ಹೆಚ್ಚಾಯ್ತು ನಿಸಾನ್ ಮ್ಯಾಗ್ನೈಟ್ ಬೇಡಿಕೆ; ನಿರ್ವಹಣೆ ವೆಚ್ಚ ಪ್ರತಿ ಕಿ.ಮೀಗೆ 29 ಪೈಸೆ ಮಾತ್ರ!

First Published | Dec 19, 2020, 2:51 PM IST

ನಿಸಾನ್ ಮ್ಯಾಗ್ನೈಟ್ ಕಾರು ಡಿಸೆಂಬರ್ 2 ರಂದು ಬಿಡುಗಡೆಯಾಗಿದೆ. ಸದ್ಯ ಭಾರತದಲ್ಲಿ ಲಭ್ಯವಿರುವ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಅತ್ಯಂತ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕೆಗೆ ಮ್ಯಾಗ್ನೈಟ್ ಪಾತ್ರವಾಗಿದೆ. ದಾಖಲೆಯ ಪ್ರಮಾಣದ ಕಾರುಗಳು ಬುಕ್ ಆಗಿವೆ. ಕಾರಿನ ಬೇಡಿಕೆ ಹೆಚ್ಚಾಗಲು ಮತ್ತೊಂದು ಕಾರಣ ಇದರ ನಿರ್ವಹಣಾ ವೆಚ್ಚ ಅತ್ಯಂತ ಕಡಿಮೆಯಾಗಿದೆ.

ನಿಸಾನ್ ಮ್ಯಾಗ್ನೈಟ್ ಭಾರತದ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಉತ್ತಮ ಸಬ್ ಕಾಂಪಾಕ್ಟ್ SUV ಕಾರಾಗಿದೆ. ಹೀಗಾಗಿ ಇದರ ಬೇಡಿಕೆಯೂ ಹೆಚ್ಚಾಗಿದೆ
ಬಿಡುಗಡೆಯಾದ 17 ದಿನಕ್ಕೆ 15 ಸಾವಿರ ನಿಸಾನ್ ಮ್ಯಾಗ್ನೈಟ್ ಕಾರು ಬುಕ್ ಆಗಿವೆ. ಇನ್ನು ದೇಶದಲ್ಲಿ 1.5 ಲಕ್ಷ ಮಂದಿ ನಿಸಾನ್ ಮ್ಯಾಗ್ನೈಟ್ ಕಾರಿನ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
Tap to resize

ಕಾರಿನ ಬೇಡಿಕೆ ಹೆಚ್ಚಾಗಲು ಇದು ಕಡಿಮೆ ಬೆಲೆಯ ಕಾರೊಂದೆ ಕಾರಣವಲ್ಲ. ಇದರ ನಿರ್ವಹಣಾ ವೆಚ್ಚ ಕೂಡ ಅತ್ಯಂತ ಕಡಿಮೆಯಾಗಿದೆ. ಪ್ರತಿ ಕೀಲೋಮೀಟರ್‌ಗೆ 29 ಪೈಸೆಯಾಗಲಿದೆ.
ನಿರ್ವಹಣಾ ವೆಚ್ಚ ಕಡಿಮೆಯಾಗಲು ಪ್ರಮುಖ ಕಾರಣವಿದೆ. ನಿಸಾನ್ 2 ವರ್ಷ ಅಥವಾ 50,000 ಕಿ.ಮೀ ಉಚಿತ ವಾರೆಂಟಿ ನೀಡುತ್ತಿದೆ. ಇದರ ಜೊತೆಗೆ 5 ವರ್ಷಕ್ಕೆ ವಿಸ್ತರಿಸುವ ಅವಕಾಶವಿದೆ.
5 ವರ್ಷ ಅಥವಾ 1 ಲಕ್ಷ ಕಿ.ಮೀಗೆ ವಿಸ್ತರಿಸುವ ಅವಕಾಶವಿದೆ. ಇನ್ನು ಫ್ರೀ ಸರ್ವೀಸ್ ಕೂಡ ಇರುವುದರಿಂದ ನಿಸಾನ್ ಮ್ಯಾಗ್ನೈಟ್ ಕಾರಿನ ನಿರ್ವಹಣಾ ವೆಚ್ಚಾ ಕಡಿಮೆಯಾಗಿದೆ.
ಗ್ರಾಹಕರಿಗೆ ಆನ್‌ಲೈನ್ ಮೂಲಕವೇ ಸರ್ವೀಸ್ ಮಾಹಿತಿ ಪಡೆದುಕೊಳ್ಳಬುದು. ಸರ್ವೀಸ್ ತಗುಲುವ ವೆಚ್ಚವನ್ನು ಲೆಕ್ಕಹಾಕುವ ಅವಕಾಶವಿದೆ. ಈ ಮೂಲಕ ನಿಸಾನ್ ಗ್ರಾಹಕರಿಗೆ ಎಲ್ಲಾ ಸೌಲಭ್ಯವನ್ನು ಹಾಗೂ ಸೇವೆಯನ್ನು ನೀಡುತ್ತಿದೆ.
ಡಿಸೆಂಬರ್ 31ರ ವರೆಗೆ ವಿಶೇಷ ಆಫರ್ ಮೂಲಕ ಕಾರು ಸಿಗಲಿದೆ. ಈ ತಿಂಗಳೊಳಗೆ ಬುಕ್ ಮಾಡುವ ಗ್ರಾಹಕರಿಗೆ ಕಾರಿನ ಆರಂಭಿಕ ಬೆಲೆ 4.99 ಲಕ್ಷ ರೂಪಾಯಿ ಮಾತ್ರ(ಎಕ್ಸ್ ಶೋ ರೂಂ).
ನಿಸಾನ್ ಮ್ಯಾಗ್ನೈಟ್ ಕಾರನ್ನು 11,000 ರೂಪಾಯಿಗೆ ಬುಕ್ ಮಾಡಿಕೊಳ್ಳಬಹುದು. ಈ ಮೂಲಕ ಕಡಿಮೆ ಬೆಲೆಗೆ ಅತ್ಯಂತ ಆಕರ್ಷಕ ನಿಸಾನ್ ಕಾರು ನಿಮ್ಮದಾಗಿಸಿಕೊಳ್ಳಬುಹುದು.

Latest Videos

click me!