45 ವರ್ಷಕ್ಕಿಂತ ಮೇಲ್ಪಟ್ಟವರು ಸ್ವಯಂ ನಿವೃತ್ತಿ ಪಡೆಯಿರಿ; ಮಿಟ್ಸುಬಿಶಿ ಪ್ರಕಟಣೆಗೆ ನೌಕರರು ಕಂಗಾಲು!

First Published | Sep 27, 2020, 3:37 PM IST

ಕೊರೋನಾ ವೈರಸ್ ಹೊಡೆತಕ್ಕೆ ನಲುಗಿದ ಹಲವು ಆಟೋಮೊಬೈಲ್ ಕಂಪನಿಗಳು ವೇತನ ಕಡಿತ, ಉದ್ಯೋಗ ಕಡಿತ, ನಿರ್ವಹಣಾ ವೆಚ್ಚ ಕಡಿತ ಸೇರಿದಂತೆ ಹಲವು ಕಡಿತ ಮಾಡುತ್ತಿದೆ. ಇದೀಗ ಪ್ರತಿಷ್ಠಿತ ಮಿಟ್ಸುಬಿಶಿ ಮೋಟಾರ್ಸ್ ಕೂಡ ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿ ಕೋಟಿ ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಇದೀಗ ನಷ್ಟ ತಾಳಲಾರದ ಕಂಪನಿ 600 ನೌಕರರ ಉದ್ಯೋಗ ಕಡಿತ ಮಾಡುತ್ತಿದೆ.

ಕೊರೋನಾ ವೈರಸ್ ಕಾರಣ ಪ್ರತಿಷ್ಠಿತ ಆಟೋಮೇಕರ್ ಮಿಟ್ಸುಬಿಶಿ ಮೋಟಾರ್ಸ್ ಇದೀಗ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ 600 ಉದ್ಯೋಗ ಕಡಿತ ಮಾಡಲು ನಿರ್ಧರಿಸಿದೆ.
undefined
ಶೀಘ್ರದಲ್ಲೇ 500 ರಿಂದ 600 ನೌಕಕರು ಸ್ವಯಂ ನಿವೃತ್ತಿ ಪಡೆದುಕೊಳ್ಳಬೇಕು ಎಂದು ಮಿಟ್ಸುಬಿಶಿ ಮೋಟಾರ್ಸ್ ನೌಕರರಿಗೆ ಸೂಚಿಸಿದೆ. ನವೆಂಬರ್ ಅಂತ್ಯದ ವೇಳೆಗೆ ಒಟ್ಟು 600 ನೌಕರರಿಗೆ ಕಂಪನಿ ಗೇಟ್ ಪಾಸ್ ನೀಡಲಿದೆ.
undefined

Latest Videos


45 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಪಡೆಕೊಳ್ಳುವಂತೆ ಮಿಟ್ಸುಬಿಶಿ ಕಂಪನಿ ಹೇಳಿದೆ. ಈ ಮೂಲಕ 600 ಮಂದಿಯ ಉದ್ಯೋಗ ಕಡಿತ ಮಾಡಲಿದೆ.
undefined
ಕೊರೋನಾ ವೈರಸ್, ಲಾಕ್‌ಡೌನ್, ಸಪ್ಲೈ ಚೈನ್ ಸ್ಥಗಿತದಿಂದ ಮಿಟ್ಸುಬಿಶಿ ಮೋಟಾರ್ಸ್ ಈಗಾಗಲೇ 360 ಬಿಲಿಯನ್ ಜಪಾನ್ ಯೆನ್ ನಷ್ಟ ಅನುಭವಿಸಿದೆ.
undefined
ಮುಂದಿನ 2 ವರ್ಷ ಶೇಕಡಾ 20ರಷ್ಟು ನಿರ್ವಹಣಾ ವೆಚ್ಚ ಸೇರಿದಂತೆ ಇತರ ವೆಚ್ಚ ಕಡಿತಗೊಳಿಸಲು ಮುಂದಾಗಿದೆ. ಈ ಮೂಲಕ ನಷ್ಟ ಸರಿದೂಗಿಸಲು ಪ್ರಯತ್ನ ಮಾಡುತ್ತಿದೆ.
undefined
ಕೊರೋನಾ ವೈರಸ್ ಕಾರಣ ಮಿಟ್ಸುಬಿಶಿ ಮಾರಾಟ ಗಣನೀಯ ಕುಸಿತವಾಗಿದೆ. ಚೀನಾ ಹಾಗೂ ಏಷ್ಯಾ ಮಾರುಕಟ್ಟೆಯಲ್ಲಿ ಬೇಡಿಕೆ ಗಣನೀಯವಾಗಿ ಕುಸಿದಿದೆ ಎಂದು ಮಿಟ್ಸುಬಿಶಿ ಹೇಳಿದೆ
undefined
ಬೇಡಿಕೆ ಕುಸಿತು, ಅತೀಯಾದ ನಷ್ಟದ ಕಾರಣ ಮುಂದಿನ ವರ್ಷ(2021)ದಿಂದ ಮಿಟ್ಸುಬಿಶಿ ಜನಪ್ರಿಯ ಕಾರಾದ ಪಜೆರೊ ಸ್ಥಗಿತಗೊಳಿಸಲು ಕಂಪನಿ ನಿರ್ಧರಿಸಿದೆ.
undefined
ಪಜೆರೊ SUV ಕಾರು ಉತ್ಪಾದನೆ ಮಾಡುತ್ತಿದ್ದ ಜಪಾನ್‌ನ ಘಟಕ ಸ್ಥಗಿತಗೊಳಿಸಲು ಮಿಟ್ಸುಬಿಶಿ ನಿರ್ಧರಿಸಿದೆ. ಕೊರೋನಾ ಕಾರಣ ಮಿಟ್ಸುಬಿಶಿ ಕಂಪನಿ ಇದೀಗ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
undefined
click me!