2016ರಲ್ಲಿ ಯೂತ್ ಕಾಂಗ್ರೆಸ್ ಗಾಂಧಿ ಬಜಾರ್ ಯೂನಿಟ್ ಪ್ರೆಸಿಡೆಂಟ್ ಸ್ಥಾನ ಸ್ವೀಕರಿಸಿದ ವಿಷ್ಣು.
ಕೊರೋನಾ ಲಾಕ್‌ಡೌನ್ ಆರಂಭದಿಂದಲ್ಲೂ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆ.
ಬೆಂಗಳೂರಿನ ಸುತ್ತಲ್ಲಿರುವ ಪ್ರತಿಯೊಂದು ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರಿಗೆ ಹಾಗೂ ಕಮೀಷನರ್ ಆಫೀಸ್‌ನವರಿಗೆ ಟೀ, ಕಾಫಿ ಹಾಗೂ ಬಿಸ್ಕತ್ ನೀಡುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರಕ್ತ ದಾನ ಶಿಬಿರ ಆಯೋಜಿಸಿದ್ದರು .
ದಿನವೂ 1500 ಜನರಿಗೆ ಆಹಾರ ವಿತರಣೆ ಮಾಡುತ್ತಾರೆ.
ಫುಡ್ ಕಿಟ್ ಹಾಗೂ ಸ್ಯಾನಿಟೈಸರ್ ಪ್ಯಾಕಿಂಗ್ ವಿಷ್ಣು ಅವರ ನಿವಾಸದಲ್ಲೇ ಮಾಡಲಾಗುತ್ತದೆ.
ಆಶಿಕ್ ಗೌಡ, ವಿಷ್ಣು ಹಾಗೂ ಮುಕೇಶ್ ಮೆಹೆತಾ ತಂಡವಾಗಿ ರಕ್ತ ದಾನ ಕಾರ್ಯಕ್ರಮ ಮಾಡಿದ್ದರು, 80 ಮಂದಿ ಪಾಲ್ಗೊಂಡಿದ್ದರು .
ಅನೇಕ ಸಮಾಜ ಸೇವೆ ಮಾಡುವ ಮೂಲಕ ವಿಷ್ಣು ಚಿಕ್ಕ ವಯಸ್ಸಿನಲ್ಲಿ ಗುರುತಿಸಿಕೊಂಡಿದ್ದಾರೆ.
ಆಶಿಕ್ ಗೌಡ ಹಾಗೂ ಮುಕೇಶ್ ಪ್ರತಿ ಕೆಲಸದಲ್ಲೂ ಸಾಥ್ ನೀಡುತ್ತಾರೆ.
ಲಾಕ್‌ಡೌನ್ ಮುಗಿಯುವವರೆಗೂ ವಿಷ್ಣು ಅವರ ತಂಡ ಜನರಿಗೆ ಸಹಾಯ ಮಾಡುತ್ತಿರುತ್ತದೆ.
Vaishnavi Chandrashekar