ಮಾಜಿ ಪ್ರಧಾನಿ ದೇವೇಗೌಡರಿಗೆ ಸರ್ಕಾರ ನೀಡಿದ ವೋಲ್ವೋ ಕಾರಿನ ವಿಶೇಷತೆ ಏನು?

First Published Oct 1, 2020, 2:38 PM IST

ಮಾಜಿ ಪ್ರಧಾನಿ ದೇವೇಗೌಡರ ಮನವಿ ಮೇರೆಗೆ ರಾಜ್ಯ ಸರ್ಕಾರ ದುಬಾರಿ ವೋಲ್ಪೋ ಕಾರು ನೀಡಿದೆ. ರಾಜ್ಯ ಸಭಾ ಸದಸ್ಯರಾದ ಬಳಿಕ ದೇವೇಗೌಡರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಾರು ನೀಡಿದ್ದಾರೆ. ಸಿಎಂ ಹಾಗೂ ಮಾಜಿ ಸಿಎಂಗೆ ಸರ್ಕಾರದಿಂದ ನೀಡಿರುವ ಕಾರಿಗಿಂತ ದೇವೇಗೌಡರಿಗೆ ನೀಡಿರುವ ಕಾರು ದುಬಾರಿಯಾಗಿದೆ. ದೇವೇಗೌಡರ ನೂತನ ಕಾರಿನ ವಿಶೇಷತೆ ಇಲ್ಲಿದೆ.

ರಾಜ್ಯ ಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಓಡಾಟಕ್ಕೆ ಕರ್ನಾಟಕ ಸರ್ಕಾರ ದುಬಾರಿ ಬೆಲೆಯ ವೋಲ್ಪೋ ಕಾರನ್ನು ನೀಡಲಾಗಿದೆ.
undefined
ರಾಜ್ಯಸಭಾ ಸದಸ್ಯರಾದ ನಂತರ ಕಾರು ನೀಡುವಂತೆ ದೇವೇಗೌಡರು, ಸಿಎಂಗೆ ಮನವಿ ಮಾಡಿದ್ದರು. ಹೆಚ್.ಡಿ.ಡಿ ಮನವಿಗೆ ಮುಖ್ಯಮಂತ್ರಿ ಬಿಎಸ್‌ವೈ ಅಸ್ತು ಎಂದಿದ್ದಾರೆ.
undefined
ದೇವೇ ಗೌಡರಿಗೆ ನೀಡಿರುವ ನೂತನ ‘ವೊಲ್ವೊ ಎಕ್ಸ್‌ಸಿ60ಡಿ5 ಮಾಡೆಲ್‌ ಕಾರಿನ ಮೂಲ ಬೆಲೆ 59.90 ಲಕ್ಷ ರೂಪಾಯಿ. ರಿಜಿಸ್ಟ್ರೇಶನ್, ತೆರಿಗೆ, ವಿಮೆ ಸೇರಿದರೆ ಈ ಕಾರಿನ ಮೊತ್ತ 74.90 ಲಕ್ಷ ರೂಪಾಯಿ.
undefined
ಸರ್ಕಾರದ ಬಳಕೆಗೆ ಖರೀದಿಸುವ ಕಾರಿಗೆ ತೆರಿಗೆ ಇಲ್ಲ. ಹೀಗಾಗಿ ದೇವೇಗೌಡರಿಗೆ ನೀಡಿರುವ ಕಾರನ್ನು 60 ಲಕ್ಷರೂಪಾಯಿಗೆ ಕರ್ನಾಟಕ ಸರ್ಕಾರ ಖರೀದಿಸಿದೆ.
undefined
ದೇವೇ ಗೌಡರಿಗೆ ನೀಡಿರುವ ವೋಲ್ವೋ ಕಾರು 1969cc, 4 ಸಿಲಿಂಡರ್ ಎಂಜಿನ್ ಹೊಂದಿದೆ. 235bhp ಪವರ್ ಹಾಗೂ 480Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
undefined
‘ವೊಲ್ವೊ ಎಕ್ಸ್‌ಸಿ60ಡಿ5 ಮಾಡೆಲ್‌ ಕಾರು ಮೈಲೇಜ್ 11.2 kmpl(ARAI). ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.
undefined
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಳಿ ಎರಡು ಟೊಯೋಟಾ ಫಾರ್ಚುನ್ ಕಾರುಗಳಿವೆ.
undefined
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ವಿಧಾನಸಭಾ ಸಚಿವಾಲಯದಿಂದ ಟೊಯೋಟಾ ಫಾರ್ಚ್ಯೂನರ್‌ ಕಾರು‌ ನೀಡಲಾಗಿದೆ. ಈಗ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೂ ದುಬಾರಿ ಬೆಲೆಯ ಕಾರು ನೀಡಲಾಗಿದೆ.
undefined
click me!