ ‘NS’ ಸರಣಿಯ ಬೈಕ್‍ಗಳ ಹೊಸ ಪೀಳಿಗೆಯನ್ನು ಮೊದಲ ಬಾರಿಗೆ ಬೈಕ್ ಸವಾರಿಯ ಅನುಭವಕ್ಕೆ ಕಾದಿರುವ ಉತ್ಸಾಹಿಗಳಿಗಾಗಿ ಭಾರತದ ಮಾರುಕಟ್ಟೆಗೆ ಪರಿಚಯಿಸಲು ನಾವು ಹೆಚ್ಚು ಉತ್ಸುಕರಾಗಿದ್ದೇವೆ. ಹೊಸ ಪಲ್ಸರ್ NS125ನಲ್ಲಿ ಅಳವಡಿಸಿರುವ ರೋಮಾಂಚನ ಅನುಭವ ನೀಡುವ ಸೌಲಭ್ಯಗಳು ಮತ್ತು ವೈವಿಧ್ಯಮಯ ವೈಶಿಷ್ಟ್ಯಗಳು ಗ್ರಾಹಕರ ಬಹುದೊಡ್ಡ ವಿಭಾಗಕ್ಕೆ ಖಂಡಿತವಾಗಿಯೂ ಇಷ್ಟವಾಗಲಿವೆ. ‘ಪಲ್ಸರ್ 125’ ಬೈಕ್‍ಗೆ ಗ್ರಾಹಕರಿಂದ ಉತ್ತಮ ಬೆಂಬಲ ಸಿಕ್ಕಿದೆ. ಹೊಸ ಪಲ್ಸರ್ NS125, ಎಂಟ್ರಿ ಸ್ಪೋರ್ಟ್ ಬೈಕ್ ವಿಭಾಗದಲ್ಲಿ ಬಜಾಜ್ ಆಟೊ ಬ್ರ್ಯಾಂಡ್‍ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ ಎನ್ನುವ ದೃಢ ವಿಶ್ವಾಸ ನಮಗಿದೆ’ ಎಂದು ಬಜಾಜ್ ಆಟೊದ ಮೋಟರ್ ಸೈಕಲ್ಸ್ ವಿಭಾಗದ ಅಧ್ಯಕ್ಷ ಸಾರಂಗ್ ಕಾನಡೆ ಹೇಳಿದರು.
ಪಲ್ಸರ್ ‘NS’ ಸರಣಿಯು ತೀವ್ರ ಸ್ಪರ್ಧಾತ್ಮಕವಾಗಿರುವ ಎಂಟ್ರಿ ಸ್ಪೋಟ್ರ್ಸ್ ವಿಭಾಗದಲ್ಲಿ ತನ್ನದೇ ಆದ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಪಲ್ಸರ್ NS200 ಅನ್ನು ಹೊಸ ತಲೆಮಾರಿನ ಮತ್ತು ಸ್ಟೈಲಿಶ್ ಪಲ್ಸರ್ ಆಗಿ ಪರಿಚಯಿಸಲಾಗಿತ್ತು. ಇದು ತನ್ನ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ. ಸುಧಾರಿತ ವೈಶಿಷ್ಟ್ಯಗಳು, ಸ್ಪರ್ಧಾತ್ಮಕ ಸಿಸಿ ಮತ್ತು ಬೆಲೆ ಮಟ್ಟದಲ್ಲಿ ಆಕರ್ಷಕ ಶೈಲಿಯ ನೋಟದ NS160 ಬೈಕ್ ಅನ್ನು ಪಲ್ಸರ್ ಖಾತೆಗೆ ಹೊಸದಾಗಿ ಸೇರಿಸಲಾಗಿತ್ತು. ಈ ಬೈಕ್‍ಗಳ ಇತರ ಎಲ್ಲ ಮಹತ್ವಾಕಾಂಕ್ಷೆಯ ವೈಶಿಷ್ಟ್ಯಗಳನ್ನು ಒಳಗೊಂಡಿರುವ NS125 ಬೈಕ್, ಮೊದಲ ಬಾರಿಗೆ ಸ್ಪೋಟ್ರ್ಸ್ ಬೈಕಿಂಗ್ ಖರೀದಿಸುವ ಉತ್ಸಾಹಿಗಳ ಮನಸ್ಸು ಗೆಲ್ಲಲಿದೆ.

Latest Videos

click me!