ಒಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕ ತಲೆ ಎತ್ತಲು ಸಜ್ಜಾಗಿದೆ. ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಘಟಕ ಆರಂಭಿಸಲು ಒಲಾ ಒಪ್ಪಂದ ಮಾಡಿಕೊಂಡಿದೆ.
undefined
ಒಲಾ ಎಲೆಕ್ಟ್ರಿಕ್ ಸ್ಕೂಟರ್ ಘಟಕಕ್ಕೆ 2,400 ಕೋಟಿ ಹಣ ಹೂಡಿಕೆ ಮಾಡುತ್ತಿದೆ. ಈ ಘಟಕದಿಂದ 10,000 ಉದ್ಯೋಗಗಳು ಸೃಷ್ಟಿಯಾಗಲಿದೆ ಅನ್ನೋದು ಮತ್ತೊಂದು ಸಂತಸದ ವಿಚಾರ.
undefined
ಒಲಾ ಎಲೆಕ್ಟ್ರಿಕ್ ಸ್ಕೂಟರ್ ಫ್ಯಾಕ್ಟರಿ ತಮಿಳುನಾಡಿನಲ್ಲಿ ಆರಂಭವಾಗಲಿದೆ. ಈಗಾಗಲೇ ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ.
undefined
ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಅಡಿಯಲ್ಲಿ ಒಲಾ ನೂತನ ಎಲೆಕ್ಟ್ರಿಕ್ ಸ್ಕೂಟರ್ ಘಟಕ ಆರಂಭಿಸಲಿದೆ. ಇಷ್ಟೇ ಅಲ್ಲ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ವಿದೇಶಗಳ ಅವಲಂಬನೆಯೂ ಕೂಡ ಒಲಾ ಫ್ಯಾಕ್ಟರಿಯಿಂದ ಕಡಿಮೆಯಾಗಲಿದೆ.
undefined
ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಭಾರತ ವಿದೇಶಗಳಿಂದ ಬಿಡಿ ಭಾಗ, ವಿಶೇಷವಾಗಿ ಬ್ಯಾಟರಿ ಆಮದು ಮಾಡಿಕೊಳ್ಳುತ್ತಿದೆ. ಆದರೆ ಒಲಾ ಫ್ಯಾಕ್ಟರಿ ಸ್ಥಳೀಯವಾಗಿ ಬಿಡಿಭಾಗಗಳನ್ನು ಉತ್ಪಾದಿಸಲಿದೆ ಎಂದಿದೆ.
undefined
ಅತೀ ದೊಡ್ಡ ಫ್ಯಾಕ್ಟರಿಯಿಂದ ಭಾರತವನ್ನು ವಿಶ್ವದ ಉತ್ಪಾದನಾ ವಲಯವಾಗಿ ರೂಪಿಸಲು ಒಲಾ ನಿರ್ಧರಿಸಿದೆ. ಸಂಪೂರ್ಣವಾಗಿ ಮೇಕ್ ಇನ್ ಇಂಡಿಯಾ ಸ್ಕೂಟರ್ ಆಗಿರಲಿದೆ ಎಂದಿ ಒಲಾ ಹೇಳಿದೆ.
undefined
ಒಲಾ ಸ್ಕೂಟರ್ ಭಾರತದಲ್ಲಿ ಮಾತ್ರವಲ್ಲ, ಯುರೋಪ್, ಏಷ್ಯಾ, ಲ್ಯಾಟಿನ್ ಅಮೆರಿಕ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ರಫ್ತಾಗಲಿದೆ. ಈ ಮೂಲಕ ಭಾರತದ ರಫ್ತು ಪ್ರಮಾಣ ಹೆಚ್ಚಾಗಲಿದೆ.
undefined
ಒಲಾ ಸ್ಕೂಟರ್ ಫ್ಯಾಕ್ಟರಿ ಅಧೀಕೃತ ಘೋಷಣೆ ಮಾಡಲು ಹೆಮ್ಮೆ ಎನಿಸುತ್ತಿದೆ. ಇದು ಒಲಾದ ಮಹತ್ವದ ಮೈಲಿಗಲ್ಲು ಎಂದು ಒಲಾ ಚೇರ್ಮೆನ್ ಹಾಗೂ ಸಿಇಒ ಭವೀಶ್ ಅಗರ್ವಾಲ್ ಹೇಳಿದ್ದಾರೆ.
undefined
ನಗರಗಳಲ್ಲಿ ಕ್ಯಾಬ್ ಸೇವೆ ಆರಂಭಿಸಿದ ಒಲಾ ಇದೀಗ ವಿಶ್ವದ ಬಲವು ನಗರಗಳಲ್ಲಿ ಕ್ಯಾಬ್ ಸೇವೆ ವಿಸ್ತರಿಸಿದೆ. ಇದೀಗ ಸ್ಕೂಟರ್ ತಯಾರಿಕೆ ಕ್ಷೇತ್ರಕ್ಕೆ ಕಾಲಿಟ್ಟಿದೆ.
undefined