ದಂಡ ಬಾಕಿ ಉಳಿಸಿಕೊಂಡ 2,000 ಮಂದಿ ಲೈಸೆನ್ಸ್ ರದ್ದು ಮಾಡಿದ ಪೊಲೀಸ್!

First Published | Dec 12, 2020, 6:29 PM IST

ನಗರದ ಬಹುತೇಕ ಕಡೆಗಳಲ್ಲಿ ಟ್ರಾಫಿಕ್ ಪೊಲೀಸರು ಸಿಸಿಟಿವಿ ಅಳವಡಿಸಿದ್ದಾರೆ. ಹೆಚ್ಚು ಸಂಚಾರ ದಟ್ಟಣೆ ಹಾಗೂ ಜನ ದಟ್ಟಣೆ ಪ್ರದೇಶಗಳಲ್ಲಿ ಟ್ರಾಫಿಕ್ ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಪೊಲೀಸರ ಇಲ್ಲ ಎಂದು ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ, ಸಿಸಿಟಿ ಪರಿಶೀಲಿಸಿ ಪೊಲೀಸರು ಇ ಚಲನ್ ವಿಳಾಸಕ್ಕೆ ಕಳುಹಿಸುತ್ತಾರೆ. ಆದರೆ ಈ ರೀತಿ ಬರುವ ಅಥವಾ ವಿಳಾಸ ಬದಲಾಗಿದ್ದರೆ ಇ ಚಲನ ತಲುಪದೇ ಇರುವವರು, ದಂಡ ಬಾಕಿ  ಇದೆಯಾ ಎಂದು ಪರೀಶಿಸುವುದು ಅಗತ್ಯ. ಕಾರಣ 2000 ಮಂದಿಯ ಲೈಸೆನ್ಸ್ ರದ್ದಾಗಿದೆ.

ಪೊಲೀಸರು ಇಲ್ಲ ಎಂದು ತ್ರಿಬಲ್ ರೈಡ್ , ಸಿಗ್ನಲ್ ಜಂಪ್ ಅಥವಾ ಒನ್ ವೇ ಪ್ರಯಾಣ ಸೇರಿದಂತೆ ನಿಯಮ ಉಲ್ಲಂಘಿಸಿದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣ ಸಿಸಿಟಿವಿಯಲ್ಲಿ ಎಲ್ಲವೂ ದಾಖಲಾಗಿರುತ್ತದೆ.
undefined
ನಗರ, ಪಟ್ಟಣದ ಬಹುತೇಕ ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಿರುತ್ತಾರೆ. ಈ ಮೂಲಕ ಪೊಲೀಸರು ನಿಯಮ ಉಲ್ಲಂಘಿಸುವವರಿಗೆ ದಂಡ ಪಾವತಿಸಲು ಇ ಚಲನ್ ಕಳಹಿಸುತ್ತಾರೆ.
undefined

Latest Videos


ಇ ಚಲನ್ ಸ್ವೀಕರಿಸಿದ ಹಲವರು ನಿರ್ಲಕ್ಷ್ಯಿಸುತ್ತಾರೆ. ಮತ್ತೆ ಕೆಲವರ ವಿಳಾಸ ಬದಲಾದ ಕಾರಣ ಇ ಚಲನ್ ಸಿಗದೇ ಇರುವ ಸಾಧ್ಯತೆ ಇದೆ. ಆದರೆ ನಿಯಮ ಉಲ್ಲಂಘಿಸಿದರೆ ಅಧೀಕೃತ ಸೈಟ್ ಮೂಲಕ ದಂಡ ಬಾಕಿ ಉಳಿಸಿಕೊಂಡಿದ್ದೀರಾ ಅನ್ನೋದು ಪರಿಶೀಲಿಸುವುದು ಅಗತ್ಯ.
undefined
ಇ ಚಲನ್ ಕಳುಹಿಸಿ ದಂಡ ಬಾಕಿ ಉಳಿಸಿಕೊಂಡ 2,000 ಮಂದಿಯ ಡ್ರೈವಿಂಗ್ ಲೈಸೆನ್ಸ್‌ನ್ನು ಮುಂಬೈ ಪೊಲೀಸರು ರದ್ದು ಮಾಡಿದ್ದಾರೆ.
undefined
ದಂಡ ಮರುಪಾವತಿಗೆ ಮುಂಬೈ ಪೊಲೀಸರು ಈ ಕ್ರಮ ಮುಂದಾಗಿದ್ದಾರೆ. ಇದೀಗ ದಂಡ ಹಾಗೂ ಪೆನಾಲ್ಟಿ ಪಾವತಿಸಿ, ಲೈಸೆನ್ಸ್ ರಿನೀವಲ್ ಮಾಡಿಕೊಳ್ಳಲು ಮುಂಬೈ ಪೊಲೀಸರು ಸೂಚಿಸಿದ್ದಾರೆ.
undefined
ಅರೇ ಇದು ಮುಂಬೈ ಎಂದು ನಿಟ್ಟುಸಿರು ಬಿಡುವ ಹಾಗಿಲ್ಲ, ಕಾರಣ ಕಳೆದ ತಿಂಗಳು ಬೆಂಗಳೂರು ಪೊಲೀಸರು ದಂಡ ಬಾಕಿ ಉಳಿಸಿಕೊಂಡವರ ವಾಹನ ಸೀಝ್ ಮಾಡುವುದಾಗಿ ಪ್ರಕಟಿಸಿದ್ದಾರೆ.
undefined
ಬೆಂಗಳೂರುು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ದಂಡ ಪಾವತಿ ಸರಿಯಾಗಿ ಆಗುತ್ತಿಲ್ಲ. ವಿಶೇಷವಾಗಿ ಇ ಚಲನ ಮೂಲಕ ಕಳುಹಿಸಲಾದ ದಂಡದಲ್ಲಿ ಶೇಕಡಾ 50ರಷ್ಟು ಪಾವತಿ ಆಗಿಲ್ಲ
undefined
ಮುಂಬೈ ಪೊಲೀಸರು ಲೈಸೆನ್ಸ್ ರದ್ದು ಮಾಡುತ್ತಿದ್ದಾರೆ. ಬೆಂಗಳೂರು ಪೊಲೀಸರು ವಾಹನ ಸೀಝ್ ಮಾಡಲು ಮುಂದಾಗಿದ್ದಾರೆ. ಇನ್ನು ದಂಡದ ಮೊತ್ತ ಆಧರಿಸಿ ವಾಹನದ ವಶಕ್ಕೆ ಪಡೆಯುವ ಜೊತೆಗೆ ಲೈಸೆನ್ಸ್ ಕೂಡ ರದ್ದಾಗುವ ದಿನ ದೂರವಿಲ್ಲ,
undefined
click me!