DGP ಆದೇಶ; ತಮ್ಮ ತಮ್ಮ ವಾಹನ ತಪಾಸಣೆ ನಡೆಸಿದ ಪೊಲೀಸ್!

First Published | Dec 16, 2020, 3:38 PM IST

ಕಾರಿನ ವಿಂಡೋಗೆ ಕೂಲಿಂಗ್ ಪೇಪರ್ ಅಳವಡಿಸುವುದು ನಿಯಮ ಬಾಹಿರವಾಗಿದೆ. ಇನ್ನು ವಾಹನ ಮಾಡಿಫಿಕೇಶನ್ ಕೂಡ ನಿಯಮಕ್ಕೆ ವಿರುದ್ಧವಾಗಿದೆ. ಮೋಟಾರು ವಾಹನ ತಿದ್ದುಪಡಿ ಬಳಿಕ ವಾಹನ ಮಾಡಿಫಿಕೇಶನ್ ಮಾಡಿದ ಹಲವು ಮಾಲೀಕರು ದುಬಾರಿ ದಂಡ ತೆತ್ತು ಕೈಸುಟ್ಟುಕೊಂಡಿದ್ದಾರೆ. ಇದೀಗ ನೊಟೀಸ್ ನೀಡಿರುವುದು ಸಾರ್ವಜನಿಕರಿಗಲ್ಲ, ಬದಲಾಗಿ ಪೊಲೀಸರಿಗೆ. ಪೊಲೀಸರ ವಾಹನ ಟ್ರಾಫಿಕ್ ನಿಯಮ ಉಲ್ಲಂಘಿಸಬಾರದು ಎಂದು DGP ಆದೇಶಿಸಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ

ಇಷ್ಟು ದಿನ ವಾಹನ ಮಾಡಿಫಿಕೇಶನ್, ಕೂಲಿಂಗ್ ಪೇಪರ್ ಸೇರಿದಂತೆ ಹಲವು ಟ್ರಾಫಿಕ್ ನಿಯಮಗಳ ಕುರಿತು ಸಾರ್ವಜನಿಕರ ವಾಹನಗಳ ತಪಾಸಣೆ ಮಾಡುತ್ತಿದ್ದ ಪೊಲೀಸರು ಇದೀಗ ತಮ್ಮ ವಾಹನವನ್ನೇ ಪರಿಶೀಲಿಸುವಂತಾಗಿದೆ.
ಕೇರಳ ಡೈರೆಕ್ಟರ್ ಜನರಲ್ ಪೊಲೀಸ್ ಲೋಕನಾಥ್ ಬೆಹೆರ ಮಹತ್ವದ ಆದೇಶ ನೀಡಿದ್ದಾರೆ. ಈ ಆದೇಶದ ಪ್ರಕಾರ ಪೊಲೀಸರು ತಮ್ಮ ಪೊಲೀಸ್ ವಾಹನ ಪರಿಶೀಲನೆಗೆ, ತಪಾಸನೆಗೆ ಮುಂದಾಗಿದ್ದಾರೆ.
Tap to resize

ಕೇರಳ ಪೊಲೀಸರ ಯಾವುದೇ ವಾಹನ ಕೂಲಿಂಗ್ ಪೇಪರ್, ವಿಂಡೋ ಕರ್ಟನ್ ಹಾಗೂ ವಾಹನದ ಮುಂಭಾಗದಲ್ಲಿ ಬುಲ್ ಬಾರ್ ಅಳವಡಿಸುವಂತಿಲ್ಲ ಎಂದು DGP ಹೇಳಿದ್ದಾರೆ.
ಕೇರಳ ಪೊಲೀಸರ ಹಲವು ವಾಹನಗಳು ಟ್ರಾಫಿಕ ನಿಯಮ ಪಾಲಿಸುತ್ತಿಲ್ಲ. ಈಗಲೂ ಕರ್ಟನ್, ಕೂಲಿಂಗ್ ಪೇಪರ್ ಹಾಗು ಬುಲ್ ಬಾರ್ ಬಳಸುತ್ತಿದೆ ಎಂದು ಡಿಜಿಪಿ ತಮ್ಮ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಬುಲ್ ಬಾಲ್ ಅಳವಡಿಕೆಯಿಂದ ಪೊಲೀಸರೇ ವಾಹನ ಮಾಡಿಫಿಕೇಶನ್ ಮಾಡಿ, ನಿಯಮ ಉಲ್ಲಂಘಿಸಿದಂತೆ, ಇನ್ನು ಹಲವು ಪೊಲೀಸ್ ವಾಹನಗಳಲ್ಲಿ ವಿಂಡೋ ಕರ್ಟನ್ ಬಳಸಲಾಗುತ್ತಿದೆ ಎಂದು ಡಿಜಿಪಿ ಹೇಳಿದ್ದಾರೆ.
ಪೊಲೀಸ್ ಠಾಣಾ ವಾಹನದಲ್ಲಿ ಈ ರೀತಿ ಮಾಡಿಫಿಕೇಶನ್, ಕರ್ಟನ್, ಬುಲ್ ಬಾರ್ ಇದ್ದರೆ ಈ ಕೂಡಲೇ ತೆಗೆಯಬೇಕು ಎಂದು ಲೋಕನಾಥ್ ಬೆಹೆರ ಆದೇಶಿಸಿದ್ದಾರೆ.
ಸಾರ್ವಜನಿಕ ವಾಹನ ತಡೆದು ಮಾಡಿಫಿಕೇಶ್ ಸೇರಿದಂತೆ ಹಲವು ಕಾರಣಗಳಿಂದ ದಂಡ ಹಾಕುವಾಗ ಪೊಲೀಸರ ವಾಹನದಿಂದ ಯಾವುದೇ ತಪ್ಪು ಸಂದೇಶ ಹೋಗಬಾರದು ಎಂದು ಡಿಜಿಪಿ ಸೂಚಿಸಿದ್ದಾರೆ.
ಡಿಜಿಪಿ ಆದೇಶದಿಂದ ಇದೀಗ ಕೇರಳದ ಹಲವು ಠಾಣ ವಾಹನಗಳು ಕರ್ಟನ್, ಕೂಲಿಂಗ್ ಪೇಪರ್, ಹಾಗೂ ಮುಂಭಾಗದಲ್ಲಿ ವಾಹನ ಸುರಕ್ಷತೆಗೆ ಹಾಗೂ ಹೆಚ್ಚಿನ ಅಂದಕ್ಕಾಗಿ ಬಳಸುವ ಬುಲ್ ಬಾರ್ ತೆಗೆದು ಹಾಕಿದ್ದಾರೆ

Latest Videos

click me!