ಭಾರತದಲ್ಲಿ MINI 3 ಡೋರ್, ಕನ್ವರ್ಟಿಬಲ್, ಜಾನ್ ಕೂಪರ್ ಕಾರು ಬಿಡುಗಡೆ

First Published | Jun 24, 2021, 3:38 PM IST

MINI ಇಂಡಿಯಾ ಆಲ್-ನ್ಯೂ MINI 3 ಡೋರ್ ಹ್ಯಾಚ್, ಆಲ್-ನ್ಯೂ MINI ಕನ್ವರ್ಟೇಬಲ್ ಮತ್ತು ಆಲ್-ನ್ಯೂ MINI ಜಾನ್ ಕೂಪರ್  ಕಾರು ಭಾರತದಲ್ಲಿ  ಬಿಡುಗಡೆಯಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

ಈ ಆಲ್-ನ್ಯೂ MINI ಶ್ರೇಣಿಯು ಪೆಟ್ರೋಲ್ ಎಂಜಿನ್‍ಗಳಲ್ಲಿ ಕಂಪ್ಲೀಟ್ಲಿ ಬಿಲ್ಟ್-ಅಪ್ ಯೂನಿಟ್ಸ್(CBUs) ಆಗಿ ಲಭ್ಯ. ಆಲ್-ನ್ಯೂ MINI 3 ಡೋರ್ ಹ್ಯಾಚ್, ಆಲ್-ನ್ಯೂ MINI ಕನ್ವರ್ಟಿಬಲ್ ಮತ್ತು ಆಲ್-ನ್ಯೂ MINI ಜಾನ್ ಕೂಪರ್ ವರ್ಕರಸ್ ಹ್ಯಾಚ್ ಸ್ಟಾಂಡರ್ಡ್ ಪ್ರೊಫೈಲ್ ಮತ್ತು ಸರಳೀಕರಿಸಲಾದ ಆಫರ್ ರಚನೆ ಹೊಂದಿದೆ.ಪೆಟ್ರೋಲ್ ಎಂಜಿನ್ ವೇರಿಯೆಂಟ್ಸ್ ಎಕ್ಸ್-ಶೋರೂಂ ಬೆಲೆಗಳು* ಈ ಕೆಳಕಂಡಂತಿವೆ:ಆಲ್-ನ್ಯೂ MINI 3 ಡೋರ್ ಹ್ಯಾಚ್ ಕಾರಿನ ಬೆಲೆ : 38,00,000 ಲಕ್ಷ ರೂಪಾಯಿಆಲ್-ನ್ಯೂ MINI ಕನ್ವರ್ಟಿಬಲ್ ಬೆಲೆ : 44,00,000 ರೂಪಾಯಿಆಲ್-ನ್ಯೂ MINI ಜಾನ್ ಕೂಪರ್ ವರ್ಕಸ್‌ಹ್ಯಾಚ್ : 45,50,000
undefined
ಕಸ್ಟಮೈಸ್ ಮಾಡಲಾದ ಮತ್ತು ಫ್ಲೆಕ್ಸಿಬಲ್ ಫೈನಾನ್ಷಿಯಲ್ ಸಲ್ಯೂಷನ್ಸ್ ಅನ್ನು ವೈಯಕ್ತಿಕ ಅಗತ್ಯಗಳಿಗೆ ಅನುಸಾರ ಪಡೆಯಬಹುದು ಅದು ಮಹತ್ತರ ಮೌಲ್ಯ ಮತ್ತು ಸಂಪೂರ್ಣ ಮನಃಶ್ಯಾಂತಿ ನೀಡುತ್ತದೆ. ಇಂಡಿಯಾ ಸುರಕ್ಷಿತ ಮತ್ತು ಸಮಗ್ರ ಮಾಲೀಕತ್ವ ಪ್ಯಾಕೇಜಸ್ ನೀಡುತ್ತಿದ್ದು ಅದರಲ್ಲಿ ಸರ್ವೀಸ್ ಇನ್‍ಕ್ಲೂಸಿವ್, ರಿಪೇರ್ ಇನ್‍ಕ್ಲೂಸಿವ್ ಮತ್ತು MINI ಸೆಕ್ಯೂರ್ ಒಳಗೊಂಡಿದ್ದು ಅದು ಮಾಲೀಕತ್ವದ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಗ್ರಾಹಕರು ಅವಧಿ ಮತ್ತು ಮೈಲೇಜ್ ಆಧರಿಸಿ ವೈವಿಧ್ಯಮಯ ಸರ್ವೀಸ್ ಪ್ಯಾಕೇಜಸ್ ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜಸ್‍ನಲ್ಲಿ ಕಂಡೀಷನ್ ಬೇಸ್ಡ್ ಸರ್ವೀಸ್(ಅಃS) ಮತ್ತು ಮೇಂಟೆನೆನ್ಸ್ ಕೆಲಸ ಒಳಗೊಂಡಿದ್ದು 3 Yrs 40,000 Kms ನಿಂದ 10 Yrs 2,00,000 Kms ವರೆಗೆ ಲಭ್ಯ.
undefined

Latest Videos


ಆಲ್-ನ್ಯೂ MINI 3 ಡೋರ್ ಹ್ಯಾಚ್, ಆಲ್-ನ್ಯೂ MINI ಕನ್ವರ್ಟಿಬಲ್ ಮತ್ತು ಆಲ್-ನ್ಯೂ MINI ಜಾನ್ ಕೂಪರ್ ವಕ್ರ್ಸ್‍ಹ್ಯಾಚ್.ಆಲ್-ನ್ಯೂ MINI 3 ಡೋರ್ ಹ್ಯಾಚ್, ಆಲ್-ನ್ಯೂ MINI ಕನ್ವರ್ಟಿಬಲ್ ಈಗ ಸರಳೀಕೃತ ಮತ್ತು ಆಧುನಿಕ ವಿನ್ಯಾಸದೊಂದಿಗೆ ಹಿಂದೆಂದಿಗಿಂತಲೂ ಉತ್ತಮವಾಗಿ ಕಾಣುತ್ತವೆ. ಈ ಹೊಸ ಎಕ್ಸ್‍ಟೀರಿಯರ್ ಡಿಸೈನ್ ಭಾಷೆ ಮತ್ತು ಈಗ MINI’s ದೋಷರಹಿತ ನೋಟವನ್ನು ಹೆಚ್ಚಿಸಲಾದ ಸೌಂದರ್ಯಪ್ರಜ್ಞೆಯೊಂದಿಗೆ ಶುದ್ಧ ರೀತಿಯಲ್ಲಿ ಇರಿಸಲಾಗಿದೆ. ಮುಂಬದಿಯ ನೋಟ ಅಭಿವ್ಯಕ್ತಿಶೀಲವಾಗಿದೆ ಮತ್ತು ಹೊಸ ಹೆಕ್ಸಾಗನಲ್ ರೇಡಿಯೆಂಟ್ ಗ್ರಿಲ್‍ನಿಂದ ಪ್ರಭಾವಿತವಾಗಿದ್ದು ಅದು ಹೊಸ ಮಾಡ್ರನ್, ನಯವಾದ ತೇಜಸ್ಸನ್ನು ಹೊರಹೊಮ್ಮಿಸುತ್ತದೆ ಮತ್ತು MINI LED ಹೆಡ್‍ಲೈಟ್ಸ್ ದುಂಡಗಿನ ಹೆಗ್ಗುರುತು ಹೊಂದಿದೆ. ಫಾಗ್ ಲೈಟ್ಸ್ ಈಗ LED ಹೆಡ್‍ಲೈಟ್ಸ್‍ಗೆ ಜೋಡಿಸಲಾಗಿದೆ. LED ಸೈಡ್ ಇಂಡಿಕೇಟರ್ಸ್ ಅನ್ನು ಸೈಡ್ ಸ್ಕಟ್ಟಲ್ಸ್ ಮರುವಿನ್ಯಾಸಗೊಳಿಸಿ ಜೋಡಿಸಲಾಗಿದೆ. ಕಿರಿದಾದ ಓವರ್‍ಹ್ಯಾಂಗ್ಸ್ ಬದಿಯ ನೋಟದ ವ್ಯಾಖ್ಯಾನ ಮುಂದುವರಿಸಿದ್ದು ಇದರೊಂದಿಗೆ ವ್ಹೀಲ್ ಆರ್ಚ್ ಸರೌಂಡ್ಸ್‍ನ ಆಕರ್ಷಕ ಕೊಂಟ್ಯೂರ್ಸ್ ಹೊಂದಿದೆ. ಬ್ರಿಟಿಷ್-ಧ್ವಜದಿಂದ ಸ್ಫೂರ್ತಿ ಪಡೆದ ರಿಯರ್ ಲೈಟ್ಸ್ ಗ್ರಾಫಿಕ್ಸ್ ಯೂನಿಯನ್ ಜಾಕ್ ಡಿಸೈನ್‍ನಲ್ಲಿವೆ. ರಿಯರ್ ಫಾಗ್ ಲೈಟ್ ಈಗ ರಿಯರ್ ಏಪ್ರನ್‍ಗೆ ಕಿರಿದಾದ LED ಯೂನಿಟ್ ಆಗಿ ಜೋಡಿಸಲಾಗಿದೆ. ಹೊಸ ಏರ್ ಇನ್‍ಟೇಕ್ಸ್ ಬಾಡಿವರ್ಕ್‍ಗೆ ಲಂಬವಾಗಿ ಜೋಡಿಸಲಾಗಿದೆ ಮತ್ತು ಏರೊಡೈನಮಿಕ್ಸ್ ಹೆಚ್ಚಿಸುತ್ತವೆ.
undefined
ನವೀಕೃತ ಶ್ರೇಣಿಯ 17-inch(43.66 Cm)ಲೈಟ್ ಅಲಾಯ್ ವ್ಹೀಲ್ಸ್ ಆಲ್-ನ್ಯೂ MINI 3 ಡೋರ್ ಹ್ಯಾಚ್ ಮತ್ತು MINI ಕನ್ವರ್ಟಿಬಲ್‍ಗೆ ಸ್ಟಾಂಡರ್ಡ್ ಆಗಿ ಲಭ್ಯವಿವೆ. ಇವುಗಳಲ್ಲಿ ಲೈಟ್ ಅಲಾಯ್ ವ್ಹೀಲ್ಸ್ ರೌಲೆಟ್ ಸ್ಪೋಕ್-ಟು-ಟೋನ್, ಲೈಟ್ ಅಲಾಯ್ ವ್ಹೀಲ್ಸ್ ಟೆಂಟಕಲ್ ಸ್ಪೋಕ್-ಬ್ಲಾಕ್, ಲೈಟ್ ಅಲಾಯ್ ವ್ಹೀಲ್ ರೈಲ್ ಸ್ಪೋಕ್-ಟು-ಟೋನ್ ಮತ್ತು ಜಾನ್ ಕೂಪರ್ ವಕ್ರ್ಸ್ ಟ್ರ್ಯಾಕ್ ಸ್ಪೋಕ್-ಬ್ಲಾಕ್ ಹೊಂದಿದ್ದು ಅದು ಆಲ್-ನ್ಯೂ MINI ಜಾನ್ ಕೂಪರ್ ವಕ್ರ್ಸ್ ಹ್ಯಾಚ್‍ಗೆ ವಿಶಿಷ್ಟವಾಗಿದ್ದು ಜಾನ್ ಕೂಪರ್ ವಕ್ರ್ಸ್ ಕೋರ್ಸ್ ಸ್ಪೋಕ್ 2-ಟೋನ್‍ಗೆ ಐಚ್ಛಿಕವಾಗಿದೆ.ಒಳಾಂಗಣ ತಾಜಾ, ಅತ್ಯಾಧುನಿಕ ಮತ್ತು ಎರಡು ಹೊಸ MINI ಇಂಟೀರಿಯರ್‍ಸರ್ಫೇಸಸ್ ಸಿಲ್ವರ್ ಚೆಕರ್ಡ್(ಸ್ಪೋರ್ಟಿ ಸ್ಟೈಲ್ ಆಗಿದ್ದು ಅದರಲ್ಲಿ ಇನ್ಸ್‍ಟ್ರುಮೆಂಟ್ ಪ್ಯಾನೆಲ್ ಸರ್ಫೇಸ್ ಮತ್ತು ಬಾಗಿಲಿನ ಎಲಿಪ್ಟಿಕಲ್ ರಿಂಗ್ ಚೆಕರ್ಡ್ ಡಿಸೈನ್‍ನಲ್ಲಿ ಲಭ್ಯ) ಮತ್ತು MINI ಇಂಟೀರಿಯರ್ ಸರ್ಫೇಸಸ್ ಅಲ್ಯುಮಿನಿಯಂ (ಆಧುನಿಕ, ನೋಟಕ್ಕೆ ಪರಿಣಾಮಕಾರಿ ಕ್ಲಾಸಿಕಲ್ ಹೆರಿಂಗ್‍ಬೋನ್ ಡಿಸೈನ್ ಪ್ರತಿನಿಧಿಸುವ ಪರಸ್ಪರ ವಿರುದ್ಧದ ಕರ್ಣರೇಖೆಗಳು) ಗಳೊಂದಿಗೆ ಬಂದಿದೆ. ಅಪ್‍ಹೋಲ್ಸ್‍ಟ್ರಿ ಆಯ್ಕೆಗಳಲ್ಲಿ ಆವಿಷ್ಕಾರಕ ವಿನ್ಯಾಸಕ್ಕೆ ಅನುಗುಣವಾದ ನೈಜ ವಸ್ತುಗಳಿವೆ. MINI 3-ಡೋರ್ ಹ್ಯಾಚ್ ಮತ್ತು MINI ಕನ್ವರ್ಟಿಬಲ್ ಎರಡು ಹೊಸ ಸ್ಟಾಂಡರ್ಡ್ ಅಪ್‍ಹೋಲ್ಸ್‍ಟ್ರಿ ಆಯ್ಕೆಗಳು- ಕ್ಲಾಥ್ ಲೆದರೆಟ್ ಕಾಂಬಿನೇಷನ್ ಇನ್ ಬ್ಲಾಕ್ ಪರ್ಲ್ ಲೈಟ್ ಚೆಕರ್ಡ್ ಮತ್ತು ಬ್ಲಾಕ್ ಕಾರ್ಬನ್ ಬ್ಲಾಕ್‍ನಲ್ಲಿ ಲಭ್ಯ. ಸ್ಪೋಟ್ರ್ಸ್ ಸೀಟುಗಳು ತನ್ನ ಮೇಲ್ಮೈಗೆ 100% ರೀಸೈಕಲ್ಡ್ ಮೆಟೀರಿಯಲ್ ಅನ್ನು ಲೈಟ್ ಚೆಕರ್ಡ್ ಡಿಸೈನ್‍ನಲ್ಲಿ ಬಳಸಿದೆ. ಲೆದರೆಟ್ ಕಾರ್ಬನ್ ಬ್ಲಾಕ್ ಸ್ಟಾಂಡರ್ಡ್ ಆಯ್ಕೆಯಾಗಿಯೂ ಲಭ್ಯ. ಹೆಚ್ಚುವರಿ ಅಪ್‍ಹೋಲ್ಸ್‍ಟ್ರಿ ಆಯ್ಕೆಗಳಲ್ಲಿ MINI ಯುವರ್ಸ್ ಲೆದರ್ ಲೌಂಜ್ ಇನ್ ಕಾರ್ಬನ್ ಬ್ಲಾಕ್, ಲೆದರ್ ಕ್ರಾಸ್ ಪಂಚ್ ಇನ್ ಕಾರ್ಬನ್ ಬ್ಲಾಕ್, ಲೆದರ್ ಚೆಸ್ಟರ್ ಇನ್ ಸೆಟಲೈಟ್ ಗ್ರೇ ಮತ್ತು ಮಾಲ್ಟ್ ಬ್ರೌನ್ ಅಲ್ಲದೆ JCW ಸ್ಪೋಟ್ರ್ಸ್ ಸೀಟ್ಸ್ ಇನ್ ಡಿನಾಮಿಕಾ ಹೊಂದಿದೆ.
undefined
ನ್ಯೂ ಮಲ್ಟಿಫಂಕ್ಷನ್ ಸ್ಟೀರಿಂಗ್ ವ್ಹೀಲ್ ಡಿಸೈನ್ ಹೆಚ್ಚು ಕಾರ್ಯಗಳನ್ನು ಜೋಡಿಸುವ ಮೂಲಕ ನಿಯಂತ್ರಣ ಮೇಲ್ಮೈಗಳ ಸಂಖ್ಯೆಗಳನ್ನು ಕಡಿಮೆ ಮಾಡುತ್ತದೆ. ಸ್ಪೋಟ್ರ್ಸ್ ಸೀಟ್ಸ್ ಲೈಟ್ ಚೆಕರ್ಡ್ ಡಿಸೈನ್‍ನಲ್ಲಿ 100% ರೀಸೈಕಲ್ಡ್ ಮೆಟೀರಿಯಲ್ ಬಳಸಿವೆ. ಹೆಗ್ಗುರುತಾದ ಸೆಂಟ್ರಲ್ ಇನ್ಸ್‍ಟ್ರುಮೆಂಟ್‍ನ ಪ್ರೀಮಿಯಂ ನೋಟವನ್ನೂ ಗರಿಷ್ಠಗೊಳಿಸಲಾಗಿದೆ. 8.8-inch (22.35 Cm) ಬಣ್ಣದ ಟಚ್‍ಸ್ಕ್ರೀನ್ ಡಿಸ್ಪ್ಲೇ, ಟಚ್-ಸೆನ್ಸಿಟಿವ್ ಅಚ್ಚುಮೆಚ್ಚಿನ ಬಟನ್ಸ್ ಮತ್ತು ಪಿಯಾನೊ ಬ್ಲಾಕ್ ಹೈ-ಗ್ಲಾಸ್ ಸರ್ಫೇಸಸ್ ಈಗ ಸ್ಟಾಂಡರ್ಡ್ ಫೀಚರ್‍ಗಳಾಗಿವೆ. ಇದರೊಂದಿಗೆ ಆಡಿಯೊ ಕಂಟ್ರೋಲ್ ಯೂನಿಟ್ ಮತ್ತು ಹಜಾóರ್ಡ್ ವಾರ್ನಿಂಗ್ ಲೈಟ್ಸ್‍ನ ಫಂಕ್ಷನಲ್ ಬಟನ್ಸ್ ಮತ್ತು ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ ಅನ್ನು ದುಂಡಗಿನ ಕಂಟ್ರೋಲ್ ಯೂನಿಟ್‍ಗೆ ಸಾಮರಸ್ಯದಿಂದ ಜೋಡಿಸಲಾಗಿದೆ. ಆ್ಯಂಬಿಯೆಂಟ್ ಲೈಟ್ ಆಪ್ಷನ್‍ನೊಂದಿಗೆ ಸಂಯೋಗದಲ್ಲಿ ಹೊಸ ಸರ್ಫೇಸ್ ಡಿಸೈನ್ ಲೇಸರ್ ಕೆತ್ತನೆಯು ಸೆಂಟ್ರಲ್ ಇನ್ಸ್‍ಟ್ರುಮೆಂಟ್ ಸುತ್ತಲಿನ LED ಲೈಟಿಂಗ್ ನೋಟವನ್ನು ಎತ್ತರಿಸುತ್ತದೆ. ಸೆಂಟರ್ ಕನ್ಸೋಲ್‍ನಲ್ಲಿರಿಸಲಾದ ಆಪರೇಟಿಂಗ್ ಸಿಸ್ಟಂ ಕಂಟ್ರೋಲರ್ ಸಂಪೂರ್ಣ ಕಪ್ಪು ಮೇಲ್ಮೈ ಹೊಂದಿದ್ದು ನ್ಯಾವಿಗೇಷನ್ ಸಿಸ್ಟಂನೊಂದಿಗೆ ಸಂಯೋಗ ಹೊಂದಿದೆ. ಸ್ಟೀರಿಂಗ್ ಕಾಲಮ್‍ನಲ್ಲಿ ಐಚ್ಛಿಕ 5-inch (12.70 Cm) ಮಲ್ಟಿಫಂಕ್ಷನಲ್ ಇನ್ಸ್‍ಟ್ರುಮೆಂಟ್ ಡಿಸ್ಪ್ಲೇ ಡ್ರೈವರ್ ಕಾಕ್‍ಪಿಟ್‍ಗೆ ಹೊಚ್ಚಹೊಸ ಭಾವನೆ ನೀಡುತ್ತದೆ.
undefined
MINI ಐಚ್ಛಿಕ ವೈರ್ಡ್ ಪ್ಯಾಕೇಜ್ ನ್ಯಾವಿಗೇಷನ್ ಸಿಸ್ಟಂ, ವೈರ್‍ಲೆಸ್ ಚಾರ್ಜಿಂಗ್, ಉನ್ನತೀಕರಿಸಲಾದ ಬ್ಲೂಟೂಥ್ ಮೊಬೈಲ್ ಸಿದ್ಧತೆಯೊಂದಿಗೆ ಬರುತ್ತದೆ. ಮಲ್ಟಿಫಂಕ್ಷನಲ್ ಇನ್ಸ್‍ಟ್ರುಮೆಂಟ್ ಡಿಸ್ಪ್ಲೇ MINI ವೈರ್ಡ್ ಪ್ಯಾಕೇಜ್‍ನಲ್ಲಿ ಸ್ಟಾಂಡರ್ಡ್ ಆಗಿ ಬಂದಿದೆ. ಇತರೆ ಇನ್ಫೊಟೈನ್‍ಮೆಂಟ್ ಆಯ್ಕೆಗಳಲ್ಲಿ ಆಪಲ್ ಕಾರ್‍ಪ್ಲೇ MINI ರೇಡಿಯೊ ವಿಷುಯಲ್ ಬೂಸ್ಟ್+ MINI ನ್ಯಾವಿಗೇಷನ್ ಅಥವಾ ವೈರ್ಡ್ ಪ್ಯಾಕೇಜ್ ಮತ್ತು ಹರ್ಮನ್ ಕಾರ್ಡನ್ Hi-Fi ಸ್ಪೀಕರ್ ಸಿಸ್ಟಂನೊಂದಿಗೆ ಬಂದಿದೆ. MINI ಎಕ್ಸೈಟ್‍ಮೆಂಟ್ ಪ್ಯಾಕ್ LED ಇಂಟೀರಿಯರ್ ಮತ್ತು ಆ್ಯಂಬಿಯೆಂಟ್ ಲೈಟಿಂಗ್ ಹೊಂದಿದ್ದು ಅದು ಕಾಕ್‍ಪಿಟ್ ಅನ್ನು ಆಯ್ಕೆ ಮಾಡಬಲ್ಲ ಬಣ್ಣಗಳು ಹಾಗೂ ಹೊರಾಂಗಣದ ಮಿರರ್‍ನಿಂದ MINI ಲೊಗೊ ಪ್ರೊಜೆಕ್ಷನ್ ಚಾಲಕರ ಬದಿಯಲ್ಲಿದ್ದು ಬಾಗಿಲನ್ನು ತೆರೆಯುವಾಗ ಮತ್ತು ಮುಚ್ಚುವಾಗ ಕಾಣುತ್ತದೆ. ಹೆಚ್ಚುವರಿಯಾಗಿ, ಹೊಸ ‘ಲೌಂಜ್’ ಮತ್ತು `ಸ್ಪೋರ್ಟ್’ ಮೋಡ್ಸ್ ತಲಾ ಆರು ಇಂಟೀರಿಯರ್ ಲೈಟ್ ಕಲರ್ಸ್ ಆಯ್ಕೆ ನೀಡುತ್ತವೆ. `ಲೌಂಜ್’ ಮೋಡ್‍ನಲ್ಲಿ ಕಂಟೆಂಟ್ ವಿಶ್ರಾಂತಿಯ ಬಣ್ಣದ ಸೆಟ್ಟಿಂಗ್‍ನಲ್ಲಿ ಟರ್ಕೋಯಿಸ್ ಮತ್ತು ಪೆಟ್ರೋಲ್ ಬ್ಲೂನಲ್ಲಿ ಪ್ರದರ್ಶಿಸಲ್ಪಡುತ್ತದೆ. `ಸ್ಪೋರ್ಟ್’ ಮೋಡ್‍ನಲ್ಲಿ ಸ್ಕ್ರೀನ್‍ನ ಹಿನ್ನೆಲೆ ರೆಡ್ ಮತ್ತು ಅಂಥ್ರಾಸೈಟ್‍ನಲ್ಲಿರುತ್ತವೆ.
undefined
ಶಕ್ತಿಯ ವಿಷಯಕ್ಕೆ ಬಂದರೆ MINI 3 ಡೋರ್ ಹ್ಯಾಚ್ ಮತ್ತು MINI ಕನ್ವರ್ಟಿಬಲ್ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಅತ್ಯಾಧುನಿಕ MINI ಟ್ವಿನ್ ಪವರ್ ಟರ್ಬೊ ಟೆಕ್ನಾಲಜಿಯಿಂದ ಶಕ್ತಿ ಹೊಂದಿದ್ದು ಅಸಾಧಾರಣ ಕಾರ್ಯಕ್ಷಮತೆ ಮತ್ತು ಇಂಧನ ಕ್ಷಮತೆ ನೀಡುತ್ತದೆ. 2-ಲೀಟರ್ 4-ಸಿಲಿಂಡರ್ ಪೆಟ್ರೋಲ್ ಎಂಜಿನ್ ಟ್ವಿನ್ ಪವರ್ ಟರ್ಬೊ ಟೆಕ್ನಾಲಜಿಯೊಂದಿಗೆ ಪೀಕ್ ಔಟ್‍ಪುಟ್ 192 hp141 KW ಕ್ರೋಢೀಕರಿಸುತ್ತದೆ ಮತ್ತು ಗರಿಷ್ಠ ಟಾರ್ಕ್ 280Nm ಅನ್ನು 1,350 – 4,600 Rpm ನಲ್ಲಿ ನೀಡುತ್ತದೆ. MINI 3 ಡೋರ್ ಹ್ಯಾಚ್ 0 ಯಿಂದ 100 KmPh 6.7 ಸೆಕೆಂಡುಗಳಲ್ಲಿ ಜಿಗಿಯುತ್ತದೆ ಕನ್ವರ್ಟಿಬಲ್ 0 ಯಿಂದ 100 KmPh ಗೆ 7.1 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಕಾರ್ಯಕ್ಷಮತೆ ಅತ್ಯಂತ ಶ್ರೇಷ್ಠವಾಗಿದೆ ಮತ್ತು MINI ಜಾನ್ ಕೂಪರ್ ವಕ್ರ್ಸ್‍ಹ್ಯಾಚ್‍ನಲ್ಲಿ ಮೈ ನವಿರೇಳಿಸುತ್ತದೆ. ವಿಸ್ಮಯ ಹುಟ್ಟಿಸುವ ಟಾರ್ಕ್ ಅನ್ನು 2.0 ಲೀಟರ್, 4-ಸಿಲಿಂಡರ್ ಟ್ವಿನ್ ಪವರ್ ಟರ್ಬೊ ಎಂಜಿನ್‍ನಿಂದ ಉತ್ಪಾದಿಸಲಾಗುತ್ತದೆ ಅದು 6.1 ಸೆಕೆಂಡುಗಳಲ್ಲಿ 100 KmPh ಓಡುವ ಮೂಲಕ ಗರಿಷ್ಠ ಔಟ್‍ಪುಟ್ 231 hp170 KW ಒಗ್ಗೂಡಿಸುತ್ತದೆ ಮತ್ತು 320 Nm ನ ಗರಿಷ್ಠ ಟಾರ್ಕ್ ಅನ್ನು 1,450 – 4,800 Rpm ನಲ್ಲಿ ನೀಡುತ್ತದೆ.
undefined
MINI 3-ಡೋರ್ ಹ್ಯಾಚ್‍ನಲ್ಲಿ ನಿಖರವಾಗಿ ರೂಪಿಸಲಾದ 7-ಸ್ಪೀಡ್ ಡಬಲ್ ಕ್ಲಚ್ ಸ್ಟೆಪ್ಟ್ರಾನಿಕ್ ಟ್ರಾನ್ಸ್‍ಮಿಷನ್ ಮತ್ತು MINI JCW ಹ್ಯಾಚ್‍ನಲ್ಲಿನ 8-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಟ್ರಾನ್ಸ್‍ಮಿಷನ್ ಮತ್ತಷ್ಟು ದಕ್ಷತೆಯ, ಅನುಕೂಲಕರ ಮತ್ತು ಕ್ರೀಡಾ ಚಾಲನೆಯ ರೋಮಾಂಚನವನ್ನು ಅದರ ವಿಸ್ತಾರ ಗೇರ್ ಪ್ರಸಾರ ಮತ್ತು ಸಣ್ಣ ಎಂಜಿನ್ ಸ್ಪೀಡ್ ಸ್ಟೆಪ್ಸ್ ಮೂಲಕ ನೀಡುತ್ತದೆ. MINI ಜಾನ್ ಕೂಪರ್ ವಕ್ರ್ಸ್ ಹ್ಯಾಚ್ ಪ್ಯಾಡಲ್ ಶಿಫ್ಟರ್ಸ್ ಮತ್ತಷ್ಟು ಕ್ರೀಡಾತನದ ಚಾಲನೆಯ ಅನುಭವಕ್ಕಾಗಿ ಹೊಂದಿವೆ. MINI ಡ್ರೈವಿಂಗ್ ಮೋಡ್ಸ್ ವೈಯಕ್ತಿಕಗೊಳಿಸಿದ ವಾಹನ ಸೆಟಪ್ ಸನ್ನದ್ಧಗೊಳಿಸಿದ್ದು ರೈಡ್ ಕಂಫರ್ಟ್‍ಗೆ ಗಮನ ನೀಡಲಾಗಿದೆ, ಉನ್ನತೀಕರಿಸಲಾದ ಸ್ಪೋರ್ಟಿನೆಸ್ ಅಥವಾ ಚಾಲಕರ ಆದ್ಯತೆಯ ಅನುಸಾರ ದಕ್ಷತೆಯನ್ನು ಹೊಂದಿದೆ. ಸ್ಟಾಂಡರ್ಡ್ MID ಮೋಡ್‍ನೊಂದಿಗೆ SPORT ಮತ್ತು GREEN ಮೋಡ್ ಆಯ್ಕೆಯೂ ಲಭ್ಯವಿದೆ. ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್‍ನಲ್ಲಿ ಕ್ರೂಸ್ ಕಂಟ್ರೋಲ್, ಪಾರ್ಕ್ ಅಸಿಸ್ಟೆಂಟ್, ರಿಯರ್ ವ್ಯೂ ಕ್ಯಾಮರಾ ಮತ್ತು ಹೆಡ್-ಅಪ್ ಡಿಸ್ಪ್ಲೇ ಒಳಗೊಂಡಿದೆ.
undefined
ಆಲ್-ನ್ಯೂ MINI ಶ್ರೇಣಿಯು ಕಟಿಂಗ್-ಎಡ್ಜ್ ಸೇಫ್ಟಿ ಟೆಕ್ನಾಲಜಿಯೊಂದಿಗೆ ಸನ್ನದ್ಧವಾಗಿದೆ. ಸುರಕ್ಷತೆಯ ಸ್ಟಾಂಡರ್ಡ್ ಸಾಧನಗಳಲ್ಲಿ ಫ್ರಂಟ್ ಪ್ಯಾಸೆಂಜರ್ ಏರ್‍ಬ್ಯಾಗ್ಸ್, ಬ್ರೇಕ್ ಅಸಿಸ್ಟ್, 3-ಪಾಯಿಂಟ್ ಸೀಟ್ ಬೆಲ್ಟ್ಸ್, ಡೈನಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕ್ರಾಶ್ ಸೆನ್ಸರ್, ಆ್ಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ರನ್-ಫ್ಲಾಟ್ ಟೈರ್ಸ್ ಮತ್ತು ರಿಯರ್-ವ್ಯೂ ಕ್ಯಾಮರಾ ಸ್ಟಾಂಡರ್ಡ್ ಆಗಿ ಲಭ್ಯ. MINI ಕನ್ವರ್ಟಿಬಲ್ ಹೆಚ್ಚುವರಿ ಸುರಕ್ಷತೆಗಾಗಿ ರೋಲೋವರ್ ಪ್ರೊಟೆಕ್ಷನ್ ಸಿಸ್ಟಂ ಹೊಂದಿದೆ. ಸ್ಟಾಂಡರ್ಡ್ MINIMALISM ತಂತ್ರಜ್ಞಾನದಲ್ಲಿ ಆಟೊ ಸ್ಟಾರ್ಟ್ಸ್ಟಾಪ್ ಫಂಕ್ಷನ್, ಬ್ರೇಕ್ ಎನರ್ಜಿ ರಿಕ್ಯುಪರೇಷನ್, ಆಕ್ಟಿವ್ ಕೂಲಿಂಗ್ ಏರ್ ಫ್ಲಾಪ್ಸ್ ಮತ್ತು ಎಲೆಕ್ಟ್ರೊಮೆಕ್ಯಾನಿಕಲ್ ಪವರ್ ಸ್ಟೀರಿಂಗ್ ಒಳಗೊಂಡಿದೆ.
undefined
click me!