ಬೆಂಗಳೂರು(ಆ.18): ಬಾಲಿವುಡ್ ಸೆಲೆಬ್ರೆಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರು, ಉದ್ಯಮಿಗಳು ಸೇರಿದಂತೆ ಹಲವು ಶ್ರೀಮಂತರು ಹೊಚ್ಚ ಹೊಸ ಕಾರಿನ ಜೊತೆಗೆ ಸೆಕೆಂಡ್ ಹ್ಯಾಡ್(Used cars) ಕಾರುಗಳನ್ನು ಬಳಸುತ್ತಾರೆ. ಕಾರಣ ಹೊಸ ಕಾರು ಹಾಗೂ ಸೆಕೆಂಡ್ ಹ್ಯಾಂಡ್ ಕಾರಿಗೂ ಕೋಟಿ ಕೋಟಿ ರೂಪಾಯಿ ವ್ಯತ್ಯಾಸವಿದೆ. ಇಷ್ಟೇ ಅಲ್ಲ, ಕಟ್ಟಬೇಕಾದ ತೆರಿಗೆ(Less depreciation) ಕೂಡ ಕಡಿಮೆ. ಕಾರಣ ಕಾರಿನ ವ್ಯಾಲ್ಯೂ ಕಡಿಮೆಯಾಗಿರುತ್ತೆ. ಅಧೀಕೃತ ಡೀಲರ್‌ಗಳಿಂದ ಕಾರು ಖರೀದಿಸಿದರೆ ಹೆಚ್ಚುವರಿ ವಾರೆಂಟಿ ಕೂಡ ಸಿಗಲಿದೆ. ಹೀಗಾಗಿ ಸೆಲೆಬ್ರೆಟಿಗಳು ದುಬಾರಿ ಹಾಗೂ ಐಷಾರಾಮಿ ಸೆಕೆಂಡ್ ಹ್ಯಾಂಡ್ ಕಾರುಗಳನ್ನೂ ಬಳಸುತ್ತಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟ ನಟಿಯರು ಸೇರಿದಂತೆ ಹಲವು ಸ್ಟಾರ್‌ಗಳಲ್ಲಿರುವ ಸೆಕೆಂಡ್ ಹ್ಯಾಂಡ್ ಕಾರು ವಿವರ ಚಿತ್ರಗಳಲ್ಲಿ ಸುವರ್ಣನ್ಯೂಸ್.ಕಾಂ ನೀಡುತ್ತಿದೆ.