ಕೊರೋನಾ ಅಬ್ಬರಕ್ಕೆ ತತ್ತರಿಸಿ ಹೋಗಿರುವ ಭಾರತಕ್ಕೆ ಲಾಕ್ ಡೌನ್ ಮುಲಾಮು ಹಚ್ಚಿದ್ದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಹಂತಹಂತವಾಗಿ ಸಡಿಲಗೊಳಿಸುತಿದ್ದು ಕೆಲವೊಂದು ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದೆ. ಮೆಟ್ರೋ ಸಂಚಾರದ ಜೊತೆಗೆ ಬಾರ್ , ಪಬ್ ಗಳಲ್ಲಿ ಮದ್ಯ ಸೇವನೆಗೂ ಅವಕಾಶ ನೀಡಿದ್ದಾರೆ ಆದರೆ ಶಾಲಾ ಕಾಲೇಜು ಆರಂಭಕ್ಕೆ ಸಮ್ಮತಿ ಸೂಚಿಸಲು ಸರ್ಕಾರ ನಿರಾಕರಿಸಿದೆ. ಸದ್ಯ ಆನ್ ಲೈನ್ ನಲ್ಲೆ ಮಕ್ಕಳಿಗೆ ಪಾಠಗಳು ಮುಂದುವರೆಯಲಿದೆ. ಇನ್ನು ಉಳಿದಂತೆ ಯಾವ್ಯಾವ ವಿಭಾಗದಲ್ಲಿ ಲಾಕ್ ಡೌನ್ ಸಡಿಲಗೊಂಡಿದೆ ಮತ್ತು ಪಾಲಿಸಬೇಕಾದ ನಿಯಮಗಳೇನು ಎಂದು ತಿಳಿಯಿರಿ.