ಬಜಾಜ್ ಆಟೊ ಭಾರತದ ಮಾರುಕಟ್ಟೆಗೆ ತನ್ನ ಹೊಸ ಹೊಸ ‘CT110X’ ಬೈಕ್ ಬಿಡುಗಡೆ ಮಾಡಿದೆ. ಹೊಸ CT110X , ಬಜಾಜ್ ಆಟೊದ ‘ಸಿಟಿ’ ವಿಭಾಗದ ಟಾಪ್ ಎಂಡ್ ಮಾದರಿಯಾಗಿದೆ. ಕಡಕ್' ನೋಟ, ದಕ್ಷ ಕಾರ್ಯಕ್ಷಮತೆ ಮತ್ತು ಗಟ್ಟಿಮುಟ್ಟಾದ ತಯಾರಿಕೆ ಹೊಂದಿದೆ. ಸವಾರಿ ಸಂದರ್ಭದಲ್ಲಿನ ಸವಾಲಿನ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವುದನ್ನು ಗಮನದಲ್ಲಿ ಇಟ್ಟುಕೊಂಡು ವಿನ್ಯಾಸ ಮಾಡಲಾಗಿದೆ. ವ್ಯಾಪಕ ಬಗೆಯಲ್ಲಿ ಲಭ್ಯ ಇರುವ ಸೌಲಭ್ಯಗಳು, ಗಟ್ಟಿಮುಟ್ಟಾದ ಹೆಡ್‍ಲೈಟ್ ಒಳಗೊಂಡಿದೆ.
ಗ್ರಾಹಕರ ಅಗತ್ಯಗಳನ್ನು ಪರಿಗಣಿಸಿ, ಈ ಬೈಕ್‍ನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ದಪ್ಪನೆಯ ಕ್ರ್ಯಾಷ್ ಗಾರ್ಡ್‍ಗಳು ಮತ್ತು ಅಚ್ಚು ಹಾಕಿರುವ ಫುಟ್‍ಹೋಲ್ಡ್ಸ್ ಸವಾರಿ ಮಾಡುವಾಗ ಸವಾರರಿಗೆ ಹೆಚ್ಚಿನ ಸುರಕ್ಷತೆ ಮತ್ತು ಆರಾಮ ಒದಗಿಸಲಿವೆ. 7 ಕೆಜಿ ತೂಕ ಹೊರುವ ಸಾಮಥ್ರ್ಯ ಹೊಂದಿರುವ ರಿಯರ್ ಕ್ಯಾರಿಯರ್ ಅನ್ನು ಸಹ ಇದು ಹೊಂದಿದೆ. ಹೆಚ್ಚಿನ ಶ್ರಮ ಇಲ್ಲದೆ ಆರಾಮವಾಗಿ ಬೈಕ್ ಸವಾರಿ ಮಾಡುವುದಕ್ಕೆ ನೆರವಾಗಲು ಡ್ಯುಯೆಲ್-ಟೆಕ್ಸ್ಚರ್ ಮತ್ತು ಡ್ಯುಯೆಲ್ ಸ್ಟಿಚ್ಡ್ ಸೀಟ್ ಹೊಂದಿದೆ.
ದೇಶಿ ಮಾರುಕಟ್ಟೆಗೆ ಸಿಟಿ110ಎಕ್ಸ್ (ಅಖಿ110ಘಿ) ಅನ್ನು ಪರಿಚಯಿಸುವುದರೊಂದಿಗೆ, ಇಂಧನ ಕ್ಷಮತೆ (ಮೈಲೇಜ್) ಜೊತೆ ರಾಜಿ ಮಾಡಿಕೊಳ್ಳದೆ ಶ್ರೇಷ್ಠ ದರ್ಜೆಯ ಹೊಸ ವೈಶಿಷ್ಟ್ಯಗಳು, ಗರಿಷ್ಠ ಪ್ರಮಾಣದ ಆರಾಮದಾಯಕ ಸವಾರಿ ಸೌಲಭ್ಯ ಮತ್ತು ಬಾಳಿಕೆ ಬರುವಂತಹ ಮೌಲ್ಯವರ್ಧನೆ ಮೂಲಕ ನಾವು ವಿಭಿನ್ನ ಸ್ವರೂಪದ ಬೈಕ್ ಅನ್ನು ನಮ್ಮ ಗ್ರಾಹಕರಿಗೆ ಕೊಡ ಮಾಡುತ್ತಿದ್ದೇವೆ. ಹೊಸ ಬೈಕ್ ನೋಡಲು ಚೆನ್ನಾಗಿರುವುದರ ಜತೆಗೆ, ಗಟ್ಟಿಮುಟ್ಟಾಗಿ ತಯಾರಿಸಿರುವ ಇದು - ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಆರಾಮವಾಗಿ ಸವಾರಿ ಮಾಡುವಂತಹ ಮೋಟರ್‍ಸೈಕಲ್ ಹೊಂದಲು ಬಯಸುತ್ತಿರುವವರಿಗೆ ಹೆಚ್ಚು ಸೂಕ್ತವಾಗಿರಲಿದೆ. ಸಿಟಿ ಬ್ರ್ಯಾಂಡ್‍ನಲ್ಲಿ ನಾವು ಬೈಕ್ ಸವಾರ ಕೇಂದ್ರಿತ ಹೊಸ ಸೌಲಭ್ಯಗಳನ್ನು ಅಳವಡಿಸಿದ್ದೇವೆ. ನಮ್ಮ ಈ ಅತ್ಯಂತ ಹೊಸ ಕೊಡುಗೆಯಾಗಿರುವ CT110X , ಈ ವಿಭಾಗದಲ್ಲಿ ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆ ಸಲ್ಲಿಸಲು ನೆರವಾಗಲಿರುವುದರ ಬಗ್ಗೆ ನಾವು ದೃಢ ವಿಶ್ವಾಸ ಹೊಂದಿದ್ದೇವೆ ಎಂದು ಬಜಾಜ್ ಆಟೊ ಮೋಟರ್ ಸೈಕಲ್ಸ್ ಅಧ್ಯಕ್ಷ ಸಾರಂಗ್ ಕಾನಡೆ ಹೇಳಿದರು
ನಾಲ್ಕು ಬಣ್ಣಗಳಲ್ಲಿ ಇರುವ ಹೊಸ CT110X ಬೆಲೆ ರೂ 55,494 ರೂಪಾಯಿ (ಎಕ್ಸ್ ಷೋರೂಂ ದೆಹಲಿ) CT110X ವಿಶ್ವಾಸಾರ್ಹ, ಕಾಲದ ಪರೀಕ್ಷೆಯಲ್ಲಿ ಗೆದ್ದಿರುವ 7500RPM ನಲ್ಲಿ 6.33 KW ಶಕ್ತಿ ಹೊರಹೊಮ್ಮಿಸುವ ಮತ್ತು 9.81 NM ಟಾರ್ಕ್‍ನ (5000 RPMನಲ್ಲಿ) 115 CC DTS-I ಎಂಜಿನ್ ಹೊಂದಿದೆ. ಯಾವುದೇ ಬಗೆಯ ಭೂಪ್ರದೇಶದ ಮೇಲೆ ಗಟ್ಟಿ ಮತ್ತು ಸ್ಥಿರವಾದ ಹಿಡಿತ ನೀಡಲು ಸೆಮಿ ನಾಬಿ ಟೈರ್‍ಗಳು ನೆರವಾಗುತ್ತವೆ. 170 ಎಂಎಂ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಭಾರತದಲ್ಲಿನ ರಸ್ತೆ ಪರಿಸ್ಥಿತಿಯನ್ನು ಸವಾರರು ಸುಲಭವಾಗಿ ನಿಭಾಯಿಸಲು ನೆರವಾಗುತ್ತದೆ. 1285 ಎಂಎಂ ವ್ಹೀಲ್ ಬೇಸ್, ಹದಗೆಟ್ಟ ಮತ್ತು ತಗ್ಗುದಿಣ್ಣೆಗಳಿಂದ ಕೂಡಿರುವ ರಸ್ತೆಗಳಲ್ಲಿನ ಸವಾರಿಗೆ ಉತ್ತಮ ಸ್ಥಿರತೆ ಒದಗಿಸುತ್ತದೆ.
ಸಿಟಿ110ಎಕ್ಸ್ (ಅಖಿ110ಘಿ) ಪ್ರೀಮಿಯಂ ಗುಣಲಕ್ಷಣಗಳನ್ನು ಹೆಚ್ಚಿಸುವ ಹೆಚ್ಚುವರಿ ವೈಶಿಷ್ಟ್ಯಗಳು ಕೆಳಕಂಡಂತಿವೆ:· ಸ್ಕ್ವೇರ್ ಟ್ಯೂಬ್ ಮತ್ತು ಸೆಮಿ – ಡಬಲ್ ಕ್ರ್ಯಾಡಲ್ ಫ್ರೇಮ್, ಬೈಕ್‍ಗೆ ಉತ್ತಮ ಸ್ಥಿರತೆ, ದೃಢತೆ ಒದಗಿಸಲಿದ್ದು, ಉತ್ತಮ ಸವಾರಿ ನಿಯಂತ್ರಣಕ್ಕೂ ನೆರವಾಗಲಿವೆ· ಗ್ರೇ-ಬ್ಲ್ಯಾಕ್ ಕ್ಲಾಸಿ ಫಿನಿಷ್‍ನ ಇಂಟೆಗ್ರೇಟೆಡ್ ಟ್ಯಾಂಕ್ ಪ್ಯಾಡ್· ಎತ್ತರಿಸಿದ ಫ್ರಂಟ್-ಫೆಂಡರ್ - ಆಧುನಿಕ ಕಠಿಣ ನೋಟ ನೀಡಲಿದೆ· ವಾಹನದ ಮೇಲಿನ ಬೂದು ಮತ್ತು ಕಪ್ಪು ಬಣ್ಣಗಳ ಸಂಯೋಜನೆಯು ಬೈಕ್‍ನ ನೋಟವನ್ನು ಎದ್ದುಕಾಣುವಂತೆ ಮಾಡಿದೆ