2025ರ ಜನವರಿಯಿಂದ ನವೆಂಬರ್ ಅವಧಿಯಲ್ಲಿ ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಕಾರುಗಳ ಅಂಕಿಅಂಶಗಳು ಇಲ್ಲಿವೆ. ಈ ವರ್ಷದ ವಿಶೇಷವೆಂದರೆ ಎಸ್‌ಯುವಿಗಳ ಅಬ್ಬರದ ನಡುವೆಯೂ ಸೆಡಾನ್ ಮತ್ತು ಹ್ಯಾಚ್‌ಬ್ಯಾಕ್ ಕಾರುಗಳು ತಮ್ಮ ಪ್ರಾಬಲ್ಯ ಮೆರೆದಿವೆ.
ಹೊಸ ತಲೆಮಾರಿನ (Next-Gen) ಮಾಡೆಲ್ ಲಾಂಚ್ ಆದ ಬೆನ್ನಲ್ಲೇ ಡಿಜೈರ್ ಅಗ್ರಸ್ಥಾನಕ್ಕೇರಿದೆ. ಸತತವಾಗಿ ಎಸ್‌ಯುವಿಗಳು ನಂ.1 ಸ್ಥಾನದಲ್ಲಿದ್ದ ಟ್ರೆಂಡ್ ಅನ್ನು ಡಿಜೈರ್ ಈ ವರ್ಷ ಬ್ರೇಕ್ ಮಾಡಿದೆ. ಈ ವರ್ಷದ ಜನವರಿಯಿಂದ ನವೆಂಬರ್‌ವರೆಗೆ 1,95,416 ಯುನಿಟ್ ಮಾರಾಟವಾಗಿದೆ.
210
ಎಸ್‌ಯುವಿಗಳ ಕಿಂಗ್ ಕ್ರೆಟಾ
ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಹುಂಡೈ ಕ್ರೆಟಾ ತನ್ನ ಅಧಿಪತ್ಯ ಮುಂದುವರಿಸಿದ್ದು, 1,87,968 ಯುನಿಟ್ ಮಾರಾಟದೊಂದಿಗೆ ಎರಡನೇ ಸ್ಥಾನ ಪಡೆದಿದೆ.
310
ಟಾಟಾ ನೆಕ್ಸಾನ್ ಕಂಬ್ಯಾಕ್
ವರ್ಷದ ದ್ವಿತೀಯಾರ್ಧದಲ್ಲಿ ಭರ್ಜರಿ ಮಾರಾಟ ಕಂಡ ನೆಕ್ಸಾನ್, ಟಾಪ್ 3 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಅವಧಿಯಲ್ಲಿ1,81,186 ಯುನಿಟ್ ಮಾರಾಟವಾಗಿದೆ.