ಹೊಸ ಬಣ್ಣ, ಹೊಸ ಎಂಜಿನ್, ಬರುತ್ತಿದೆ i20,ಪೋಲೊ ಪ್ರತಿಸ್ಪರ್ಧಿ ಟಾಟಾ ಅಲ್ಟ್ರೋಜ್!

First Published | Dec 23, 2020, 7:11 PM IST

ಮಾರುತಿ ಬಲೆನೋ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಗಿ ರಸ್ತೆಗಿಳಿದಿರುವ ಟಾಟಾ ಅಲ್ಟ್ರೋಜ್ ಕಾರು ಇದೀಗ ಹೊಸ ಬಣ್ಣ ಹಾಗೂ ಹೊಸ ಎಂಜಿನ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ಅಲ್ಟ್ರೋಜ್ ವಿಶೇಷ ಆಫರ್ ಕೂಡ ಘೋಷಿಸಲಿದೆ. ನೂತನ ಟರ್ಬೋ ಪೆಟ್ರೋಲ್ ಎಂಜಿನ್ ಅಲ್ಟ್ರೋಜ್ ಕಾರಿನ ಬಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಟರ್ಬೋ ಪೆಟ್ರೋಲ್ ಎಂಜಿನ್ ವಿಶೇಷತೆಯೊಂದಿಗೆ ನೂತನ ಟಾಟಾ ಅಲ್ಟ್ರೋಜ್ ಹೊಸ ವರ್ಷದ ಆರಂಭದಲ್ಲೇ ಬಿಡುಗಡೆಯಾಗಲಿದೆ.
2019ರ ಜಿನೆವಾ ಮೋಟಾರು ಶೋನಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್ ಅಲ್ಟ್ರೋಜ್ ಕಾರು ಪರಿಚಯಿಸಲಾಗಿತ್ತು. ಕೊರೋನಾ ಕಾರಣ ಕೊಂಚ ತಡವಾದರೂ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ 2021ರ ಜನವರಿಯಲ್ಲಿ ಬಿಡುಗಡೆಯಾಗುತ್ತಿದೆ.
Tap to resize

ಸದ್ಯ ಟಾಟಾ ಅಲ್ಟ್ರೋಜ್ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಕಾರುಗಳು ಲಭ್ಯವಿದೆ. ಇದರೊಂದಿಗೆ ಇದೀಗ ಟರ್ಬೋ ಪೆಟ್ರೋಲ್ ಕಾರು ಬಿಡುಗಡೆಯಾಗುತ್ತಿದೆ.
ನೂತನ ಅಲ್ಟ್ರೋಜ್ ನೆಕ್ಸಾನ್ ಕಾರಿನಷ್ಟೆ ಪವರ್ ಹೊಂದಿರಲಿದೆ. 7 ಸ್ಪೀಡ್ ಡ್ಯುಯೆಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹಾಗೂ 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ.
ಇದು ಟಾಟಾ ಮೋಟಾರ್ಸ್ ಮೊತ್ತದ ಮೊದಲ ಡ್ಯುಯೆಲ್ ಕ್ಲಚ್ ಟ್ರಾನ್ಸ್‌ಮಿಶನ್ ವಾಹನವಾಗಿದೆ. ಇನ್ನು 7 ಇಂಚಿನ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ.
ಅಲ್ಟ್ರೋಜ್ ಕಾರು ಈಗಾಗಲೇ ಗರಿಷ್ಠ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಇನ್ನು ಟಾಟಾ ಸುರಕ್ಷತೆಯಲ್ಲಿ ರಾಜಿಯಾಗುವುದಿಲ್ಲ ಎಂದಿದೆ. ಹೀಗಾಗಿ ಅಲ್ಟ್ರೋಜ್ ಟರ್ಬೋ ಕಾರು ಕಾರು 5 ಸ್ಟಾರ್ ಸೇಫ್ಟಿ ಹೊಂದಿರಲಿದೆ.
ಹ್ಯುಂಡೈ ಐ20 ಟರ್ಬೋ, ಫೋಕ್ಸ್‌ವ್ಯಾಗನ್ ಪೋಲೋ ಟಿಎಸ್ಐ ಟರ್ಬೋ ಕಾರಿಗೆ ಪ್ರತಿಸ್ಪರ್ಧಿಯಾಗಿ ಅಲ್ಟ್ರೋಜ್ ಕಾರು ರಸ್ತೆಗಳಿಯಲಿದೆ.
ಅಲ್ಟ್ರೋಜ್ ಕಾರಿನ ಆರಂಭಿಕ ಬೆಲೆ 5.44 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟರ್ಬೋ ಪೆಟ್ರೋಲ್ ಅಲ್ಟ್ರೋಜ್ ಕಾರಿನ ಬೆಲೆ ಕೊಂಚ ಏರಿಕೆಯಾಗಲಿದೆ.

Latest Videos

click me!