ಥ್ರಿಲ್ಲಿಂಗ್ ಅನುಭವಕ್ಕಾಗಿ ಭಾರತದ BWM ಮಾಲೀಕರಿಗೆ ಸಫಾರಿ 2021 ಆರಂಭ!

First Published Mar 16, 2021, 5:54 PM IST

ಹೇರ್‌ಪಿನ್ ತಿರುವು, ಹೆದ್ದಾರಿ, ಅತ್ಯಂತ ಸುಂದರ ತಾಣಗಳ ಮೂಲಕ ಈ ವಿಶೇಷ  BWM ಮೋಟಾರ್ರಾಡ್ ಸಫಾರಿ ರೈಡಿಂಗ್ ಆಯೋಜಿಸಲಾಗಿದೆ. ಇದು ಭಾರತದ ಭಾರತದ BWM ಮಾಲೀಕರಿಗಾಗಿ ಆಯೋಜಿಸಲಾಗಿದೆ. ವಿಶಿಷ್ಟ ಹಾಗೂ ಸ್ಫೂರ್ತಿದಾಯಕ ಅನುಭವದ ಸಫಾರಿ ರೈಡಿಂಗ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

BMW ಮೋಟಾರ್ರಾಡ್ ಇಂಡಿಯಾ ತನ್ನ ವಿಶಿಷ್ಟ ರೈಡಿಂಗ್ ಅನುಭಕ್ಕಾಗಿ- BMW ಮೋಟಾರ್ರಾಡ್ ಸಫಾರಿ ಅಭಿಯಾನಕ್ಕೆ ಚಾಲನೆ ನೀಡಿದೆ. ಭಾರತದ ಮೋಟಾರ್‌ಸೈಕಲ್ ಮಾಲೀಕರಿಗೆ ಆರಾಮದಾಯಕ, ಥ್ರಿಲ್ಲಿಂಗ್ ರೈಡ್‌ಗಾಗಿ BMW ಮೋಟಾರ್ರಾಡ್ ಸಫಾರಿ ಆಯೋಜಿಸಿದೆ.
undefined
ಈ ರೈಡ್ ದ್ವಿಚಕ್ರ ವಾಹನಗಳಲ್ಲಿ ಅಲ್ಟಿಮೇಟ್ ರೈಡಿಂಗ್ ಎಕ್ಸ್‌ಪೀರಿಯನ್ಸ್ ನೀಡುತ್ತದೆ. 50+ ಕ್ಯೂರೇಟೆಡ್ ರೈಡಿಂಗ್ ಅನುಭವಗಳನ್ನು ದೇಶಾದ್ಯಂತ ಆಯೋಜಿಸಲಾಗಿದ್ದು ಭಾಗವಹಿಸುವವರಿಗೆ ಸಂಪೂರ್ಣ ಆವಿಷ್ಕಾರ ಮತ್ತು ಸಾಹಸದ ಭಾವನೆ ನೀಡುವ ಮೂಲಕ ಪ್ರತಿ ರೈಡ್ ಅನ್ನು ದೇಶಾದ್ಯಂತ ವಿಭಿನ್ನ ತಾಣಗಳಿಗೆ ಕೊಂಡೊಯ್ಯುತ್ತದೆ.
undefined
BMW ಮೋಟಾರ್ರಾಡ್ ಸಫಾರಿ ಸಾಹಸದ ಉತ್ಸಾಹಿಗಳಿಗೆ ಪ್ರವಾಸ-ಆಧರಿತ ಪರಿಕಲ್ಪನೆಯಾಗಿದೆ. ಇದು ಸಾಕಷ್ಟು ವಿನೋದದ ಭರವಸೆ ನೀಡುವುದೇ ಅಲ್ಲದೆ ಭಾಗವಹಿಸುವವರಿಗೆ ಹೊಸ ರೈಡಿಂಗ್ ಕೌಶಲ್ಯಗಳನ್ನು ಕಲಿಯಲು ನೆರವಾಗುತ್ತದೆ. ಇದು ರೈಡಿಂಗ್ ಸ್ವಾತಂತ್ರ್ಯವನ್ನು ಸಂಭ್ರಮಿಸುತ್ತದೆ ಮತ್ತು ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಹೊಸ ಸ್ಥಳಗಳನ್ನು ಆವಿಷ್ಕರಿಸಲು ಅವಕಾಶ ನೀಡುತ್ತದೆ.
undefined
ಜೀವಮಾನದಲ್ಲಿ ಒಮ್ಮೆ ದೊರೆಯುವ ಅವಕಾಶವಾಗಿದ್ದು ಅಲ್ಟಿಮೇಟ್ ಪ್ರದೇಶಗಳು, ಹೇರ್‌ಪಿನ್ ತಿರುವುಗಳು ಮತ್ತು ದೊಡ್ಡ ಹೆದ್ದಾರಿಗಳನ್ನು ಒಳಗೊಂಡಿದೆ. ಈ ಸಫಾರಿಯು ಪಾಯಿಂಟ್-ಟು-ಪಾಯಿಂಟ್ ಟೂರ್ ಆಗಿ 2 ರಿಂದ 5 ದಿನಗಳು ಕಾರ್ಯ ನಿರ್ವಹಿಸುತ್ತದೆ. ರೈಡರ್‍ಗಳು ಅವರದೇ ಆದ ವೇಗದಲ್ಲಿ ಸಂಚರಿಸಬಹುದು. ಅಲ್ಲದೆ ಅವರು ಅತ್ಯಂತ ಮೌಲಿಕ ಒಳನೋಟಗಳನ್ನು ಈ ಮಾರ್ಗದಲ್ಲಿ ಪಡೆಯಬಹುದು. ಪೂರ್ಣ ಸುಸಜ್ಜಿತ ಸೇವೆ ಮತ್ತು ಮೆಡಿಕಲ್ ಬೆಂಬಲವನ್ನು ತಡೆರಹಿತ ರೈಡಿಂಗ್ ಅನುಭವಕ್ಕೆ ಪಡೆಯಬಹುದು.
undefined
ಎಕ್ಸ್‌ಪರ್ಟ್ ಟ್ರೈನರ್ ಮತ್ತು ಟೂರ್ ಮ್ಯಾನೇಜರ್ ನೇತೃತ್ವದಲ್ಲಿ ವಿಶೇಷವಾದ BMW ಮೋಟಾರ್ರಾಡ್ ರೈಡರ್‌ ಗುಂಪಿನೊಂದಿಗೆ ರೈಡ್ ಮಾಡಲು ಅವಕಾಶ ನೀಡಲಾಗಿದೆ. ಪ್ರತಿ ರೈಡ್ ಕೂಡಾ ದೇಶದ ಯಾವುದೇ ಮೂಲೆಯ BMW ಮೋಟಾರ್ರಾಡ್ ಮಾಲೀಕರಿಗೆ ಮುಕ್ತವಾಗಿರುತ್ತದೆ.
undefined
BMW ಮೋಟಾರ್ರಾಡ್ ಸಫಾರೀಸ್‍ಗೆ ಪಿಲಿಯನ್ ರೈಡರ್‌ಗಳಿಗೂ ಸ್ವಾಗತ ನೀಡಲಾಗಿದೆ. BMW ಮೋಟಾರ್ರಾಡ್ ಸಫಾರಿಗೆ ನೋಂದಣಿಯನ್ನು ನಿಮ್ಮ ಹತ್ತಿರದ BMW ಮೋಟಾರ್ರಾಡ್ ಡೀಲರ್‌ಶಿಪ್ ಸಂಪರ್ಕ ಮಾಡಿಕೊಳ್ಳಬಹುದು.
undefined
click me!