ಹೊಸ ಹ್ಯುಂಡೈ i20 ಕಾರು ಖರೀದಿಗೆ ಮುಗಿಬಿದ್ದ ಜನ, 40 ದಿನದಲ್ಲಿ ದಾಖಲೆ!

First Published | Dec 15, 2020, 2:59 PM IST

ಹೊಚ್ಚ ಹೊಸ ಹ್ಯುಂಡೈ i20 ಕಾರು ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಆಕರ್ಷಕ ವಿನ್ಯಾಸ ಹಾಗೂ ಅಧುನಿಕ ತಂತ್ರಜ್ಞಾನದ ಕಾರು ಹೊಸ ಸಂಚಲನ ಮೂಡಿಸಿದೆ. ನೂತನ ಹ್ಯುಂಡೈ i20 ಬಿಡುಗಡೆಯಾದ ಬಳಿಕ ಪ್ರತಿಸ್ಪರ್ಧಿಗಳಿಗೆ ನಡುಕ ಶುರುವಾಗಿದೆ. ಕಾರಣ ಇದೀಗ ಗ್ರಾಹಕರು ಹ್ಯುಂಡೈ i20 ಕಾರು ಬುಕಿಂಗ್ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ 40 ದಿನದಲ್ಲಿ ಹೊಸ ದಾಖಲೆ ಬರೆದಿದೆ.
 

ಹ್ಯುಂಡೈ i20 ಕಾರು ಆಕರ್ಷಕ ವಿನ್ಯಾಸದೊಂದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರ ನೆಚ್ಚಿನ ಕಾರಾಗಿ ಬದಲಾಗಿದೆ. ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ಇದೀಗ i20 ಬಿಡುಗಡೆಯಾದ ದಿನದಿಂದ ಪ್ರತಿ ದಿನ ಹೊಸ ಹೊಸ ದಾಖಲೆ ನಿರ್ಮಿಸುತ್ತಿದೆ.
ಹ್ಯುಂಡೈ i20 ಕಾರು ಬಿಡುಗಡೆಯಾದ 40 ದಿನದಲ್ಲಿ 30,000 ಕಾರುಗಳು ಬುಕಿಂಗ್ ಆಗಿವೆ. ಈ ಮೂಲಕ ಕಡಿಮೆ ಅವಧಿಯಲ್ಲಿ ಗರಿಷ್ಠ ಬುಕಿಂಗ್ ಆದ ಹ್ಯಾಚ್‌ಬ್ಯಾಕ್ ಕಾರು ಅನ್ನೋ ಹೆಗ್ಗಳಿಕೆಗೆ ಹ್ಯುಂಡೈ i20 ಪಾತ್ರವಾಗಿದೆ.
Tap to resize

ಬಿಡುಗಡೆಯಾದ 40 ದಿನದಲ್ಲಿ ಹ್ಯುಂಡೈ ಇಂಡಿಯಾ 10,000 i20 ಕಾರುಗಳನ್ನು ವಿತರಿಸಿದೆ. ಕೊರೋನಾ ಸಂಕಷ್ಟದಲ್ಲೂ ಅತ್ಯಂತ ಸುರಕ್ಷತಾ ವಿಧಾನದಲ್ಲಿ ಕಾರುಗಳ ವಿತರಣೆ ಮಾಡಲಾಗುತ್ತಿದೆ
ಹ್ಯುಂಡೈ i20 ಕಾರಿನ ಆರಂಭಿಕ ಬೆಲೆ 6.8 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟಾಪ್ ವೇರಿಯೆಂಟ್ ಕಾರಿನ ಬೆಲೆ 11.17 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ0
30,000 ಕಾರುಗಳ ಬುಕಿಂಗ್‌ನಲ್ಲಿ ಶೇಕಡಾ 85 ರಷ್ಟು ಬುಕಿಂಗ್‌ಗಳು ಹೈಯರ್ ಟ್ರಿಮ್ ವೇರಿಯೆಂಟ್ ಕಾರುಗಳೇ ಬುಕ್ ಆಗಿವೆ. ಶೇಕಡಾ 10 ರಷ್ಟು ಮಂದಿ ಡ್ಯುಯೆಲ್ ಟೋನ್ ಕಲರ್ ಆಯ್ಕೆ ಮಾಡುತ್ತಿದ್ದಾರೆ.
10.25 ಇಂಜಿನ ಇನ್ಫೋಟೈನ್ಮೆಂಟ್ ಸಿಸ್ಟಮ್, 7 ಸ್ಪೀಕರ್ ಸೌಂಡ್ ಸಿಸ್ಟಮ್, ಬ್ಲೂಲಿಂಕ್ ಇಂಟರ್‌ನೆಟ್ ಕನೆಕ್ಟ್ ಸೌಲಭ್ಯವೂ ನೂತನ ಹ್ಯುಂಡೈ i20 ಕಾರಿನಲ್ಲಿದೆ.
ಹ್ಯಾಚ್‌ಬ್ಯಾಕ್ ಕಾರಾಗಿದ್ದರು ನೂತನ ಹ್ಯುಂಡೈ i20 ಕಾರಿನಲ್ಲಿ ಸನ್‌ರೂಫ್ ಸೌಲಭ್ಯವಿದೆ. ಇನ್ನು ಏರ್ ಪ್ಯೂರಿಫೈಯರ್, ವೈಯರ್‌ಲೆಸ್ ಚಾರ್ಜಿಂಗ್ ಸಿಸ್ಟಮ್ ಕೂಡ ಲಭ್ಯವಿದೆ.
ಮೂರು ಎಂಜಿನ್ ವೇರಿಯೆಂಟ್ ಲಭ್ಯವಿದೆ. 1.0 ಲೀಟರ್ ಟರ್ಬೋ ಪೆಟ್ರೋಲ್, 1.2 ಲೀಟರ್ ಪೆಟ್ರೋಲ್ ಹಾಗೂ 15 ಲೀಟರ್ ಡೀಸೆಲ್ ಎಂಜಿನ್ ಕಾರುಗಳು ಲಭ್ಯವಿದೆ.

Latest Videos

click me!