Bengaluru: ಕಸದ ಗಾಡಿ ಬರೋದು ಲೇಟ್ ಆದ್ರೆ ಏನು ಮಾಡಬೇಕು? ಕೃಷ್ಣ ಬೈರೇಗೌಡರ ಉತ್ತರ

Published : Sep 05, 2026, 07:20 PM IST

ಸಚಿವ ಕೃಷ್ಣಬೈರೇಗೌಡರು ಬೆಂಗಳೂರಿನ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಕಸ ಸಂಗ್ರಹಣೆಗೆ ಜಿಪಿಎಸ್ ಅಳವಡಿಕೆ ಮತ್ತು ಹೊಸ ವಾಹನಗಳ ಖರೀದಿ, ಪಾರ್ಕಿಂಗ್ ಸಮಸ್ಯೆ ನಿವಾರಣೆ ಹಾಗೂ ಪಿಒಪಿ ಗಣಪತಿ ನಿಷೇಧದಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು.

PREV
15
ಸಚಿವ ಕೃಷ್ಣಬೈರೇಗೌಡ ಸಭೆ

ಬೆಂಗಳೂರು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಚಿವ ಕೃಷ್ಣಬೈರೇಗೌಡರು ಮಾಧ್ಯಮಗಳ ಜೊತೆ ಮಾತನಾಡಿದರು. ಶಾಸಕರು ಮತ್ತು ಸಂಸದರ ಸಭೆ ಮಾಡಿದ್ದೇವೆ. ಔಟರ್ ಏರಿಯಾದಲ್ಲಿ ಸಮಸ್ಯೆ ಇದೆ. ಕಾವೇರಿ ನೀರು ಹೊರಗೆ ಕೊಡಲು ಆಗಲಿಲ್ಲ. ರಸ್ತೆ ಆಗಾಗ ಅಗೆದು ಕಾಮಗಾರಿ ಮಾಡುತ್ತಿದ್ದು, ಅದನ್ನು ತಕ್ಷಣವೇ ಸರಿ ಮಾಡಲಾಗುವುದು. ಮುಂದಿನ ಎರಡು ತಿಂಗಳಲ್ಲಿ ಟೆಂಡರ್ ನೀಡಿ ಹೈಯರ್ ಕೆಪಾಸಿಟಿ (ಮೂರು ಟನ್) ಹೊಸ ಗಾಡಿ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

25
ಎಲ್ಲೆಂದರಲ್ಲಿ ಕಸ ಹಾಕಬೇಡಿ

ಪ್ರತಿಯೊಂದು ಕಸದ ಗಾಡಿಗೂ GPS ಅಳವಡಿಕೆ ಮಾಡಲಾಗುತ್ತದೆ. ಕಸದ ಗಾಡಿಗಳು ಎಲ್ಲಾ ರಸ್ತೆಗಳಿಗೂ ಹೋಗಬೇಕೆಂಬ ಉದ್ದೇಶದಿಂದ ಜಿಪಿಎಸ್ ಅಳವಡಿಕೆ ಮಾಡಲಾಗುತ್ತದೆ. ಮನೆ ಹತ್ತಿರವೇ ಗಾಡಿ ಬಂದಾಗ ಕಸ ಹಾಕಿ. ಎಲ್ಲೆಂದರಲ್ಲಿ ಕಸ ಹಾಕಬೇಡಿ. ಒಂದು ವೇಳೆ ಕಸದ ಗಾಡಿ ಬರೋದು ಲೇಟ್ ಆದರೆ ಕಂಪೌಡ್ ಮೇಲೆ ಕಸದ ಬಕೆಟ್ ಇಡಿ. ನಮ್ಮ ಸಿಬ್ಬಂದಿ ಬಂದು ಕಸ ಸಂಗ್ರಹಿಸುತ್ತಾರೆ ಎಂದು ಸಚಿವರು ಹೇಳಿದರು.

35
ರಸ್ತೆಯ ಎರಡೂ ಬದಿಯಲ್ಲಿ ಪಾರ್ಕಿಂಗ್ ಸಮಸ್ಯೆ

ನಗರದ ಹಲವು ಕಡೆ ರಸ್ತೆಯ ಎರಡು ಬದಿಯಲ್ಲಿಯೂ ಕಾರ್ ಪಾರ್ಕ್ ಮಾಡುತ್ತಿದ್ದು, ಅದರನ್ನು ಗಮನಿಸುತ್ತಿದ್ದೇವೆ. ಶಾಸಕರು ಈ ಸಮಸ್ಯೆ ಬಗ್ಗೆ ಪ್ರತ್ಯೇಕ ಸಭೆ ಕರೆಯಲು ಹೇಳಿದ್ದಾರೆ. ಕಾರ್ ಪಾರ್ಕ್ ಇಂದ ರಸ್ತೆ ಕ್ಲೀನ್ ಮಾಡಲು ಆಗೋದಿಲ್ಲ. ಅಷ್ಟು ಟ್ರಾಫಿಕ್ ಆಗುತ್ತಿದೆ. ಬೆಂಗಳೂರು ಬಹುತೇಕ ಕಡೆ ಈ ಸಮಸ್ಯೆ ಇದೆ ಎಂದರು.

45
ಶಿಸ್ತು ಕ್ರಮ ಗ್ಯಾರಂಟಿ

ಪೌರಕಾರ್ಮಿಕರು ಕೆಲಸಕ್ಕೆ ಬರದೇ ಇದ್ರೆ ಶಿಸ್ತು ಕ್ರಮ ಗ್ಯಾರಂಟಿ. ಎಲ್ಲಾ ಶಾಸಕರು ಇದಕ್ಕೆ ಬೆಂಬಲ ನೀಡಿದ್ದಾರೆ. ಪೌರ ಕಾರ್ಮಿಕರು ಶ್ರದ್ಧೆಯಿಂದ ಕೆಲಸ ಮಾಡಿ. ನಮಗೆ ಬೆಂಗಳೂರು ಜೀವನ ನೀಡಿದೆ. ನಿಮಗೆ ಸಂಬಳ ನೀಡುತ್ತೇವೆ. ನೀವು ಕೆಲಸ ಮಾಡಿ ಎಂದು ಆಗ್ರಹಿಸಿದರು.

55
ಪಿಒಪಿ ಗಣಪತಿ ಬೇಡ

ಪಿಒಪಿ ಗಣಪತಿ ಬೇಡ, ಇದು ಗಣೇಶನಿಗೆ ಮಾಡುವ ಅಪಮಾನ. ಬೆಂಗಳೂರು ಜಲಮೂಲ ಹಾಳು ಮಾಡಬೇಡಿ. ಯುವಕರಿಗೆ ಖುಷಿ ಕೊಡಲಿದೆ ಹಬ್ಬ, ಜೀವನ ಎಂಜಾಯ್ ಮಾಡೋದಕ್ಕೆ ಇರೋದು.ಆದರೆ ಪಿಒಪಿ ಗಣಪತಿ ಇಟ್ಟು ಪೂಜೆ ಮಾಡಬೇಡಿ.ನಾವು ಚಿಕ್ಕವರಿದ್ದಾಗ ಸಗಣಿಯಲ್ಲಿ ಗಣಪತಿ ಮಾಡಿ ಗರಕೆ ಹುಲ್ಲು ಇಟ್ಟು ಪೂಜೆ ಮಾಡ್ತಾ ಇದ್ದೇವು. ಹೀಗಾಗಿ ಯುವಕರು ಸಹಕಾರ ನೀಡಿ ಎಂದು ಸಚಿವರು ಮನವಿ ಮಾಡಿಕೊಂಡರು.

Read more Photos on
click me!

Recommended Stories