ವಿಶ್ವದ ಅಚ್ಚುಮೆಚ್ಚಿನದಾದ ಭಾರತದ ಬಜಾಜ್ ಆಟೊ, 110 ಸಿಸಿ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ABS (ಆ್ಯಂಟಿ -ಲಾಕ್ ಬ್ರೇಕಿಂಗ್ ವ್ಯವಸ್ಥೆ) ಹೊಂದಿರುವ ಸಂಪೂರ್ಣ ಹೊಸದಾದ ಪ್ಲಾಟಿನಾ 110 ಬೈಕ್ ಅನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ. ಬೈಕ್‍ನ ಬೆಲೆ ರೂ 65,926 ( ಎಕ್ಸ್ ಶೋ ರೂಂ) ನಿಗದಿಪಡಿಸಲಾಗಿದೆ.
ABS ಬ್ರೇಕಿಂಗ್ ತಂತ್ರಜ್ಞಾನವು, ಅತ್ಯುತ್ತಮ ದರ್ಜೆಯ ಬ್ರೇಕಿಂಗ್ ಸೌಲಭ್ಯ ಒದಗಿಸುತ್ತಿದ್ದು, ಹಠಾತ್ತನೆ ಬ್ರೇಕ್ ಹಾಕುವಂತಹ ಸನ್ನಿವೇಶಗಳಲ್ಲಿ ಬೈಕ್ ಜಾರುವುದನ್ನು ಅಥವಾ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದನ್ನು ತಡೆಗಟ್ಟಲಿದೆ. 240MM ಮುಂಭಾಗದ ಡಿಸ್ಕ್ ಬ್ರೇಕ್ ಜತೆಗೆ ಜೋಡಿಸಿರುವ ABS, ಹೊಸ ಪ್ಲಾಟಿನಾ ಅನ್ನು ಅದರ ವಿಭಾಗದಲ್ಲಿನ ಅತ್ಯಂತ ಸುರಕ್ಷಿತ ಬೈಕ್‍ನ್ನಾಗಿ ರೂಪಿಸಿದೆ.
ಚಕ್ರದ ವೇಗದ ಮೇಲೆ ನಿಗಾ ಇರಿಸುವ ಎಲೆಕ್ಟ್ರಾನಿಕ್ ಕಂಟ್ರೋಲರ್ ಹಠಾತ್ತನೆ ಅಥವಾ ವಿಪರೀತ ಬ್ರೇಕ್ ಹಾಕಿದ ಸಂದರ್ಭದಲ್ಲಿ ಮಾನವನ ಹಸ್ತಕ್ಷೇಪದ ನಿರ್ವಹಣೆಗಿಂತ ವೇಗವಾಗಿ ಫೀಡ್‍ಬ್ಯಾಕ್ ಲೂಪ್ ಮೂಲಕ ಬ್ರೇಕ್ ಬಿಡುಗಡೆ ಮಾಡುತ್ತದೆ ಮತ್ತು ಅನ್ವಯಿಸುತ್ತದೆ. ಹೀಗೆ ಮಾಡುವುದರಿಂದ ಬೈಕ್‍ನ ಚಕ್ರಗಳು ಲಾಕಿಂಗ್ ಆಗುವುದನ್ನು ತಡೆಗಟ್ಟಲು ಸಿಸ್ಟಮ್ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದರೆ ಬೈಕ್ ಮೇಲಿನ ಸವಾರನ ನಿಯಂತ್ರಣವು ತಪ್ಪಿಹೋಗುತ್ತದೆ ಅಥವಾ ಬೈಕ್ ಜಾರುತ್ತದೆ.
ABS ಜತೆಗೆ, ಪ್ಲಾಟಿನಾ ಕಂಫರ್ಟ್‍ಟೆಕ್ ಪ್ಯಾಕೇಜ್ ಒಳಗೊಂಡಿರಲಿದೆ. ಈ ಪ್ಯಾಕೇಜ್, ಕ್ವಿಲ್ಟೆಡ್ ಸೀಟ್ಸ್, ನಿಟ್ರೊಕ್ಸ್ ಸ್ಪ್ರಿಂಗ್ ಆನ್ ಸ್ಪ್ರಿಂಗ್ ಸಸ್ಪೆನ್ಶನ್ ಜತೆಗೆ ಟ್ಯೂಬ್‍ರಹಿತ ಟೈರ್‍ಗಳು ಸವಾರರಿಗೆ ರಸ್ತೆ ಮೇಲೆ ಸರಿಸಾಟಿಯಿಲ್ಲದ ಆರಾಮ ಒದಗಿಸುತ್ತವೆ.
ಪ್ಲಾಟಿನಾ 115 CC, ಫೋರ್ ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಎಲೆಕ್ಟ್ರಾನಿಕ್ ಇಂಜೆಕ್ಷನ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, ಇದು 6.33 KW ಪವರ್ (8.6 PS) @ 7000 RPM ಮತ್ತು 9.81 NM ಟಾರ್ಕ್ @ 5000 RPM ಹೊಂದಿದೆ. ತಾಜಾತನದಿಂದ ಕೂಡಿದ ಬೈಕ್‍ನ ನೋಟದ ಜತೆ ಹೊಸ ಕನ್ನಡಿಗಳು, ಗೋಚರತೆಯನ್ನು ಸುಧಾರಿಸಲಿವೆ.
ಹೊಸ ಪ್ಲಾಟಿನಾ 110 ABS, ತನ್ನ ವಿಭಾಗದಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿ ಇದೆABS (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್)- ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಲಭ್ಯ . ಶೇ 20ರಷ್ಟು ಲಾಂಗರ್ ಫ್ರಂಟ್ ಮತ್ತು ರಿಯರ್ (ನಿಟ್ರೊಕ್ಸ್ ಜತೆ) ಸಸ್ಪೆನ್ಶನ್ – ರಸ್ತೆ ಗುಂಡಿಗಳಲ್ಲೂ ಆರಾಮದಾಯಕ ಪ್ರಯಾಣ ನೀಡಲಿದೆ.
ಉದ್ದನೆಯ ಕ್ವಿಲ್ಟೆಡ್ ಸೀಟ್ಸ್: ಇದು ಸವಾರನಿಗೆ ಮತ್ತು ಹಿಂಬದಿಯ ಸಹ ಪ್ರಯಾಣಿಕನಿಗೆ ಹೆಚ್ಚು ಆರಾಮ ಒದಗಿಸಲಿದೆಎಲ್‍ಇಡಿ ಹೆಡ್‍ಲ್ಯಾಂಪ್ ಮತ್ತು ಇಂಟೆಗ್ರೇಟೆಡ್ ಡಿಆರ್‍ಎಲ್ - ಸ್ಪಷ್ಟ ಗೋಚರ ಒದಗಿಸಲಿದ್ದು, ಹೊಸ ಶೈಲಿಯ ಸೇರ್ಪಡೆ ಮಾಡಲಿವೆಎಬಿಎಸ್-ಇಂಡಿಕೇಟಿಂಗ್ ಅನಲಾಗ್ ಸ್ಪೀಡೊಮೀಟರ್
ಹೊಸ ಪ್ಲಾಟಿನಾ 110 ಎಬಿಎಸ್, ಅನಿರೀಕ್ಷಿತ ಬ್ರೇಕಿಂಗ್ ಪರಿಸ್ಥಿತಿಗಳಲ್ಲಿ ಬೈಕ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಸವಾರನಿಗೆ ಅವಕಾಶ ಒದಗಿಸಿ ಸರಿಸಾಟಿಯಿಲ್ಲದ ಸುರಕ್ಷತೆ ಒದಗಿಸಲಿದೆ. ದೇಶದಲ್ಲಿನ ವಿಭಿನ್ನ ಬಗೆಯ ಭೌಗೋಲಿಕ ಪರಿಸ್ಥಿತಿ ಮತ್ತು ರಸ್ತೆಗಳಲ್ಲಿ ಸಂಚರಿಸುವ ಲಕ್ಷಾಂತರ ಭಾರತೀಯರಲ್ಲಿ ತಮ್ಮ ಮತ್ತು ತಮ್ಮ ಪ್ರೀತಿಪಾತ್ರರ ಸುರಕ್ಷತೆ ಬಗ್ಗೆ ಕಾಳಜಿವಹಿಸುವ ಅಗತ್ಯ ಇರುವುದರ ಅರಿವು ಇದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ. ಇದೇ ಕಾರಣಕ್ಕೆ ಈ ವಿಭಾಗದಲ್ಲಿನ ಅತ್ಯುತ್ತಮ ಬ್ರೇಕಿಂಗ್ ತಂತ್ರಜ್ಞಾನದ ಬೈಕ್ ಖರೀದಿಸಲು ಅವರು ಮುಂದಾಗಲಿದ್ದಾರೆಂದು ನಾವು ಭಾವಿಸುತ್ತೇವೆ. ಬ್ರ್ಯಾಂಡ್ ಪ್ಲಾಟಿನಾ, ತನ್ನ ವಿಭಾಗದಲ್ಲಿನ ಹೆಚ್ಚುವರಿ ಸೌಲಭ್ಯಗಳಿಂದ 70 ಲಕ್ಷಕ್ಕೂ ಹೆಚ್ಚು ತೃಪ್ತಿದಾಯಕ ಗ್ರಾಹಕರನ್ನು ಮತ್ತು ಸರಿಸಾಟಿಯಿಲ್ಲದ ಪ್ರತಿಪಾದನೆ ಹೊಂದಿದೆ. ಈಗ ಎಬಿಎಸ್ ಸೇರ್ಪಡೆಯೊಂದಿಗೆ ಪ್ಲಾಟಿನಾ, ತನ್ನ ಪ್ರತಿಸ್ಪರ್ಧಿಗಳಿಗಿಂತ ಒಂದು ತಲೆಮಾರು ಮುನ್ನಡೆಯಲ್ಲಿದೆ ಎಂದು ಬಜಾಜ್ ಆಟೊ ಲಿಮಿಟೆಡ್‍ನ ಅಧ್ಯಕ್ಷ ಸಾರಂಗ್ ಕಾನಡೆ ಹೇಳಿದರು