ಭರ್ಜರಿ ಆಫರ್; 6.7 ಲಕ್ಷ ರೂ. ಡಿಸ್ಕೌಂಟ್ ಘೋಷಿಸಿದ ಇಂಡಿಯನ್ ಮೋಟರ್‌ಸೈಕಲ್!

First Published | May 12, 2020, 2:50 PM IST

ಕ್ರೂಸರ್ ಬೈಕ್‌ಗಳಲ್ಲಿ ಅತ್ಯಂತ ಜನಪ್ರಿಯ ಬೈಕ್ ಆಗಿರುವ ಇಂಡಿಯನ್ ಮೋಟಾರ್‌ಸೈಕಲ್ ಭರ್ಜರಿ ಆಫರ್ ಘೋಷಿಸಿದೆ. ಕೆಲ ಮಾಡೆಲ್ ಬೈಕ್ ಮೇಲೆ ಗರಿಷ್ಠ  6.7 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ಭಾರತದ ಗ್ರಾಹಕರಿಗೆ ಡಿಸ್ಕೌಂಟ್ ಆಫರ್ ನೀಡಿರುವ ಇಂಡಿಯನ್ ಮೋಟರ್‌ಸೈಕಲ್, ನಿಯಮಿತ ಅವಧಿಗೆ ಸೀಮಿತಗೊಳಿಸಿದೆ. ಇದು BS4 ಬೈಕ್‌ಗಳ ಕೆಲ ಮಾಡೆಲ್ ಮೇಲೆ ಮಾತ್ರ. ಯಾವೆಲ್ಲ ಬೈಕ್‌ಗೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ ಅನ್ನೋ ವಿವರ ಇಲ್ಲಿದೆ 

2019ರ BS4 ಮಾಡೆಲ್ ಮೇಲೆ ಇಂಡಿಯನ್ ಮೋಟರ್‌ಸೈಕಲ್ ಭರ್ಜರಿ ಆಫರ್ ಘೋಷಿಸಿದೆ.
ಭಾರತದ ಗ್ರಾಹಕರಿಗೆ ಈ ಆಫರ್ ನೀಡಲಾಗಿದ್ದು, ಇಂಡಿಯನ್ ಮೋಟರ್‌ಸೈಕಲ್ ಖರೀದಿಸುವ ಗ್ರಾಹಕರಿಗೆ ಈ ಭರ್ಜರಿ ಡಿಸ್ಕೌಂಟ್ ಸಿಗಲಿದೆ. 6 ಇಂಡಿಯನ್ ಮೋಟರ್‌ಸೈಕಲ್ ಮಾಡೆಲ್ ಮೇಲೆ ಡಿಸ್ಕೌಂಟ್ ನೀಡಲಾಗಿದೆ
Tap to resize

ಡಾರ್ಕ್ ಹಾರ್ಸ್ ಮಾಡೆಲ್‌ಗೆ ಗರಿಷ್ಠ 6.7 ಲಕ್ಷ ರೂಪಾಯಿ ಡಿಸ್ಕೌಂಡ್ ನೀಡಲಾಗಿದೆ. ಭಾರತದಲ್ಲಿ ಈ ಬೈಕ್ ಆನ್ ರೋಡ್ ಬೆಲೆ 23.67 ಲಕ್ಷ ರೂಪಾಯಿ.
ಡಿಸ್ಕೌಂಟ್ ಬಳಿಕ ಇಂಡಿಯನ್ ಮೋಟರ್‌ಸೈಕಲ್ ಡಾರ್ಕ್ ಹಾರ್ಸ್ ಮಾಡೆಲ್ ಬೈಕ್‌ 16.96 ಲಕ್ಷ ರೂಪಾಯಿಗೆ ಲಭ್ಯವಾಗಲಿದೆ
ಇಂಡಿಯನ್ ಮೋಟರ್‌ಸೈಕಲ್ ಸ್ಕೌಟ್ ಬಾಬರ್ ಬೈಕ್ ಮೇಲೆ 4.8 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ
ಆಫರ್ ಬೆಲೆಯಲ್ಲಿ ಇದೀಗ ಇಂಡಿಯನ್ ಮೋಟರ್‌ಸೈಕಲ್ ಸ್ಕೌಟ್ ಬಾಬರ್ ಬೈಕ್ 11.44 ಲಕ್ಷ ರೂಪಾಯಿಗೆ ಲಭ್ಯವಾಗಲಿದೆ
ಇಂಡಿಯನ್ ಮೋಟರ್‌ಸೈಕಲ್ ಸ್ಕೌಟ್ ಬಾಬರ್ 2020 ಬೈಕ್ ಮೇಲೂ 3.57 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಡಿಸ್ಕೌಂಟ್ ಬಳಿಕ ಸ್ಕೌಟ್ ಬಾಬರ್ 2020 ಬೆಲೆ 14.80 ಲಕ್ಷ ರೂಪಾಯಿ
ಇಂಡಿಯನ್ FTR 1200 ಬೈಕ್ ಮೇಲೆ 3.85 ಲಕ್ಷ ರೂಪಾಯಿ ಡಿಸ್ಕೌಂಡ್ ನೀಡಲಾಗಿದೆ. ಈ ಮೂಲಕ 20. 16 ಲಕ್ಷ ರೂಪಾಯಿಗೆ ಬೆಲೆಗೆ ಲಭ್ಯವಾಗಲಿದೆ
ಇಂಡಿಯನ್ FTR 1200 S ರೇಸ್ ರೆಪ್ಲಿಕಾ ಬೈಕ್ ಬೆಲೆ 22.67 ಲಕ್ಷ ರೂಪಾಯಿ. ಆದರೆ ಈ ಬೈಕ್ ಮೇಲೆ 3.57 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ
ಹೆಸರು ಇಂಡಿಯನ್ ಮೋಟರ್‌ಸೈಕಲ್ ಆಗಿದ್ದರೂ ಇದು ಅಮೆರಿಕದ ಖ್ಯಾತ ಮೋಟರ್‌ಸೈಕಲ್ ಕಂಪನಿ

Latest Videos

click me!