ಬೆಂಗಳೂರಿನ ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ನಡುವೆ 5,000 ಎಕರೆ ವಿಸ್ತೀರ್ಣದಲ್ಲಿ ಕ್ವಿನ್ ಸಿಟಿ ಅಭಿವೃದ್ಧಿಯಾಗುತ್ತಿದೆ. ಫ್ರಾನ್ಸ್‌ನ bioMérieux ನಂತಹ ಜಾಗತಿಕ ಕಂಪನಿಗಳು ಇಲ್ಲಿ ಹೂಡಿಕೆ ಮತ್ತು ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಆಸಕ್ತಿ ತೋರುತ್ತಿವೆ.
ಬೆಂಗಳೂರಿನ ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ನಡುವೆ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ ಹೂಡಿಕೆಗೆ ಮತ್ತು ಸಂಶೋಧನಾ ಕೇಂದ್ರ ಆರಂಭಿಸಲು ಜಾಗತೀಕ ಕಂಪನಿಗಳು ಮುಂದಾಗುತ್ತಿವೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗುತ್ತಿರುವ 5,000 ಎಕರೆ ವಿಸ್ತೀರ್ಣದ ಕ್ವಿನ್ ಸಿಟಿ, ಜಾಗತಿಕ ಮಟ್ಟದ ಶಿಕ್ಷಣ, ಸಂಶೋಧನೆ, ನಾವೀನ್ಯತೆ ಹಾಗೂ ಕೈಗಾರಿಕೆಗಳ ಸಂಗಮದ ತಾಣವಾಗಿ ರೂಪುಗೊಳ್ಳುತ್ತಿದೆ.
25
ವೈದ್ಯಕೀಯ ಪರೀಕ್ಷಾ ತಂತ್ರಜ್ಞಾನ ಸಂಸ್ಥೆಯಾದ bioMérieux
ಫ್ರಾನ್ಸ್ ನ ಪ್ರಮುಖ ಜಾಗತಿಕ ಪ್ರಯೋಗಾಲಯ ಆಧಾರಿತ ವೈದ್ಯಕೀಯ ಪರೀಕ್ಷಾ ತಂತ್ರಜ್ಞಾನ ಸಂಸ್ಥೆಯಾದ bioMérieuxನ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ Audrey Dauvet ಅವರೊಂದಿಗೆ ಸಚಿವ ಎಂಬಿ ಪಾಟೀಲ್ ಸಭೆ ನಡೆಸಿದ್ದಾರೆ. ಕರ್ನಾಟಕದಲ್ಲಿ bioMérieux ಸಂಸ್ಥೆಯ ಸಾಫ್ಟ್‌ವೇರ್ ಅಭಿವೃದ್ಧಿ ಹಾಗೂ ಸಂಶೋಧನೆ (R&D) ಚಟುವಟಿಕೆಗಳನ್ನು ವಿಸ್ತರಿಸುವ ಸಾಧ್ಯತೆಗಳ ಕುರಿತು ಚರ್ಚಿಸಲಾಯಿತು. ವಿಶೇಷವಾಗಿ ಮೈಕ್ರೋಬಯಾಲಜಿ ಉತ್ಪನ್ನಗಳ ಅಭಿವೃದ್ಧಿ ಕೇಂದ್ರ ಸ್ಥಾಪನೆಯ ಸಾಧ್ಯತೆಯನ್ನೂ ಪರಿಶೀಲಿಸಲಾಯಿತು ಎಂಬ ಮಾಹಿತಿಯನ್ನು ಸಚಿವರು X ಖಾತೆ ಮೂಲಕ ಹಂಚಿಕೊಂಡಿದ್ದಾರೆ.
35
ನವೋದ್ಯಮ ಕೇಂದ್ರಕ್ಕೆ ಸೂಕ್ತ ತಾಣ
ಕರ್ನಾಟಕದ ಬಲಿಷ್ಠ ನವೋದ್ಯಮ ಪರಿಸರ, ವೇಗವಾಗಿ ಬೆಳೆಯುತ್ತಿರುವ ಫಾರ್ಮಾ ಮತ್ತು ಲೈಫ್ ಸೈನ್ಸಸ್ ಕ್ಷೇತ್ರ ಹಾಗೂ ಅತ್ಯಾಧುನಿಕ ಮೂಲಸೌಕರ್ಯಗಳ KWIN City, bioMérieuxನ R&D ಮತ್ತು ನವೋದ್ಯಮ ಕೇಂದ್ರಕ್ಕೆ ಸೂಕ್ತ ತಾಣವಾಗಬಲ್ಲದು ಎಂಬುದನ್ನು ತಿಳಿಸಿದೆವು. ಜಾಗತಿಕ ಆರೋಗ್ಯ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಸಂಸ್ಥೆಗಳನ್ನು ಕರ್ನಾಟಕದತ್ತ ಆಕರ್ಷಿಸುವ ಮೂಲಕ, ರಾಜ್ಯವನ್ನು ಮುಂದಿನ ತಲೆಮಾರಿನ ಆರೋಗ್ಯ ಆವಿಷ್ಕಾರಗಳ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಮುಂದುವರಿಯಲಿವೆ ಎಂದು ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ದಾಬಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ಮಧ್ಯೆ ನಿರ್ಮಾಣವಾಗುತ್ತಿರುವ KWIN City (Knowledge, Wellbeing, and Innovation City) ಸುಸ್ಥಿರತೆ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ 'ಸ್ಮಾರ್ಟ್ ಲಿವಿಂಗ್' ಪರಿಕಲ್ಪನೆಯ ಭವಿಷ್ಯದ ಯೋಜಿತ ನಗರವಾಗಿದೆ. ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಗಳ ಸಮನ್ವಯದೊಂದಿಗೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಈ ನಗರವು, ಸ್ವಾವಲಂಬಿ ನೀರು, ವಿದ್ಯುತ್ ಹಾಗೂ ಪರಿಸರ ಸ್ನೇಹಿ ಮೂಲಸೌಕರ್ಯಗಳ ಮೂಲಕ ಭವಿಷ್ಯದ ಸ್ಮಾರ್ಟ್ ನಗರಗಳಿಗೆ ಆದರ್ಶ ಮಾದರಿಯಾಗಲಿದೆ.
55
ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಕ್ವಿನ್ ಸಿಟಿ-ಯು ಇದು ಭವಿಷ್ಯದ ಕಡೆಗಿನ ಒಂದು ದಿಟ್ಟ ಹೆಜ್ಜೆಯಾಗಿದೆ. ಶಿಕ್ಷಣ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಗಾಗಿ ವಿಶ್ವ ದರ್ಜೆಯ ಕೇಂದ್ರವನ್ನು ನಿರ್ಮಿಸಲಿದೆ. ಮಾಹಿತಿಗೆ https://kwin-city.com/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದಾಗಿದೆ. ಇಲ್ಲಿ ನಿಮಗೆ ಕ್ವಿನ್ ಸಿಟಿಯ ಬ್ಲ್ಯೂ ಪ್ರಿಂಟ್ ಸೇರಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.