#Goodbye2020: ಈ ವರ್ಷ ಭಾರತೀಯರು ಹೆಚ್ಚು ಇಷ್ಟಪಟ್ಟು ಖರೀದಿಸಿದ 10 ಕಾರು!

Published : Dec 22, 2020, 05:59 PM IST

2020ರ ಹಲವು ಏರಿಳಿತ ಕಂಡ ವರ್ಷ. ಕೊರೋನಾ ವೈರಸ್ ಹೊಡೆತ, ಲಾಕ್‌ಡೌನ್, ಕಂಪನಿ ಸ್ಥಗಿತ, ಆರ್ಥಿಕ ಹಿನ್ನಡೆ ಸೇರಿದಂತೆ ಹಲವು ಕಾರಣಗಳಿಂದ 2020ರ ವರ್ಷ ಬಹುತೇಕರ ಬದುಕಿನಲ್ಲಿ ಇನ್ನಿಲ್ಲದ ನೋವು ತರಿಸಿದೆ. ಆಟೋಮೊಬೈಲ್ ಇಂಡಸ್ಟ್ರೀ ಕೂಡ ಸಾಕಷ್ಟು ಕಹಿ ಅನುಭವಿಸಿದೆ. ಕೊರೋನಾ ಹಾಗೂ ಆರ್ಥಿಕ ಸಂಕಷ್ಟದ ನಡುವೆ ಭಾರತೀಯರು 2020ರಲ್ಲಿ ಅತೀ ಹೆಚ್ಚು ಹೆಚ್ಚು ಇಷ್ಟಪಟ್ಟ 10 ಕಾರುಗಳ ವಿವರ ಇಲ್ಲಿದೆ.

PREV
110
#Goodbye2020: ಈ ವರ್ಷ ಭಾರತೀಯರು ಹೆಚ್ಚು ಇಷ್ಟಪಟ್ಟು ಖರೀದಿಸಿದ 10 ಕಾರು!

2020ರಲ್ಲಿ ಆಟೋಮೊಬೈಲ್ ಕಂಪನಿಗಳ ಮಾರಾಟ ನಿರೀಕ್ಷಿತ ಮಟ್ಟ ತಲುಪಿಲ್ಲದಿದ್ದರೂ, ತೃಪ್ತಿಕರ ಮಾರಾಟವಾಗಿದೆ. 2020ರಲ್ಲಿ ಅತೀ ಹೆಚ್ಚು ಜನ ಖರೀದಿಸಿದ ವಾಹನಗಳ ಪೈಕಿ ಮಾರುತಿ ಸುಜುಕಿ ಸ್ವಿಫ್ಟ್ ಮೊದಲ ಸ್ಥಾನದಲ್ಲಿದೆ. ಈ ವರ್ಷ 1,42,624 ಸ್ವಿಫ್ಟ್ ಕಾರುಗಳು ಮಾರಾಟವಾಗಿದೆ.

210

2020ರ ಅಂತ್ಯದಲ್ಲಿ ನಾವಿದ್ದೇವೆ. ಈ ವರ್ಷ ಗರಿಷ್ಠ ಮಾರಾಟವಾದ ಕಾರುಗಳ ಪೈಕಿ 2ನೇ ಸ್ಥಾನ ಮಾರುತಿ ಸುಜುಕಿ ಬಲೆನೋ ಕಾರು ಪಡೆದುಕೊಂಡಿದೆ. ಬಲೆನೋ 1,35,956 ಕಾರುಗಳು ಮಾರಾಟವಾಗಿದೆ.

310

ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಬೇಡಿಕೆ ಹೆಚ್ಚು, ಕಡಿಮೆ ಬೆಲೆ, ನಿರ್ವಹಣೆ ವೆಚ್ಚ, ಮೈಲೇಜ್ ಸೇರಿದಂತೆ ಹಲವು ಕಾರಣಗಳಿಂದ ಮಾರುತಿ ಮುಂಚೂಣಿಯಲ್ಲಿದೆ. ಗರಿಷ್ಠ ಮಾರಾಟವಾದ ಕಾರುಗಳ ಪೈಕಿ ಮಾರುತಿ ಅಲ್ಟೋ 1,33,682 ಕಾರು ಮಾರಾಟವಾಗೋ ಮೂಲಕ 3ನೇ ಸ್ಥಾನದಲ್ಲಿದೆ.

410

ಮಾರುತಿ ಸುಜುಕಿ ವ್ಯಾಗನ್ಆರ್ 1,30,614 ಕಾರುಗಳು ಮಾರಾಟವಾಗಿದೆ. ಈ ಮೂಲಕ ಈ ವರ್ಷ ಮಾರಾಟವಾದ ಕಾರುಗಳ ಪೈಕಿ ವ್ಯಾಗನ್ಆರ್ 4ನೇ ಸ್ಥಾನದಲ್ಲಿದೆ.

510

2020ರ ಸಾಲಿನಲ್ಲಿ  1,11,101 ಕಾರು ಮಾರಾಟವಾಗೋ ಮೂಲಕ ಮಾರುತಿ ಸುಜುಕಿ ಡಿಸೈರ್ 5ನೇ ಸ್ಥಾನ ಪಡೆದುಕೊಂಡಿದೆ. ವಿಶೇಷ ಅಂದರೆ ಟಾಪ್ 5 ಸ್ಥಾನದಲ್ಲಿ ಮಾರುತಿ ಕಾರುಗಳೇ ವಿರಾಜಮಾನವಾಗಿದೆ.

610

ಕಿಟಾ ಸೆಲ್ಟೋಸ್ ಭಾರತದಲ್ಲಿ ಅತ್ಯುತ್ತಮ ಬೇಡಿಕೆಯ ಕಾರಾಗಿ ಹೊರಹೊಮ್ಮಿದೆ. ಕಿಯಾ ಸೆಲ್ಟೋಸ್ 91,417 ಕಾರುಗಳು ಮಾರಾಟವಾಗಿದೆ. ಈ ಮೂಲಕ 6ನೇ ಸ್ಥಾನದಲ್ಲಿದೆ.

710

7ನೇ ಸ್ಥಾನವನ್ನು ಮತ್ತೆ ಮಾರುತಿ ಸುಜುಕಿ ಆಕ್ರಮಿಸಿಕೊಂಡಿದೆ. 88,265 ಕಾರುಗಳು ಮಾರಾಟವಾಗೋ ಮೂಲಕ ಮಾರುತಿ ಇಕೋ ಕಾರು 7ನೇ ಸ್ಥಾನದಲ್ಲಿದೆ.

810

8ನೇ ಸ್ಥಾನದಲ್ಲಿ ಹ್ಯುಂಡೈ ವಿರಾಜಮಾನವಾಗಿದೆ. ಹ್ಯುಂಡೈ ಕ್ರೆಟಾ 86,397 ಕಾರುಗಳು ಮಾರಾಟವಾಗಿದೆ. 2020ರಲ್ಲಿ ಬಿಡುಗಡೆಯಾದ ಅತ್ಯಂತ ಆಕರ್ಷಕ SUV ಕಾರುಗಳ ಪೈಕಿ ಹ್ಯುಂಡೈ ಕ್ರೆಟಾ ಸ್ಥಾನ ಪಡೆದಿದೆ.

910

2020ರಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಪೈಕಿ ಹ್ಯುಂಡೈ ಗ್ರ್ಯಾಂಡ್ i10 ಕಾರು 9ನೇ ಸ್ಥಾನ ಪಡೆದುಕೊಂಡಿದೆ. ಹ್ಯುಂಡೈ ಗ್ರ್ಯಾಂಡ್ i10 ಕಾರು 81,667 ಕಾರುಗಳ ಮಾರಾಟವಾಗಿದೆ.

1010

ಮಾರುತಿ ಎರ್ಟಿಗಾ ಕಾರು 10ನೇ ಸ್ಥಾನದಲ್ಲಿದೆ. ಪ್ರಸಕ್ತ ವರ್ಷ ಮಾರುತಿ ಎರ್ಟಿಗಾ 71,500 ಕಾರುಗಳು ಮಾರಾಟವಾಗಿದೆ.

click me!

Recommended Stories