Aprilia SR 175: ಇಂಡಿಯನ್‌ ಮಿಲಿಟರಿಯನ್ನು ಗೌರವಿಸೋ ಏಪ್ರಿಲಿಯಾ SR 175 ಲಾಂಚ್; ಕಡಿಮೆ ಬೆಲೆಗೆ ಸ್ಕೂಟಿ!

Published : Jun 22, 2026, 10:50 AM IST

ಭಾರತೀಯ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ವಿಶೇಷ ಆವೃತ್ತಿಯ ಏಪ್ರಿಲಿಯಾ SR 175 ಟ್ರಿಬ್ಯೂಟ್ ಎಡಿಷನ್ (Aprilia SR 175 Tribute Edition) ಸ್ಕೂಟರ್ ಈಗ ಭಾರತದಲ್ಲಿ 1.21 ಲಕ್ಷ ರೂಪಾಯಿಗೆ ಬಿಡುಗಡೆಯಾಗಿದೆ. ಇದು ಮಿಲಿಟರಿ ಸಮವಸ್ತ್ರದಿಂದ ಪ್ರೇರಿತವಾಗಿದೆ.

PREV
14
ಕಲರ್‌ ಹೇಗಿದೆ?

ಕ್ಯಾಮೊ ಗ್ರೀನ್ ಹಾಗೂ ಕೇಸರಿ- ಹಳದಿ ಬಣ್ಣ ಹೊಂದಿದೆ.

ಈ ಸ್ಕೂಟಿ ಎಡಿಷನ್ ಉಳಿದ SR 175 ತರವೇ ಇದೆ.

24
ವಿಶೇಷತೆ ಏನು?

ಈ ಸ್ಕೂಟರ್‌ನಲ್ಲಿ 174.4cc, ಸಿಂಗಲ್-ಸಿಲಿಂಡರ್ ಎಂಜಿನ್ ನೀಡಲಾಗಿದ್ದು, ಇದು 7,200rpm ನಲ್ಲಿ 13.08bhp ಪವರ್, 6,000rpm ನಲ್ಲಿ 14.14Nm ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು CVT ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ, ಅಷ್ಟೇ ಅಲ್ಲದೆ ಒಳ್ಳೆಯ ಕಾರ್ಯಕ್ಷಮತೆ ಹೊಂದಿದೆ. ಇದು ಗಂಟೆಗೆ ಗರಿಷ್ಠ 95 ಕಿಲೋಮೀಟರ್ ವೇಗದಲ್ಲಿ ಹೋಗುವುದು.

34
ಏನೇನು ಫೀಚರ್ಸ್‌ ಇವೆ?

ಈ ಸ್ಕೂಟರ್‌ನಲ್ಲಿ ಎಲ್‌ಇಡಿ ಹೆಡ್‌ಲೈಟ್, ಟೇಲ್ ಲೈಟ್, ಬ್ಲೂಟೂತ್ ಕನೆಕ್ಟಿವಿಟಿ ಇದೆ. ಕಲರ್ TFT ಡಿಸ್‌ಪ್ಲೇ, ಬ್ರೇಕ್‌ ಹಾಕಲು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಕೊಡಲಾಗಿದೆ. ಸ್ಟೀಲ್ ಫ್ರೇಮ್‌ ಹಾಕಿ ಸ್ಕೂಟಿ ಮಾಡಲಾಗಿದೆ. ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಮೋನೋಶಾಕ್ ಸಸ್ಪೆನ್ಷನ್ ಕೊಡಲಾಗಿದೆ.

44
ಗಾಡಿ ಚಕ್ರ ಹೇಗಿದೆ?

ಇದು ಟ್ಯೂಬ್‌ಲೆಸ್ ಟೈರ್‌ ಹೊಂದಿದೆ. 14-ಇಂಚಿನ ಅಲಾಯ್ ಚಕ್ರಗಳಿವೆ. ಇದರಿಂದ ಫಾಸ್ಟ್‌ ಆಗಿ ಹೊಡೆಯಲು, ತಿರುವುಗಳಲ್ಲಿ ಆರಾಮಾಗಿಹೋಗಲು ಸಹಾಯ ಮಾಡುತ್ತದೆ. ಈ ಸ್ಕೂಟಿ ಬುಕಿಂಗ್‌ ಮುಕ್ತಾಯ ಆಗಿದೆ, ಆದಷ್ಟು ಬೇಗ ಜನರಿಗೆ ಸಿಗಲಿದೆ.

Read more Photos on
click me!

Recommended Stories