MDH ಮಸಾಲಾ ಗುರು ಧರ್ಮಪಾಲ್ ಗುಲಾಟಿ ಬಿಟ್ಟು ಹೋದ ಐಷಾರಾಮಿ ಕಾರುಗಳ ಲಿಸ್ಟ್!

First Published Dec 8, 2020, 10:03 PM IST

ರುಚಿ ರುಚಿಯಾದ ಅಡುಗೆಗೆ MDH ಮಸಾಲೆ ಇರಲೇಬೇಕು ಅನ್ನೋದು ಭಾರತೀಯರ ಬಹುತೇಕ ಮನೆಗಳಲ್ಲಿನ ಅಘೋಷಿತ ವಾಕ್ಯ. ಅಷ್ಟರ ಮಟ್ಟಿಗೆ MDH ಮಸಾಲೆ ಭಾರತೀಯರ ಜನ ಜೀವನ ಹಾಸು ಹೊಕ್ಕಿದೆ.  ಹೀಗಾಗಿಯೇ ಧರ್ಮಪಾಲ್ ಗುಲಾಟಿ ಮಸಾಲೆ ರಾಜ ಎಂದೇ ಬಿರುದು ಪಡೆದಿದ್ದಾರೆ. ಇತ್ತೀಚೆಗೆ ನಿಧನರಾದರ, ಸಾವಿರಾರು ಕೋಟಿ ರೂಪಾಯಿ ಉದ್ಯಮ ಕಟ್ಟಿದ ಧರ್ಮಪಾಲ್ ಗುಲಾಟಿ ಬಿಟ್ಟು ಹೋದ ಐಷಾರಾಮಿ ಕಾರುಗಳ ಲಿಸ್ಟ್ ಇಲ್ಲಿದೆ.

MDH ಮಸಾಲೆ ಮಾಲೀಕ ಧರ್ಮಪಾಲ್ ಗುಲಾಟಿ ಇತ್ತೀಜೆಗೆ ನಿಧನರಾಗಿದ್ದಾರೆ. 98 ವರ್ಷದ ಗುಲಾಟಿ, ಭಾರತೀಯ ಮಸಾಲೆ ಪರಂಪರೆಯಲ್ಲಿ ಅತೀ ದೊಡ್ಡ ಹೆಸರಾಗಿ ಅಜರಾಮರವಾಗಿದೆ.
undefined
ಧರ್ಮಪಾಲ್ ಗುಲಾಟಿ ಇದರ ಉದ್ಯಮಿಗಳಂತೆ ದುಬಾರಿ, ಐಷಾರಾಮಿ ಕಾರುಗಳನ್ನು ಕೊಳ್ಳುವುದು, ಬದಲಾಯಿಸುವುದು ಮಾಡಿಲ್ಲ. ಹಾಗಂತ ಗುಲಾಟಿಗೆ ಕಾರಿನ ಪ್ರೀತಿ ತುಸು ಹೆಚ್ಚೇ ಇದೆ.
undefined
ಧರ್ಮವಾಲ್ ಗುಲಾಟಿ ಬಳಿ ಹಲವು ಐಷಾರಾಮಿ ಕಾರುಗಳಿವೆ. ರೋಲ್ಸ್ ರಾಯ್ಸ್, ಮರ್ಸಿಡೀಸ್ ಬೆಂಝ್ ಸೇರಿದಂತೆ ಹಲವು ಕಾರುಗಳ ಒಡೆಯರಾಗಿದ್ದಾರೆ.
undefined
ಧರ್ಮಪಾಲ್ ಗುಲಾಟಿ ಬಳಿ ಬರೋಬ್ಬರಿ 7 ಕೋಟಿ ಮೌಲ್ಯದ(ಎಕ್ಸ್ ಶೋ ರೂಂ) ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಹೊಂದಿದ್ದಾರೆ.
undefined
ವಿಶೇಷವಾಗಿ ಮಾಡಿಫಿಕೇಶನ್ ಮಾಡಿಸಿದ ಕ್ರಿಸ್ಲರ್ 300C ಲಿಮೋಸಿನ್ ಕಾರು ಹೊಂದಿದ್ದಾರೆ. ಇದು ಅತೀ ಉದ್ದನೆಯ ಕಾರು ಎಲ್ಲಾ ಸೌಲಭ್ಯ ಹೊಂದಿದ ಐಷಾರಾಮಿ ಕಾರಾಗಿದೆ.
undefined
2.31 ಕೋಟಿ ಮೌಲ್ಯದ(ಎಕ್ಸ್ ಶೋ ರೂಂ) ಮರ್ಸಿಡೀಸ್ ಬೆಂಝ್ M-Class ML 500 ಕಾರನ್ನು ಹೊಂದಿದ್ದಾರೆ. ಹಲವು ಬಾರಿ ಈ ಕಾರಿನಲ್ಲಿ ಗುಲಾಟಿ ಕಾಣಿಸಿಕೊಂಡಿದ್ದಾರೆ.
undefined
ಟೊಟೋಯಾ ಇನೋವಾ ಕ್ರಿಸ್ಟಾ ವಾಹನದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಧರ್ಮವಾಲ್ ಗುಲಾಟಿ ಹೆಚ್ಚಾಗಿ ಕ್ರಿಸ್ಟಾ ಕಾರಿನ ಮೂಲಕವೇ ಪ್ರಯಾಣ ಮಾಡುತ್ತಿದ್ದರು.
undefined
ಟೊಯೋಟಾ ಫಾರ್ಚುನರ್, ಹೊಂಡಾ WR-V ಕಾರುಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಈ ಐಷಾರಾಮಿ ಕಾರುಗಳ ಒಡೆಯ ಧರ್ಮಪಾಲ್ ಗುಲಾಟಿ ನಿಧನರಾಗಿದ್ದಾರೆ.
undefined
click me!