ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್, ಫೆಬ್ರವರಿ ತಿಂಗಳ ವಿಶೇಷ ಆಫರ್‌ಗಳನ್ನು ಪ್ರಕಟಿಸಿದೆ. ಹೊಸ ಹಾಗೂ ಹಳೆಯ ಮಾಡೆಲ್ ಇಯರ್ ವಾಹನಗಳ ಮೇಲೆ ಈ ರಿಯಾಯಿತಿಗಳು ಲಭ್ಯವಿವೆ.
26
ಟಾಟಾ ಕರ್ವ್ ಇವಿ ಮಾಡೆಲ್‌ಗೆ ಡಿಸ್ಕೌಂಟ್
ಟಾಟಾ ಮೋಟಾರ್ಸ್, ಕರ್ವ್ ಇವಿ ಮಾಡೆಲ್ ಮೇಲೆ ಬರೋಬ್ಬರಿ ₹3.80 ಲಕ್ಷದವರೆಗೆ ಡಿಸ್ಕೌಂಟ್ ನೀಡುತ್ತಿದೆ. ಪಂಚ್ ಇವಿ ಮತ್ತು ನೆಕ್ಸಾನ್ ಇವಿ ಯಂತಹ ಜನಪ್ರಿಯ ಮಾಡೆಲ್‌ಗಳಿಗೂ ಆಫರ್‌ಗಳನ್ನು ಘೋಷಿಸಿದೆ. ಟಿಯಾಗೋ ಇವಿ ಯಂತಹ ಬಜೆಟ್ ಮಾಡೆಲ್‌ಗಳು ಕೂಡ ಈ ಆಫರ್ ಪಟ್ಟಿಯಲ್ಲಿವೆ.
36
ಕಾರಿನ ಮಾಡೆಲ್ ಆಧರಿಸಿ ಡಿಸ್ಕೌಂಟ್
ಕಾರಿನ ಮಾಡೆಲ್ ವರ್ಷವನ್ನು ಆಧರಿಸಿ ಡಿಸ್ಕೌಂಟ್ ಮೊತ್ತ ಬದಲಾಗುತ್ತದೆ. ಹಳೆಯ ಸ್ಟಾಕ್ ವಾಹನಗಳ ಮೇಲೆ ಹೆಚ್ಚುವರಿ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಇದು ಖರೀದಿದಾರರಿಗೆ ಹಣ ಉಳಿಸುವ ಉತ್ತಮ ಅವಕಾಶವಾಗಿದೆ.