ಪಕ್ಕಾ ಪ್ಲಾನ್ ಮಾಡಿ ಬೆಂಗಳೂರಿನ ಮನೆಯಿಂದ 18 ಕೋಟಿ ರೂ ಚಿನ್ನಾಭರಣ ಕಳವು, ಕೆಲಸದವರ ಕೈಚಳಕ

Published : Jan 28, 2026, 10:15 PM IST

ಪಕ್ಕಾ ಪ್ಲಾನ್ ಮಾಡಿ ಬೆಂಗಳೂರಿನ ಮನೆಯಿಂದ 18 ಕೋಟಿ ರೂ ಚಿನ್ನಾಭರಣ ಕಳವು, ಮನೆಕೆಲಸ ಮಾಡುತ್ತಿದ್ದ ನೇಪಾಳಿ ದಂಪತಿಗಳ ಕೃತ್ಯಕ್ಕೆ ಮನೆ ಮಂದಿ ಕಂಗಾಲಾಗಿದ್ದಾರೆ. ಇದು ಪಕ್ಕಾ ಪ್ಲಾನ್ ಮಾಡಿದ ಕೃತ್ಯ, ನಿಮ್ಮ ಮನೆಯಲ್ಲಿ ಮನೆಗೆಲದವರಿದ್ದರೆ ಈ ವಿಚಾರದಲ್ಲಿ ಗಮನಹರಿಸಿ.

PREV
16
ಬೆಂಗಳೂರಿನಲ್ಲಿ 18 ಕೋಟಿ ರೂ ಚಿನ್ನಾಭರಣ ಕಳವು

ಬೆಂಗಳೂರಿನ ಮನೆಯಿಂದ ಬರೋಬ್ಬರಿ 18 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ, ಡೈಮಂಡ್ ಸೇರಿದಂತೆ ಆಭರಣ ಕಳ್ಳತನ ನಡೆದಿದೆ. ಮನೆ ಕೆಲಸ ಮಾಡುತ್ತಿದ್ದ ದಂಪತಿಗಳ ಕೈಚಳಕ್ಕೆ ಮನೆ ಮಾಲೀಕ ಹಾಗೂ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಮನೆಯ ಲಾಕರ್ ಒಡೆದು ಚಿನ್ನಾಭರಣ, ಒಂದಷ್ಟು ನಗದು ಕಳ್ಳತನವಾಗಿದೆ

26
ನೇಪಾಳಿ ದಂಪತಿಗಳ ಕೃತ್ಯ

ಮಾರತ್ತಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಬಿಲ್ಡರ್‌ಗೆ ಸೇರಿದ ಮನೆಯಲ್ಲಿ ಈ ಘಟನೆ ನಡೆದಿದೆ. ಶ್ರೀಮಂತ ಕುಟುಂಬದಲ್ಲಿ ಮನೆ ಕೆಲಸ ಮಾಡುತ್ತಿದ್ದ ನೇಪಾಳಿ ದಂಪತಿ ಈ ಕೃತ್ಯ ಎಸಗಿದ್ದಾರೆ. ಇದರ ಹಿಂದೆ ಅತೀ ದೊಡ್ಡ ಜಾಲವೊಂದು ಅಡಗಿರುವ ಬಗ್ಗೆ ಪೊಲೀಸರಿಗೆ ಸುಳಿವುಗಳು ಸಿಕ್ಕಿದೆ. ಹೀಗಾಗಿ ಬೆಂಗಳೂರಿನ ಮನೆಗಳಲ್ಲಿ ಯಾರೆಲ್ಲಾ ಮನೆ ಕೆಲಸದವರಿದ್ದಾರೋ, ಎಲ್ಲಾ ಮಾಲೀಕರು ಈ ಪ್ಲಾನ್ ಕುರಿತು ಗಮನಹರಿಸಬೇಕು.

36
28 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ದಂಪತಿ

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಕೆಲಸಕ್ಕಿದ್ದ ನೇಪಾಳಿ ದಂಪತಿ ಕಳ್ಳತನ ಮಾಡಿರುವುದು ಬಹುತೇಕ ಖಚಿತಗೊಂಡಿದೆ. ಕಳ್ಳತನ ಬಳಿಕ ಈ ನೇಪಾಳಿ ದಂಪತ್ತಿ ನಾಪತ್ತೆಯಾಗಿದ್ದಾರೆ. ಕೇವಲ 28 ದಿನಗಳ ಹಿಂದಷ್ಟೇ ನೇಪಾಳಿ ದಂಪತಿಗಲಾದ ದಿನೇಶ್ ಹಾಗೂ ಕಮಲಾ ಕೆಲಸಕ್ಕೆ ಸೇರಿದ್ದರು. ಇದೀಗ ಇಬ್ಬರು ನಾಪತ್ತೆಯಾಗಿದ್ದಾರೆ. ಈ ಪ್ರಕರಣದ ಪ್ಲಾನ್ ಇಲ್ಲಿಗೆ ಮುಗಿದಿಲ್ಲ. ಇದರ ಹಿಂದೆ ಮತ್ತೊಂದು ಪ್ಲಾನ್ ಇದೆ.

46
8 ತಿಂಗಳು ಕೆಲಸ ಮಾಡಿದ್ದ ಮತ್ತೊಂದು ನೇಪಾಳಿ ದಂಪತಿ

ಬೆಂಗಳೂರಿನಲ್ಲಿ ನೇಪಾಳಿ ಮೂಲದವರು ಅತೀ ಕಡಿಮೆ ವೇತನಕ್ಕೆ ಲಭ್ಯವಾಗುತ್ತಾರೆ. ಈ ಮಾರತಳ್ಳಿಯ ಮನೆಯಲ್ಲಿ 8 ತಿಂಗಳಿನಿಂದ ನೇಪಾಳಿ ದಂಪತಿಗಳಾದ ಮಾಯಾ ಹಾಗೂ ವಿಕಾಸ್ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆ ನೇಪಾಳದಲ್ಲಿ ಕೆಲಸವಿದೆ ಎಂದು ದಿಢೀರ್ ಮನೆ ಕೆಲಸ ಬಿಟ್ಟಿದ್ದಾರೆ.

56
ದಿನೇಶ್ ಹಾಗೂ ಕಮಲಾರನ್ನು ಸೇರಿಸಿ ಕೆಲ ಬಿಟ್ಟಿದ್ದ ಮಾಯಾ ವಿಕಾಸ್

ಮಾಯಾ ಹಾಗೂ ವಿಕಾಸ್ ಕೆಲಸ ಬಿಡುವಾಗ ನೇಪಾಳಿಗಳಾದ ದಿನೇಶ್ ಹಾಗೂ ಕಮಲಾರನ್ನು ಕೆಲಸಕ್ಕೆ ಸೇರಿಸಿದ್ದರು. ಹೀಗಾಗಿ ಮಾಲೀಕ ಹೆಚ್ಚಿನ ವಿಚಾರಣೆ ಮಾಡಲು ಹೋಗಿಲ್ಲ. ಆದರೆ ಇದು ಪ್ಲಾನ್ ಆಗಿತ್ತು. ಒಂದು ತಿಂಗಳಲ್ಲಿ ಬಿಲ್ಡರ್ ಮನೆಯಲ್ಲಿ ಎಲ್ಲೆಲ್ಲಿ ಏನೇನಿದೆ ಅನ್ನೋದು ಗೊತ್ತಾಗಲ್ಲ. ಇದನ್ನು ಮಾಯಾ ಹಾಗೂ ವಿಕಾಸ್ ಈ ದಂಪತಿಗಳಿಗೆ ಹೇಳಿಕೊಟ್ಟಿರುವ ಸಾಧ್ಯತೆ ಇದೆ.

66
ಓರ್ವನ ವಿಚಾರಣೆ

ನೇಪಾಳಿಗರು ಬೆಂಗಳೂರಿನಲ್ಲಿ ಬಂದು ಇಲ್ಲಿ ಗ್ಯಾಂಗ್ ಕಟ್ಟಿಕೊಂಡು ವ್ಯವಸ್ಥಿತವಾಗಿ ನಡೆಸುತ್ತಿರುವ ಕಳ್ಳತನ ಪ್ರಕರಣ ಎಂದು ಪೊಲೀಸರು ಅನುಮಾನಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಹಲವು ಮನೆಗಳ್ಳತನ ಪ್ರಕರಣಗಳಲ್ಲಿ ನೇಪಾಳಿಗರು ಆರೋಪಿಗಳಾಗಿದ್ದಾರೆ. ಇದೂ ಕೂಡ ಅದೇ ಗ್ಯಾಂಗ್ ಪ್ಲಾನ್ ಮಾಡಿ ಮಾಡಿರುವ ಕೃತ್ಯದ ಅನುಮಾನ ಹೆಚ್ಚಾಗಿದೆ. ಎರಡು ನೇಪಾಳಿ ದಂಪತಿಗಳ ಮೇಲೂ ಪ್ರಕರಣ ದಾಖಲಾಗಿದೆ. ಮಾರತ್ತಹಳ್ಳಿ ಪೊಲೀಸರು ತನಿಖೆ ಆರಂಭಿಸಿದ್ದು, ಓರ್ವನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಓರ್ವನ ವಿಚಾರಣೆ

Read more Photos on
click me!

Recommended Stories