ಬಿಹಾರ ಚುನಾವಣೆ ಹಿನ್ನೆಲೆ ಮಲ್ಲಿಕಾರ್ಜುನ ಖರ್ಗೆ ಅವರು ನಿರಂತರವಾಗಿ ಪ್ರವಾಸ ಮಾಡುತ್ತಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯನ್ನು ಸಹ ಬಿಹಾರದಲ್ಲಿಯೇ ಆಯೋಜನೆ ಮಾಡಲಾಗಿತ್ತು.
ಸರಣಿ ಪ್ರವಾಸದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಜನರಲ್ ಚೆಕಪ್‌ಗಾಗಿ ಎಂ ಎಸ್ ರಾಮಯ್ಯಗೆ ಆಸ್ಪತ್ರೆಗೆ ಖರ್ಗೆ ದಾಖಲಾಗಿದ್ದಾರೆ. ನಿನ್ನೆಯಿಂದ ಆಸ್ಪತ್ರೆಯಲ್ಲಿಯೇ ಮಲ್ಲಿಕಾರ್ಜುನ ಖರ್ಗೆ ಅವರು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಇಸಿಜಿ ಸೇರಿದಂತೆ ಹಲವು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗಿದೆ.