ಮೂಡಲಪಾಳ್ಯದಲ್ಲಿ ನಡೆದ ಕಾರು ಹಾಗೂ ಬೈಕ್ ಅಪಘಾತ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ತೀವ್ರವಾಗಿ ಗಾಯಗೊಂಡ ಅಮಾಯಕ ಬೈಕ್ ಸವಾರ ಅಕ್ಷಯ್ ಕಳೆದೆರಡು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದರು.
ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಕ್ಷಯ್ ಇಂದು(ಡಿ.15) ಸಾವನ್ನಪ್ಪಿದ್ದಾನೆ. ಈ ಮೂಲಕ ಕುಡಿದ ಮತ್ತಿನಲ್ಲಿ ನಡೆಸಿದ ಕುಡಿದ ಅಮಲಿನ ಯುವಕರ ಕಾರು ರೇಸ್‌ಗೆ ಅಮಾಯಕನೋರ್ವ ಬಲಿಯಾಗಿದ್ದಾನೆ.
ಡಿಸೆಂಬರ್ 3 ರಂದು ಕುಡಿದ ಇಬ್ಬರು ಯುವಕರು ಹುಟ್ಟು ಹಬ್ಬದ ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದು ತಮ್ಮ ಎರಡು ಕಾರುಗಳಲ್ಲಿ ಜಿದ್ದಿಗೆ ಬಿದ್ದು ರೇಸ್ ಮಾಡಿದ್ದಾರೆ.
ಹೊಂಡಾ ಸಿವಿಕ್ ಹಾಗೂ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಯುವಕರಿಬ್ಬರು ರೇಸ್ ಮಾಡಿದ್ದಾರೆ. ರಸ್ತೆಯಲ್ಲಿ ಎರಡೂ ಕಾರು ಒಟ್ಟೊಟ್ಟಿಗೆ ಸಂಚರಿಸಿದೆ. ಅತೀ ವೇಗದಲ್ಲಿ ಕಾರು ಚಲಾಯಿಸಿದ ಯುವಕರು ಸರಿಯಾದ ಸೈಡ್‌ನಲ್ಲಿ ಬರುತ್ತಿದ್ದ ಬೈಕ್ ಸವಾರ ಅಕ್ಷಯ್‌ಗೆ ಡಿಕ್ಕಿ ಹೊಡೆದಿದ್ದಾರೆ.
ತನ್ನ ರಾಯಲ್ ಎನ್‌ಫೀಲ್ಡ್ ಬೈಕ್ ಮೂಲಕ ಅಕ್ಷಯ್ ಮನೆಗೆ ತೆರಳುತ್ತಿದ್ದರು. ಈ ವೇಳೆ ಕುಡಿದ ಯುಕರ ಕಾರು ರೇಸ್ ಯಮನಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಅಕ್ಷಯ್ ತಲೆಗೆ ತೀವ್ರವಾಗಿ ಗಾಯವಾಗಿತ್ತು.
ಅಪಘಾತದ ತೀವ್ರತೆಗೆ ಅಕ್ಷಯ್ ರಾಯಲ್ ಎನ್‌ಫೀಲ್ಡ್ ಬೈಕ್ ಎರಡು ತುಂಡಾಗಿತ್ತು. ಇನ್ನು ಅಕ್ಷಯ್ ರಸ್ತೆ ಮೇಲೆ ಬಿದ್ದಿದ್ದರು. ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಭೀಕರ ಅಪಘಾತ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ರಾಂಗ್ ಸೈಡ್ ಮೂಲಕ ಬಂದ ಕಾರು, ಅಕ್ಷಯ್ ಬೈಕ್‌ಗೆ ಡಿಕ್ಕಿ ಹೊಡೆದಿತ್ತು.
ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಕ್ಷಯ್ 12 ದಿನಗಳ ಚಿಕಿತ್ಸೆ ಫಲಿಸದೆ ಅಕ್ಷಯ್ ಸಾವನ್ನಪ್ಪಿದ್ದಾನೆ. ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.