ಮೋಟಾರು ವಾಹನ ಕಾಯ್ದೆ 1989ರ ತಿದ್ದುಪಡಿ ಮಾಡಲಾಗಿದ್ದು, ಡ್ರೈವಿಂಗ್ ಲೈಸೆನ್ಸ್, ವಾಹನ ಆರ್‌ಸಿ ಕಾರ್ಡ್ ಸೇರಿದಂತೆ ಹಲವು ದಾಖಲೆ ಪ್ರತಿಗಳು ಕಡ್ಡಾಯವಲ್ಲ. ಆ್ಯಪ್ ಮೂಲಕ ದೃಢೀಕೃತ ಇ ಡಾಕ್ಯುಮೆಂಚ್ ಮಾನ್ಯವಾಗಿದೆ. ಡಿಜಿಲಾಕರ್, ಎಂ ಪರಿವಾಹನ್ ಆ್ಯಪ್ ಮೂಲಕ ದಾಖಲೆ ಪತ್ರಗಳನ್ನು ಶೇಖರಿಸಿಕೊಟ್ಟವುದು ಮಾನ್ಯವಾಗಿದೆ.
ವಾಹನ ಚಾಲನೆ ವೇಳೆಯಲ್ಲಿ ನ್ಯಾವಿಗೇಶನ್ ಮ್ಯಾಪ್ ಕಾರಣಕ್ಕಾಗಿ ಮೊಬೈಲ್ ಬಳಸಬಹುದು. ಆದರೆ ನ್ಯಾವಿಗೇಶನ್ ಮ್ಯಾಪ್ ಬಳಕೆಯಿಂದ ಚಾಲನೆಗೆ ಯಾವುದೇ ಅಡೆ ತಡೆಯಾಗಬಾರದು. ನ್ಯಾವಿಗೇಶನ್ ಹೊರತು ಪಡಿಸಿದರೆ ಇನ್ಯಾವ ಕಾರಣಕ್ಕೂ ಚಾಲನೆ ವೇಳೆ ಮೊಬೈಲ್ ಬಳಸುವಂತಿಲ್ಲ.
ಅಕ್ಟೋಬರ್ 1 ರಿಂದ ಉಚಿತ ಗ್ಯಾಸ್ ಕನೆಕ್ಷನ್ ಲಭ್ಯವಿಲ್ಲ. ಎಪ್ರಿಲ್ 2020ಕ್ಕೆ ಅಂತ್ಯವಾಗಬೇಕಿದ್ದ ಉಚಿತ ಎಲ್‌ಪಿಜಿ ಗ್ಯಾಸ್ ಕೆನಕ್ಷನ್ ಕೊರೋನಾ ಕಾರಣದಿಂದ ಸ್ಪೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿತ್ತು
ವಿದೇಶಿ ಪ್ರವಾಸ ಕೈಗೊಳ್ಳುವವರ ಪ್ಯಾಕೇಜ್ 7 ಲಕ್ಷ ರೂಪಾಯಿ ದಾಟಿದರೆ ಟ್ಯಾಕ್ಸ್ ಕಲೆಕ್ಟೆಡ್ ಎಟ್ ಸೂರ್ಸ್(TCS) ಅನ್ವಯವಾಗಲಿದೆ. ಪ್ಯಾಕೇಜ್ 7 ಲಕ್ಷ ರೂಪಾಯಿ ದಾಟಿದರೆ ಶೇ.5 ರಷ್ಟು TCS ತೆರಿಗೆ ವಿಧಿಸಲಾಗುತ್ತದೆ. ಆದರೆ ಆದರೆ ವಿದೇಶದಲ್ಲಿ ವಿದ್ಯಾಭ್ಯಾಸಕ್ಕಾಗಿ ಸಾಲ ಪಡೆದುಕೊಂಡ ಹಣದಲ್ಲಿ ವಿದೇಶ ಪ್ರವಾಸ ಪ್ಯಾಕೇಜ್ ಖರೀದಿಸಿದರೆ TCS ಮೊತ್ತ 0.5%ಕ್ಕೆ ಇಳಿಸಲಾಗಿದೆ.
ಎಲ್ಲಾ ಆಹಾರ ಪದಾರ್ಥಗಳಿಗೆ ಬಳಕೆಗೆ ಯೋಗ್ಯವಾದ ದಿನಾಂಕ ನಮೂದಿಸುವುದು ಕಡ್ಡಾಯವಾಗಿದೆ. ಹಲವೆಡೆ ಸಿಹಿ ತಿಂಡಿ ಸೇರಿದಂತೆ ಇತರ ವಸ್ತುಗಳು ಬಿಡಿ ಬಿಡಿಯಾಗಿ ಸಿಗಲಿದೆ. ಒಂದೊಂದು ಸ್ವೀಟ್ ಖರೀದಿ ಮಾಡವು ಅವಕಾಶವಿದೆ. ಇನ್ನು ಮುಂದೆ ಪ್ರತಿ ಸ್ಪೀಟ್ ಕೂಡ ಬಳಕೆಗೆ ಯೋಗ್ಯ ದಿನಾಂಕ ಕಡ್ಡಯವಾಗಿ ಹಾಕಬೇಕಿದೆ.
ಕೊರೋನಾ ಬಳಿಕ ವಿಮೆಯಲ್ಲಿ ಕೆಲ ಬದಲಾವಣೆಗಳಾಗಿವೆ. ವಿಮೆ ಅನ್ವಯವಾಗದ 17 ಆರೋಗ್ಯ ಸಂಬಂಧಿಸಿದ ಸಮಸ್ಯೆಗಳನ್ನು ವಿಮೆಯಲ್ಲಿ ಸೇರಿಸಲಾಗಿದೆ. ಮಾನಸಿಕ ಒತ್ತಡ ಹಾಗೂ ಚಿಕಿ್ತ್ಸೆ ಕೂಡ ಇದೀಗ ವಿಮೆಗೆ ಒಳಪಡಲಿದೆ. 48 ತಿಂಗಳ ಮೊದಲು ವೈದ್ಯರಿಂದ ರೋಗನಿರ್ಣಯ ಮಾಡಲ್ಪಟ್ಟ ಯಾವುದೇ ಕಾಯಿಲೆ ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳೆಂದು ವರ್ಗೀಕರಿಸಲಾಗುತ್ತದೆ. ಇದಲ್ಲದೆ, ಪಾಲಿಸಿ ನೀಡಿದ ಮೂರು ತಿಂಗಳೊಳಗೆ ಯಾವುದೇ ರೋಗಲಕ್ಷಣಗಳು ಉಂಟಾಗುತ್ತವೆ ಎಂಬುದನ್ನು ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳ ಅಡಿಯಲ್ಲಿ ವರ್ಗೀಕರಿಸಲಾಗುತ್ತದೆ.
ಅಕ್ಟೋಬರ್ ತಿಂಗಳಿನಿಂದ ಟಿವಿ ಬೆಲೆ ಹೆಚ್ಚಾಗುತ್ತಿದೆ. ಆತ್ನಿರ್ಭರ್ ಭಾರತ್ ಯೋಜನೆಯಡಿ ವಿದೇಶದಿಂದ ಆಮದು ಮಾಡಿಕೊಳ್ಳುವ ಟಿವಿಗಳಿಗೆ ಶೇಕಡಾ 5 ರಷ್ಟು ಸುಂಕ ವಿಧಸಲಾಗುತ್ತದೆ.
ಆರ್‌ಬಿಐ ಹೊಸ ಮಾರ್ಗಸೂಚಿ ಪ್ರಕಾರ ಗ್ರಾಹಕರು ಇದೀಗ ತಮ್ಮ ಡೆಬಿಡ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹಣ ವರ್ಗಾವಣೆ, ಸ್ವೀಕೃತಿಯನ್ನು ನಿಯಂತ್ರಿಸಬಹುದು.
ಭಾರತದಲ್ಲಿ ಯಾವುದೇ ಖಾದ್ಯ ಎಣ್ಣೆಯೊಂದಿಗೆ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡುವುದನ್ನು 2020 ರ ಅಕ್ಟೋಬರ್ 1 ರಿಂದ ನಿಷೇಧಿಸಲಾಗಿದೆ" ಎಂದು FSSAI ಸೂಚನೆ ನೀಡಿದೆ.
ಅಕ್ಟೋಬರ್ 1 ರಿಂದ ಇ-ಕಾಮರ್ಸ್ ಆಪರೇಟರ್‌ಗಳಿಗೆ ಸರಕು ಮತ್ತು ಸೇವೆಗಳ ಮಾರಾಟದ ಮೇಲೆ ಶೇಕಡಾ 1 ರಷ್ಟು ತೆರಿಗೆಯನ್ನು ಕಡಿತಗೊಳಿಸಬೇಕಾಗುತ್ತದೆ. ಇದು ಆದಾಯ ತೆರಿಗೆ ಇಲಾಖೆ TCS ನಿಬಂಧನೆಗೆ ಒಳಪಡಲಿದೆ.