Best and Cheapest 7 Seater Cars: 26ಕಿಮೀ ಮೈಲೇಜ್, 6 ಏರ್‌ಬ್ಯಾಗ್; ಭಾರತ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ 7 ಸೀಟರ್ ಕಾರುಗಳು ಇಲ್ಲಿವೆ

Published : Aug 17, 2026, 05:26 PM IST

ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆಯ 7 ಸೀಟರ್ ಕಾರುಗಳ ಬಗ್ಗೆ ಈ ಲೇಖನವು ಮಾಹಿತಿ ನೀಡುತ್ತದೆ. ಮಾರುತಿ ಎರ್ಟಿಗಾ, ಮಹೀಂದ್ರ ಬೊಲೆರೊ, ಮತ್ತು ರೆನಾಲ್ಟ್ ಟ್ರೈಬರ್‌ನಂತಹ ಜನಪ್ರಿಯ ಮಾದರಿಗಳ ಬೆಲೆ, ವೈಶಿಷ್ಟ್ಯಗಳು, ಮೈಲೇಜ್ ಮತ್ತು ಸುರಕ್ಷತಾ ವಿವರಗಳನ್ನು ಇಲ್ಲಿ ವಿವರಿಸಲಾಗಿದೆ.

PREV
17
Maruti Suzuki Ertiga

ದೇಶದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಕಾರು ಇದಾಗಿದ್ದು, ಅತಿ ಹೆಚ್ಚು ಮಾರಾಟವಾಗುವ 7 ಸೀಟರ್ ಎಂಪಿವಿಗಳಲ್ಲಿ ಇದು ಒಂದು. ಇದರ ಹೊರಭಾಗದ ವಿನ್ಯಾಸವು ಅತ್ಯಂತ ಪ್ರೀಮಿಯಂ ಆಗಿ ಕಾಣುತ್ತದೆ, ಇದರಲ್ಲಿ 3D ಕ್ರೋಮ್ ಗ್ರಿಲ್ ಮತ್ತು ಆಕರ್ಷಕ ಟೈಲ್ ಲ್ಯಾಂಪ್‌ಗಳಿವೆ. ಆರಾಮಾದಾಯಕ ಸೀಟ್, ವಿಶಾಲವಾದ ಲೇಗ್ ರೂಮ್ ಪ್ರಯಾಣಿಕರಿಗೆ ಇಷ್ಟವಾಗುತ್ತದೆ. 7 ಇಂಚು ಸ್ಟಾರ್ ಪ್ಲೇ ಪ್ರೋ ಇನ್ಪೋಟೈನ್ಮೆಂಟ್ ಸಿಸ್ಟಮ್, ಪ್ಯಾಡಲ್ ಶಿಫ್ಟರ್‌ಗಳು, ಕ್ರೂಸ್ ಕಂಟ್ರೋಲ್, ರೂಫ್-ಮೌಂಟೆಡ್ ಎಸಿ ವೆಂಟ್‌ಗಳು ಮತ್ತು ಕೂಲ್ಡ್ ಕಪ್ ಹೋಲ್ಡರ್‌ಗಳಂತಹ ಪ್ರಾಯೋಗಿಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದರ ಎಕ್ಸ್-ಶೋರೂಮ್ ಬೆಲೆ ₹8.85 ಲಕ್ಷದಿಂದ ಪ್ರಾರಂಭವಾಗುತ್ತದೆ.

27
Maruti Suzuki Ertiga

ಕಾರ್ಯಕ್ಷಮತೆಗೆ ಬಂದರೆ ಎರ್ಟಿಗಾ 103 ಪಿಎಸ್ ಪವರ್ ನೀಡುವ 1.5 ಲೀಟರ್ ಸ್ಮಾರ್ಟ್ ಹೈಬ್ರೀಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 5 ಸ್ಪೀಡ್ ಮ್ಯಾನುವಲ್, 6 ಸ್ಪೀಡ್ ಆಟೋಮೆಟಿಕ್, ಫ್ಯಾಕ್ಟರಿ ಫಿಟ್ಟೆಡ್ ಸಿಎನ್‌ಜಿ ಆಯ್ಕೆಗಳನ್ನು ಹೊಂದಿದೆ. 6 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ, ಇದು ISOFIX ಚೈಲ್ಡ್ ಸೀಟ್ ಮೌಂಟ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹೊಂದಿದೆ. ಪೆಟ್ರೋಲ್ ಮ್ಯಾನುವಲ್ ರೂಪಾಂತರವು 20.51 ಕಿ.ಮೀ/ಲೀಟರ್‌ನಷ್ಟು ಉತ್ತಮ ಮೈಲೇಜ್ ನೀಡಿದರೆ, CNG ರೂಪಾಂತರವು 26.11 ಕಿ.ಮೀ/ಕೆಜಿ ಮೈಲೇಜ್ ನೀಡುತ್ತದೆ.

37
2025 Mahindra Bolero

ಭಾರತದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದೆ. ಇದರ ಔಟ್‌ಲುಕ್ ಸಾಂಪ್ರದಾಯಿಕ, ಚೌಕಾಕಾರದ ಮತ್ತು ಬಲಿಷ್ಠ ವಿನ್ಯಾಸವನ್ನು ಹೊಂದಿದೆ. ಈ ಕಾರಿಗೆ ನೀಡಿರುವ ಲೋಹದ ಬಂಪರ್‌ಗಳು ಮತ್ತು ಮಹೀಂದ್ರಾದ ವಿಶಿಷ್ಟ ಗ್ರಿಲ್ ಸೇರಿವೆ. ಇದರ ಒಳಭಾಗವು ಸರಳವಾಗಿದ್ದರು ಹೆಚ್ಚು ವರ್ಷ ಬಾಳಿಕೆ ಬರುವಂತಹ ಕ್ಯಾಬಿನ್ ಹೊಂದಿದೆ. ಡಿಜಿಟಲ್ ಕ್ಲಸ್ಟರ್, ಪವರ್ ಸ್ಟೀರಿಂಗ್, ಮ್ಯಾನುವಲ್ ಏರ್ ಕಂಡಿಷನಿಂಗ್ ನಂತರ ಸೌಲಭ್ಯಗಳು ಇದ್ದು, ಪವರ್ ವಿಂಡೋ, ಬೇಸಿಕ್ ಆಡಿಯೋ ಸಿಸ್ಟಮ್ ನಂತರ ಫೀಚರ್‌ಗಳು ಲಭ್ಯವಿದೆ. 7 ಸೀಟರ್ ಸೌಲಭ್ಯವೂ ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ಎಕ್ಸ್-ಶೋರೂಮ್ ಬೆಲೆ ₹8.49 ಲಕ್ಷದಿಂದ ಪ್ರಾರಂಭವಾಗುತ್ತದೆ.

47
Mahindra Bolero

ಮಹೀಂದ್ರ ಬೋಲೋರೋ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಹಿಂಬದಿ ಸೀಟು ಬೆಲ್ಟ್ ನಂತರ ಪ್ರಾಥಮಿಕ ಭದ್ರತೆಗಳನ್ನು ಹೊಂದಿದೆ. ಶಕ್ತಿಯುವಾದ 1.5-ಲೀಟರ್, ಎಂಎಚ್‌ಎಡ್ಲ್ಯು75 ಡೀಸೆಲ್ ನೊಂದಿಗೆ ಕೆಲಸ ಮಾಡುತ್ತದೆ. 75ಬಿಎಂಪಿ ಪವರ್, 210 ಎನ್ಎಂ ಟಾರ್ಕ್ ಅನ್ನು ಉತ್ಪಾಧಿಸುತ್ತದೆ. ಇದು ಕೇವಲ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ಲಭ್ಯವಿದೆ. ದೃಢವಾದ ನಿರ್ಮಾಣ ಮತ್ತು ಬಲವಾದ ಲೋಹದ ಬಾಡಿಯನ್ನು ಹೊಂದಿದ್ದರೂ, ಈ ಶಕ್ತಿಯುತ ಎಸ್‌ಯುವಿ (SUV) ಸುಮಾರು 16 ಕಿ.ಮೀ/ಲೀಟರ್ ಮೈಲೇಜ್ ನೀಡುತ್ತದೆ (ARAI ಪ್ರಕಾರ).

57
2025 Renault Triber:

ಇದು ತನ್ನ ಕಾಂಪ್ಯಾಕ್ಟ್ ಸೈಜ್ ಹಾಗೂ ಅದ್ಬುತವಾದ ಸ್ಪೆಸ್ ಮ್ಯಾನೇಜ್ಮೆಂಟ್‌ಗೆ ಪ್ರಸಿದ್ಧಿ ಪಡೆದುಕೊಂಡಿದೆ. ಇದರ ಸ್ಟೋರಿ ಡಿಸೈನ್, ಮಸ್ಕುಲರ್ ಬಾಡಿ ಕ್ಲಾಡಿಂಗ್, ರೂಫ್ ರೈಲ್ಸ್ ಇದಕ್ಕೆ ಎಸ್‌ಯುವಿಯಂತಹ ರೂಪವನ್ನು ನೀಡಿದೆ. ಇಂಟಿಡಿಯರ್‌ನಲ್ಲಿ ಡ್ಯೂಯಲ್ ಟೋನ್ ಡ್ಯಾಶ್ ಬೋರ್ಡ್, 7 ಸೀಟರ್ ಲೇಔಟ್ ಇದೆ. ಇದರ ಮೂರನೇ ಸಾಲಿನಲ್ಲಿ 'ಈಜಿಫಿಕ್ಸ್' ಸೀಟರ್‌ಗಳನ್ನು ಸಂಪೂರ್ಣವಾಗಿ ಬಿಚ್ಚಿಡಬಹುದಾಗಿದೆ. ಫೀಚರ್‌ಗಳಲ್ಲಿ 8 ಇಂಚು ಟಚ್ ಸ್ಕ್ರೀನ್ ಸಿಸ್ಟಮ್, ಪುಷ್ ಬಟನ್ ಸ್ಟಾರ್ಟ್, ಸ್ಟಾಪ್, ಹಿಂಭಾಗದ ಎಸಿ, 6 ಸ್ಪೀಕರ್ ಆಡಿಯೋ ಸಿಸ್ಟಮ್ ಇದೆ. ಇವು ಪ್ರಯಾಣವನ್ನು ಮತ್ತಷ್ಟು ಉತ್ತಮ ಮಾಡುತ್ತವೆ. ಈ ಕಾರಿನ ಎಕ್ಸ್ ಶೋರೂಮ್ ಬೆಲೆ 5,80,875 ರೂಪಾಯಿ ಇದೆ.

1.0-ಲೀಟರ್ ಎನರ್ಜಿ ಪೆಟ್ರೋಲ್ ಎಂಜಿನ್. 72 ಪಿಎಸ್ ಪವರ್, 96 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು 5 ಸ್ಪೀಡ್ ಮ್ಯಾನುವಲ್, ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆ ಯೊಂದಿಗೆ ಸಿಎನ್‌ಜಿ ಕೂಡ ಲಭ್ಯವಿದೆ. ಭದ್ರತೆಯ ವಿಚಾರದಲ್ಲಿ ಗ್ಲೋಬಲ್ ಎನ್‌ಸಿಎಪಿ ಇಂದ 4 ಸ್ಟಾರ್ ರೇಟಿಂಗ್ ಹೊಂದಿದೆ. 6 ಏರ್‌ಬ್ಯಾಗ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಟಿಪಿಎಂಎಸ್ ನಂತರ ಫೀವರ್ ಗಳಿದೆ. ಇದರ ಮೈಲೆಜ್ 18.2 ರಿಂದ 20 ಕಿಮೀ/ಲೀಟರ್ ವರೆಗೂ ನೀಡುತ್ತದೆ ಎಂದು ಕಂಪನಿ ಕ್ಲೈಮ್ ಮಾಡಿದೆ.

67
2025 Nissan Magnite:

ಕಾರ್ಯಕ್ಷಮತೆ ವಿಚಾರದಲ್ಲಿ ನಿಸ್ಸಾನ್ ಮ್ಯಾಗ್ನೈಟ್ 1.0 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಜೊತೆಗೆ 72ಪಿಎಸ್ ಪವರ್, 96 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಬಳಕೆದಾರರಿಗೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್ ಬಾಕ್ಸ್ ಆಯ್ಕೆಯನ್ನು ನೀಡುತ್ತದೆ. ಭದ್ರತೆಯ ವಿಚಾರಕ್ಕೆ ಬಂದರೆ 6 ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಇಬಿಡಿ ಹೊಂದಿರುವ ಎಬಿಎಸ್ ನಂತರ ಫೀಚರ್‌ ಸ್ಟಾಂಡರ್ಡ್ ಹೊಂದಿದೆ. ಇಂದನ ಸಾಮರ್ಥ್ಯ ವಿಚಾರಕ್ಕೆ ಬಂದರೆ, ಪೆಟ್ರೋಲ್ ವರ್ಸನ್ ಸುಮಾರು 19.3 ರಿಂದ 19.6 ಕೆಮೀ/ಲೀ ವರೆಗೂ ಮೈಲೇಜ್ ನೀಡುತ್ತದೆ.

77
2026 Nissan Gravite:

ಭಾರತದ ಕಾರು ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆಯ ಬೆಲೆಯ 7-ಸೀಟರ್ ಕಾರು. ಇದು ನಿಸ್ಸಾನ್ ಸಿಗ್ನೆಚರ್ ಗ್ರಿಲ್, ಶರ್ಪ್ ಎಲ್‌ಇಡಿ ಹೆಡ್ ಲ್ಯಾಂಪ್‌ಗಳನ್ನು ಹೊಂದಿರುವ ಅತ್ಯಧುನಿಕ ಡಿಸೈನ್ ಹೊಂದಿದೆ. ಇದರ ಇಂಟಿರಿಯರ್‌ನಲ್ಲಿ ಪ್ರೀಮಿಯಂ ಫಿನಿಶಿಂಗ್‌ ಹೊಂದಿರುವ ಮಾಡ್ಯುಲರ್ ಕ್ಯಾಬಿನ್ ಹೊಂದಿದೆ. ಇದರಲ್ಲಿ ಬಿಚ್ಚಿಡಲು ಸಾಧ್ಯವಾಗುವಂತಹ ಮೂರನೇ ಸಾಲಿನ ಸೀಟುಗಳಿದೆ. ಇದು 08 ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಮತ್ತು ಡಿಜಿಟಲ್ ಇನ್ಸ್ಟ್ರಮೆಂಟ್ ಕ್ಲಸ್ಟರ್ ನಂತಹ ಸ್ಮಾರ್ಟ್ ವಿಶೇಷತೆಗಳನ್ನು ಹೊಂದಿದೆ. ಇದರ ಎಕ್ಸ್ ಶೋ ರೂಮ್ ಬೆಲೆ 5,73,400 ರೂಪಾಯಿಯಿಂದ ಆರಂಭವಾಗುತ್ತಿದೆ.

Read more Photos on
click me!

Recommended Stories