ಬಿಎಂಆರ್‌ಸಿಎಲ್ ಆಗಸ್ಟ್ 15ರಿಂದ 6 ನಿಲ್ದಾಣ ತೆರೆಯುವ ನಿರೀಕ್ಷೆಯಿದೆ. ಈ 7.5 ಕಿ.ಮೀ ಉದ್ದದ ಮಾರ್ಗವು ಯಶಸ್ವಿ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದು, ಇದರ ಕಾರ್ಯಾಚರಣೆಯಿಂದ ಬೆಂಗಳೂರು ಮೆಟ್ರೋ ಜಾಲವು ದೇಶದ ಎರಡನೇ ಅತಿದೊಡ್ಡ ಜಾಲವಾಗಿ ಹೊರಹೊಮ್ಮಲಿದೆ.
ಬಿಎಂಆರ್‌ಸಿಎಲ್ ಬೆಂಗಳೂರು ಮಹಾನಗರದ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. ಆಗಸ್ಟ್ 15ರಿಂದ ಆರು ಹೊಸ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸಂಚರಿಸುವ ಸಾಧ್ಯತೆಗಳಿವೆ ಎಂಬ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
24
ನಮ್ಮ ಮೆಟ್ರೋದ ಗುಲಾಬಿ ಮಾರ್ಗ
ನಮ್ಮ ಮೆಟ್ರೋದ ಗುಲಾಬಿ ಮಾರ್ಗವನ್ನು ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ನುರಿತ ತಜ್ಞರು ಮತ್ತು ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಗುಣಮಟ್ಟ ಸೇರಿದಂತೆ ನಡೆಸಿದ ವಿವಿಧ ಪರೀಕ್ಷೆಯಲ್ಲಿ ಗುಲಾಬಿ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಆಸಿಲೇಶನ್ ಪರೀಕ್ಷೆ ಯಶಸ್ವಿಯಾಗಿದೆ.
34
ಕಾಳೇನ ಅಗ್ರಹಾರದಿಂದ ತಾವರೆಕೆರೆ
ಇದೇ ವರ್ಷ ಆಗಸ್ಟ್ 15ರ ವೇಳೆಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಉದ್ದದ ಮಾರ್ಗ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆಗಳಿವೆ. ಗಂಟೆಗೆ 90 ಕಿ.ಮೀ ವೇಗದಲ್ಲಿ ಚಲಿಸಲು ರೈಲುಗಳಿಗೆ ಅನುಮೋದನೆ ದೊರೆತಿದೆ ಎನ್ನಲಾಗಿದೆ.
ಇನ್ನುಳಿದ ಅಂತಿಮ ಹಂತದ ಸುರಕ್ಷತಾ ತಪಾಸಣೆಗಳು ಭರದಿಂದ ಸಾಗುತ್ತಿವೆ. ಹೊಸ ಮಾರ್ಗ ಸಂಚಾರದ ಬಳಿಕ ನಮ್ಮ ಬೆಂಗಳೂರು ಮೆಟ್ರೋ ದೇಶದ 2ನೇ ಅತಿದೊಡ್ಡ ಜಾಲವಾಗಲಿದೆ. ಬೆಂಗಳೂರು ಮೆಟ್ರೋ ಜಾಲವು 103.6 ಕಿ.ಮೀ ಗೆ ವಿಸ್ತರಣೆಯಾಗುವ ಮೂಲಕ ಮುಂಬೈ ನಗರವನ್ನು ಹಿಂದಿಕ್ಕಲಿದೆ. ಮುಂಬೈ ಮೆಟ್ರೋ 101.43 ಕಿ.ಮೀ ಜಾಲವನ್ನು ಹೊಂದಿದೆ. ಡಿಸೆಂಬರ್‌ನಲ್ಲಿ ಸುರಂಗ ಮಾರ್ಗ್ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಗಳಿವೆ.