ಮಹಿಳಾ ದಿನಾಚರಣೆ: ಬೆಂಗಳೂರು ವಿದ್ಯಾರ್ಥಿನಿಗೆ ಒಂದು ದಿನದ ಇನ್ಸ್‌ಸ್ಪೆಕ್ಟರ್ ಗೌರವ!

First Published | Mar 8, 2020, 8:43 PM IST

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ,ಬೆಂಗಳೂರು ನಗರ ಪೊಲೀಸರಿಂದ ವಿನೂತನ ಪ್ರಯತ್ನ ಎಲ್ಲರ ಗಮನಸೆಳೆಯಿತು. ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ನಗರದ ಬಹುತೇಕ ಠಾಣೆಗಳಲ್ಲಿ  ಒಂದು ದಿನದ ಠಾಣಾಧಿಕಾರಿಯನ್ನಾಗಿ ಮಾಡಿ ಗೌರವವನ್ನು ಸಲ್ಲಿಸಲಾಯ್ತು. ಬಾಣಸವಾಡಿ ಪೊಲೀಸ್ ಠಾನೆಯಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ, ಬಡತನದಲ್ಲಿ ಬೆಳೆದು ಅಂಧರಾದರೂ ವಿದ್ಯಾಭ್ಯಾಸದಲ್ಲಿ ಉತ್ತಮ ಸಧನೆ ಮಾಡಿರುವ ಕುಮಾರಿ ಸಫ್ನ ಟಿ.ಎಂ ರವರನ್ನು ಒಂದು ದಿನದ ಮಟ್ಟಿಗೆ ಬಾಣಸವಾಡಿ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ನೇಮಿಸಿ ಗೌರವ ಸಲ್ಲಿಸಲಾಯಿತು.

ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರ ವಿಭಿನ್ನ ಪ್ರಯತ್ನ
undefined
ಯುವತಿಗೆ ಒಂದು ದಿನ ಇನ್ಸ್ ಪೆಕ್ಟರ್ ಆದ ವಿದ್ಯಾರ್ಥಿನಿ ಸಫ್ನಾ
undefined

Latest Videos


ಬಾಣಸವಾಡಿ ಠಾಣಾ ಪೊಲೀಸರಿಂದ ಒಂದು ದಿನದ ಅಧಿಕಾರ ಹಸ್ತಾಂತರ
undefined
ಆಧಿಕಾರ ಸ್ವೀಕರಿಸಿ ಸಿಬ್ಬಂದಿ ಜೊತೆ ಸಭೆ ನಡೆಸಿದ ಸಫ್ನಾ
undefined
ಸೆಂಟ್ ಜೊಸೆಫ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ಪದವಿ ವ್ಯಾಸಾಂಗ ಮಾಡುತ್ತಿರುವ ಸಫ್ನಾ
undefined
ಇನ್ಸ್‌ಸ್ಪೆಕ್ಟರ್ ಗೌರವಕ್ಕೆ ಸಂತಸ ವ್ಯಕ್ತಪಡಿಸಿದ ಅಂಧರಾಗಿರುವ ಸಫ್ನಾಗೆ
undefined
ಪಿಯುಸಿ ಯಲ್ಲಿ ಶೇ.89% ಅಂಕ ಗಳಿಸಿದ್ದ ಸ್ಪಪ್ನಾಗೆ ವಿಶೇಷ ಗೌರವ
undefined
ಠಾಣಾಧಿಕಾರಿಯಾಗಿ ನೇಮಕಗೊಂಡ ಸಫ್ನಾ ಪೊಲೀಸ್ ಜೀಪ್‌ನಲ್ಲಿ ಬೀಟ್ ರೌಂಡ್ಸ್
undefined
ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಲು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಬೆಂಗಳೂರು ಪೊಲೀಸ್
undefined
ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್
undefined
click me!