ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ನೂತನ ಮರ್ಸಡೀಸ್ ಬೆಂಜ್ ಕಾರು ಖರೀದಿಸಿದ್ದಾರೆ
ಬೆಂಗಳೂರಿನ ಮರ್ಸಡೀಸ್ ಬೆಂಜ್ ಸುಂದರಾಮ್ ಮೋಟಾರ್ಸ್ ಶೋ ರೂಂನಿಂದ ನೂತನ ಕಾರು ಖರೀದಿಸಿದ್ದಾರೆ
ರಚಿತಾ ರಾಮ್ ಮರ್ಸಡೀಸ್ ಬೆಂಜ್ GLS 350d ಗ್ರ್ಯಾಂಡ್ ಎಡಿಶನ್ ನೀಲಿ ಬಣ್ಣದ ಕಾರು ಖರೀದಿಸಿದ್ದಾರೆ
ನೂತನ ಕಾರು ಖರೀದಿಸಿದ ರಚಿತಾ ರಾಮ್‌ನನ್ನು ಮೈಸೂರು ಪೇಟಾ ಹಾಗೂ ಶಾಲು ಹೊದಿಸಿ ಸನ್ಮಾನಿಸಲಾಯಿತು
ಆಯುಷ್ಮಾನ್ ಭವ ಕಾರು ರಿಲೀಸ್ ಜೊತೆಗೆ ನೂತನ ಕಾರನ್ನು ಖರೀದಿಸಿದ ರಚಿತಾ
ಕೇಕ್ ಕತ್ತರಿಸಿ ನೂತನ ಕಾರು ಹತ್ತಿದ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್
GLS 350d ಗ್ರ್ಯಾಂಡ್ ಎಡಿಶನ್ ಕಾರು ಪ್ರತಿ ಲೀಟರ್ ಡೀಸೆಲ್‌ಗೆ 11 ಕಿ.ಮೀ ಮೈಲೇಜು ನೀಡಲಿದೆ
ಈ ಕಾರಿನ ಆನ್‌ರೋಡ್ ಬೆಲೆ ಬರೋಬ್ಬರಿ 1.6 ಕೋಟಿ ರೂಪಾಯಿ
2987 cc ಎಂಜಿನ್ ಹೊಂದಿರುವ ಡೀಸೆಲ್ ಕಾರು, 258bhp ಪವರ್ ಹಾಗೂ 620Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ
ರಚಿತಾ ಖರೀದಿಸಿರುವ ಕಾರು ABS, EBD ಸೇರಿದಂತೆ ಅತ್ಯಾಧುನಿಕ ಹಾಗೂ ಹೆಚ್ಚು ಸುರಕ್ಷತೆಯ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ
ಡ್ರೈವರ್, ಸೈಡ್, ಪ್ಯಾಸೆಂಜರ್ ಏರ್‌ಬ್ಯಾಗ್, ಸೈಡ್ ಇಂಪಾಕ್ಟ್ ಬೀಮ್ಸ್, ಸೀಟ್ ಬೆಲ್ ಅಲರಾಂ ಸೇರಿದಂತೆ ಗರಿಷ್ಠ ಸುರಕ್ಷತಾ ಫೀಚರ್ಸ್ ಹೊಂದಿದೆ