ಹೊಸ ತಂತ್ರಜ್ಞಾನ, ಕೈಗೆಟುಕುವ ದರ; ಬಜಾಜ್ ಪಲ್ಸಾರ್ 180 ಬಿಡುಗಡೆ!

First Published | Feb 24, 2021, 9:14 PM IST

ಬಜಾಜ್ ಆಟೋ ಹೊಸ ಪಲ್ಸರ್ 180 ಬಿಡುಗಡೆ  ಮಾಡಿದೆ. ಹೊಸ ಬೈಕ್ ಅಂದ ಮತ್ತಷ್ಟು ಹೆಚ್ಚಿದೆ. ಹೊಸ ತಂತ್ರಜ್ಞಾನ ಸೇರಿದಂತೆ ಹಲವು  ವಿಶೇಷತೆಗಳಿವೆ. ಬೈಕ್ ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಖ್ಯಾತ ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿಯಾಗಿರುವ ಬಜಾಜ್ ಆಟೋ ಇದೀಗ ಹೊಸ ಪಲ್ಸರ್ 180 ಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆಟೋ ಹೆಡ್‍ಲ್ಯಾಂಪ್ ಆನ್(AHO)ದೊಂದಿಗೆ ಬೋಲ್ಡ್ ಡೆಕಲ್ಸ್ ಮತ್ತು ಟ್ವಿನ್ ಪೈಲೆಟ್ ಲ್ಯಾಂಪ್‍ಗಳೊಂದಿಗೆ ಪಲ್ಸರ್ 180 ದೇಶದ 1500 ಸಿಸಿ+ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ.
2021 ಪಲ್ಸರ್ 180 ಮೋಟರ್‍ಸೈಕಲ್ ಬೆಲೆ 1,07,904 ರೂಪಾಯಿಗಳಾಗಿದ್ದು(ಎಕ್ಸ್ ಶೋರೂಂ ದೆಹಲಿ), ದೇಶಾದ್ಯಂತ ಇರುವ ಎಲ್ಲಾ ಬಜಾಜ್ ಆಟೋ ಅಧಿಕೃತ ಡೀಲರ್‍ಶಿಪ್‍ಗಳಲ್ಲಿ ಲಭ್ಯವಿದೆ.
Tap to resize

ಈ ಹೊಸ ಅವತಾರದ ಬೈಕ್ ಸ್ಪೋರ್ಟಿ ಸ್ಪ್ಲಿಟ್ ಸೀಟ್, ಬ್ಲ್ಯಾಕ್ ಅಲಾಯ್ ವ್ಹೀಲ್ಸ್ ಮತ್ತು ಇನ್‍ಫಿನಿಟಿ ಎಲ್‍ಇಡಿ ಟೇಲ್ ಲ್ಯಾಂಪ್ ಅನ್ನು ಒಳಗೊಂಡಿದೆ. ಈ ಮೋಟರ್‍ಸೈಕಲ್ 4 ಸ್ಟ್ರೋಕ್ SOHC 2-ವ್ಯಾಲ್ವ್ ಏರ್ ಕೂಲ್ಡ್ DTS-I FI ಇಂಜಿನ್ ಒಳಗೊಂಡಿದೆ. ಇದು 14.52 ಎನ್‍ಎಂ(6500 ಆರ್‍ಪಿಎಂ) ಪೀಕ್ ಟಾರ್ಕ್ ಮತ್ತು 8500 ಆರ್‍ಪಿಎಂನಲ್ಲಿ 12.52 ಕೆಡಬ್ಲ್ಯೂ ಪವರ್ ಸಾಮಥ್ರ್ಯವನ್ನು ಹೊಂದಿದೆ.
5 ಸ್ಪೀಡ್ ಟ್ರಾನ್ಸ್‍ಮಿಶನ್ ಗೇರ್ ಬಾಕ್ಸ್ ಅನ್ನು ಹೊಂದಿದ್ದು, ಇದರಲ್ಲಿ ಫ್ರಂಟ್ ಸಸ್ಪೆನ್ಷನ್‍ನಲ್ಲಿ ಟೆಲಿಸ್ಕೋಪಿಕ್ ಆ್ಯಂಟಿ ಫ್ರಿಕ್ಷನ್ ಬುಶ್ ಹಾಗೂ ರಿಯರ್ ಸಸ್ಪೆನ್ಷನ್‍ನಲ್ಲಿ 5 –ವೇ ಅಡ್ಜಸ್ಟೇಬಲ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿರುವುದರಿಂದ ಸವಾರಿಯನ್ನು ಮುದಗೊಳಿಸಲಿದೆ.
ಪ್ರೀಮಿಯಂ ಕ್ವಾಲಿಟಿ, ಕಟ್ಟಿಂಗ್ ಎಡ್ಜ್ ಅಂತರಾಷ್ಟ್ರೀಯ ಸ್ಟೈಲ್ ಮತ್ತು ವಿಶ್ವದರ್ಜೆಯ ಕಾರ್ಯಕ್ಷಮತೆಯನ್ನು ಎದುರು ನೋಡುತ್ತಿರುವ ಗ್ರಾಹಕರಿಗೆ ಈ ಹೊಸ ಪಲ್ಸರ್ 180 ಹೇಳಿ ಮಾಡಿಸಿದ ಮೋಟರ್‍ಸೈಕಲ್ ಆಗಿದೆ.
ಪ್ರಸ್ತುತ ಸ್ಪೋಟ್ರ್ಸ್ ಬೈಕಿಂಗ್ ವಿಭಾಗದ ಶೇ.20 ರಷ್ಟನ್ನು 180-200 ಸಿಸಿ ಮೋಟರ್ ಸೈಕಲ್‍ಗಳು ಮತ್ತು ಹೊಸ ಪಲ್ಸರ್ 180 ಮೂಲಕ ತಂತ್ರಜ್ಞಾನ ಮತ್ತು ಕಾರ್ಯಕ್ಷಮತೆಯನ್ನು ಅತ್ಯುತ್ತಮವಾಗಿ ನೀಡುವ ಸ್ಪೋಟ್ರ್ಸ್ ವೆಹಿಕಲ್ ಆಗಿದೆ.
ಭಾರತದಲ್ಲಿ ಲಭ್ಯವಿರುವ ಅಗ್ಗದ ದರದ, ಅತ್ಯಾಕರ್ಷಕ ಬೈಕ್ ಇದಾಗಿದೆ. ಭಾರತದಲ್ಲಿ ಈ ವಿಭಾಗದಲ್ಲಿ ಬಜಾಜ್ ಆಟೋದ ಪಲ್ಸರ್ ಕಳೆದ 20 ವರ್ಷಗಳಿಂದ ನಾಯಕತ್ವವನ್ನು ದೃಢಪಡಿಸುತ್ತಾ ಬಂದಿದೆ.

Latest Videos

click me!