ರಸ್ತೆ ಗುಂಡಿ ಸರಿ ಪಡಿಸುವವರೆಗೆ ಟೋಲ್ ಪ್ಲಾಜಾದಲ್ಲಿ ಶೇಕಡಾ 50 ರಷ್ಟು ಮಾತ್ರ ಫೀ ಪಡೆಯಬೇಕು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಬಳಿಕ ಮದ್ರಾಸ್ ಹೈಕೋರ್ಟ್ ಈ ಆದೇಶ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರಕ್ಕೆ(NHAI) ಸೇರಿದ ಮದುರಾವೊಯಲ್ ಹಾಗೂ ವಲಜಾಪೇಟ್ ನಡುವಿನ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ.
ಇದೇ ರಸ್ತೆಯ ರಸ್ತೆಗುಂಡಿಗೆ ಬಿದ್ದು ವೈದ್ಯೆಯೊಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ಮದುರಾವೊಯಲ್ ಹಾಗೂ ವಲಜಾಪೇಟ್ ರಸ್ತೆಯಲ್ಲಿರುವ 2 ಟೋಲ್ ಪ್ಲಾಜಾಗಳಲ್ಲಿ ಶೇಕಡಾ 50 ರಷ್ಟು ದರ ಕಡಿತ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚವವರೆಗೆ ಇದೇ ಬೆಲೆ ಇರಲಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಇದೇ ವೇಳೆ ಮತ್ತೊಂದು ಅಂಶವನ್ನು ಕೋರ್ಟ್ ಉಲ್ಲೇಖಿಸಿದೆ. ಟೋಲ್ ಪ್ಲಾಜಾ ರಸ್ತೆಗಳಲ್ಲಿ ರಸ್ತೆ ಗುಂಡಿ ಇದ್ದಲ್ಲಿ, ಈ ರಸ್ತೆಗಳಲ್ಲಿ ಟೋಲ್ ಪ್ಲಾಜಾ ದರ ಶೇಕಡಾ 50ರಷ್ಟು ಇಳಿಸಬೇಕು ಎಂದಿದೆ.
ಡಿಸಂಬರ್ 7 ರಂದು 50 ವೈದ್ಯೆ ಹಾಗೂ ಪುತ್ರಿ NHAI ರಸ್ತೆ ಗಂಡಿ ಕಾರಣ ಸ್ಕೂಟಿ ಸ್ಕಿಡ್ ಆಗೋ ಮಲೂಕ ತೆರೆದ ಟ್ರೆಂಚ್‌ಗೆ ಬಿದ್ದು ಸಾವನ್ನಪ್ಪಿದ್ದರು.
ಮದ್ರಾಸ್ ಹೈಕೋರ್ಟ್ ಆದೇಶದ ಬೆನ್ನಲ್ಲೇ NHAI 10 ದಿನದಲ್ಲಿ ರಸ್ತೆ ಗುಂಡಿ ಮುಚ್ಚುವುದಾಗಿ ಸ್ಪಷ್ಟಪಡಿಸಿದೆ. ಇದೇ ವೇಳೆ ಕಳೆದ 70 ವರ್ಷದಲ್ಲಿ ಡಾಂಬರು ಕಾಣದ ರಸ್ತೆ ಇದೀಗ ಕಾಣುತ್ತಿದೆ.
ಇದು ಕೇವಲ ತಮಿಳುನಾಡು ರಸ್ತೆಗಳ ಗೋಳಲ್ಲ, ಕರ್ನಾಟಕ ಸೇರಿದಂತೆ ಹಲವು ರಾಜ್ಯದಳಲ್ಲಿ ಇದೇ ಸಮಸ್ಯೆ ಇದೆ. ಸ್ವಾತಂತ್ರ್ಯ ಭಾರತದಲ್ಲಿ ಇನ್ನು ರಸ್ತೆ ಕುರಿತು ಹೋರಾಡಬೇಕಾದ ಪರಿಸ್ಥಿತಿ ಇರುವುದು ದುರಂತ.