Published : Aug 30, 2019, 09:55 PM ISTUpdated : Aug 30, 2019, 10:03 PM IST
ಮುಂಬೈ(ಆ.30): ಮಹೀಂದ್ರ ಆಟೋಮೊಬೈಲ್ ಕಂಪನಿ ಮಾಲೀಕ ಆನಂದ್ ಮಹೀಂದ್ರ ಬಲಿಷ್ಠ ಕಾರುಗಳನ್ನು ಬಿಡುಗಡೆ ಮಾತ್ರವಲ್ಲ, ಟ್ವಿಟರ್ ಮೂಲಕವೂ ಎಲ್ಲರ ಮನೆ ಮಾತಾಗಿದ್ದಾರೆ. ವಿಶೇಷ ಅಂದರೆ ಆನಂದ್ ಮಹೀಂದ್ರ, ತಮ್ಮ ಕಂಪನಿಯ ಕಾರುಗಳನ್ನು ಮಾತ್ರ ಬಳಸುತ್ತಾರೆ. ಇದು ಅತ್ಯಂತ ವಿರಳ. ಕಾರಣ ಟಾಟಾ ಸೇರಿದಂತೆ ಇತರ ಆಟೋಮೊಬೈಲ್ ಕಂಪನಿ ಮಾಲೀಕರ ಬಳಿ ಇತರ ಬ್ರ್ಯಾಂಡ್ ಕಾರುಗಳಿವೆ. ಆದರೆ ಆನಂದ್ ಬಳಿ ಕೇವಲ ಮಹೀಂದ್ರ ಕಾರುಗಳು ಮಾತ್ರ ಇವೆ. ಅದರಲ್ಲೂ ಆನಂದ್ ಮಹೀಂದ್ರ ಬಳಿಕ 5 ಕಾರುಗಳಿವೆ.