16 ನೇ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) , 14ನೇ ಇಂಡಿಯನ್ ಮೋಟಾರ್‍ಸೈಕಲ್ ಆಫ್ ದಿ ಇಯರ್ 2021 (ICOTY) ಪ್ರಶಸ್ತಿಗಳನ್ನು ಪ್ರದಾನ ಮಾಡಿತು . ಟ್ರಕ್ ಬಸ್ ರೇಡಿಯಲ್ ವಿಭಾಗದ ಮಾರುಕಟ್ಟೆ ನಾಯಕರಾದ ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ ಇಂದು ಭಾರತೀಯ ವಾಹನ ಉದ್ಯಮದಲ್ಲಿ ಉನ್ನತ ಪ್ರಶಸ್ತಿ ನೀಡಿತು.
undefined
ಬ್ರ್ಯಾಂಡ್ ಪರಂಪರೆಯನ್ನು ಆಧರಿಸಿ, `ಇಂಡಿಯನ್ ಕಾರ್ ಆಫ್ ದಿ ಇಯರ್ 2021’ ಎಂಬ ಬಿರುದನ್ನು ಹ್ಯುಂಡೈ i20 ಪಡೆದುಕೊಂಡಿದೆ.
undefined
ICOTY ಇಂಡಿಯನ್ ಕಾರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿರುವುದಕ್ಕೆ ಹ್ಯುಂಡೈ ಭಾರತದ ಸಿಇಓ ಎಸ್ ಎಸ್ ಕಿಮ್ ಸಂತಸ ವ್ಯಕ್ತಪಡಿಸಿದರು. ಹ್ಯುಂಡೈನಲ್ಲಿನ ನಮಗೆಲ್ಲರಿಗೂ ಇದು ಬಹಳ ಹೆಮ್ಮೆಯ ಕ್ಷಣವಾಗಿದೆ. ಹೊಸ ಯುಗದ ಭಾರತೀಯ ಗ್ರಾಹಕರ ಪ್ರಗತಿಪರ ಮನೋಭಾವದ ಬಲವಾದ ಅಭಿವ್ಯಕ್ತಿಯನ್ನು ಚಿತ್ರಿಸುತ್ತದೆ ಎಂದರು.
undefined
ಇಂಡಿಯನ್ ಮೋಟಾರ್‍ಸೈಕಲ್ ಆಫ್ ದಿ ಇಯರ್ 2021' ಪ್ರಶಸ್ತಿಯನ್ನು ರಾಯಲ್ ಎನ್‍ಫೀಲ್ಡ್ ಮೀಟಿಯಾರ್ 350 ಗೆದ್ದುಕೊಂಡು ದ್ವಿಚಕ್ರ ವಾಹನ ವಿಭಾಗದಲ್ಲಿ ವಿಜೇತನಾಗಿ ಹೊರಹೊಮ್ಮಿತು.
undefined
ದೇಶದಲ್ಲಿ ಹೆಚ್ಚುತ್ತಿರುವ ಪ್ರೀಮಿಯಂ ಕಾರುಗಳ ಬೇಡಿಕೆಯೊಂದಿಗೆ, 2019 ರಲ್ಲಿ ICOTY ತೀರ್ಪುಗಾರರು ವಿಶ್ವದಾದ್ಯಂತದ ಅತ್ಯುತ್ತಮ ವಾಹನಗಳನ್ನು ಗೌರವಿಸುವ ಪ್ರೀಮಿಯಂ ಕಾರ್ ಪ್ರಶಸ್ತಿಯನ್ನು ಪರಿಚಯಿಸಿದರು." ಲ್ಯಾಂಡ್ ರೋವರ್ ಡಿಫೆಂಡರ್ ಅನ್ನು ``ಪ್ರೀಮಿಯಂ ಕಾರ್ ಅವಾರ್ಡ್ 2021 ಬೈ ICOTY ಎಂದು ಆಯ್ಕೆ ಮಾಡಲಾಯಿತು.
undefined
ವಿದ್ಯುತ್ ಚಲನಶೀಲತೆಯತ್ತ ಭಾರತ ಸರ್ಕಾರ ಮತ್ತು ವಾಹನ ಉದ್ಯಮದ ಗಮನ ಹೆಚ್ಚಾಗುತ್ತಿರುವುದರಿಂದ, ಈ ವರ್ಷ ICOTY ತೀರ್ಪುಗಾರರು ಭವಿಷ್ಯದ ಚಲನಶೀಲತೆಗೆ ಕೊಡುಗೆ ನೀಡುವ ತಯಾರಕರನ್ನು ಪುರಸ್ಕರಿಸಲು `ಗ್ರೀನ್ ಕಾರ್ ಅವಾರ್ಡ್' ಅನ್ನು ಪ್ರಾರಂಭಿಸಿದರು. ಉದ್ಘಾಟನಾ ಆವೃತ್ತಿಯಲ್ಲಿ ‘ಗ್ರೀನ್ ಕಾರ್ ಅವಾರ್ಡ್ 2021 ಬೈ ICOTY ಯನ್ನು ಟಾಟಾ ನೆಕ್ಸನ್ ಎಲೆಕ್ಟ್ರಿಕ್ ಕಾರು ಪಡೆದುಕೊಂಡಿದೆ
undefined
ನಿಜಕ್ಕೂ ನಮಗೆ ಬಹಳ ಹೆಮ್ಮೆಯ ಕ್ಷಣವಾಗಿದೆ. ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ, ಪ್ರಾಯೋಗಿಕ ಮತ್ತು ಹೊಂದಬಹುದಾದ ಎಲೆಕ್ಟ್ರಿಕ್ ಕಾರು - ಟಾಟಾ ನೆಕ್ಸನ್ ಇವಿಗೆ ಮೊಟ್ಟಮೊದಲ `ಗ್ರೀನ್ ಕಾರ್ ಪ್ರಶಸ್ತಿ 2021 ಪ್ರಶಸ್ತಿ ಲಭಿಸಿರುುದು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಟಾಟಾ ಮೋಟಾರ್ಸ್ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.
undefined
ಸುಸ್ಥಿರ ಚಲನಶೀಲತೆಯ ಹೆಚ್ಚುತ್ತಿರುವ ಪ್ರಸ್ತುತತೆಯನ್ನು ಪರಿಗಣಿಸಿ, ಚಲನಶೀಲತೆಯ ಭವಿಷ್ಯದಲ್ಲಿ ಬದಲಾವಣೆಯನ್ನು ತರಲು ಸಹಾಯ ಮಾಡುತ್ತಿರುವ ತಯಾರಕರ ಪ್ರಯತ್ನಗಳನ್ನು ಗುರುತಿಸಲು ಈ ವರ್ಷ ನಾವು `ಗ್ರೀನ್ ಕಾರ್ ಅವಾರ್ಡ್' ಅನ್ನು ಪರಿಚಯಿಸಿದ್ದೇವೆ. ಇದರೊಂದಿಗೆ, ನಾನು ಕೇವಲ ವಿಜೇತರನ್ನಷ್ಟೇ ಅಲ್ಲದೆ, ಜಾಗತಿಕ ಆವಿಷ್ಕಾರಗಳಿಗೆ ಅನುಗುಣವಾಗಿ ಕೆಲವು ತಾಂತ್ರಿಕವಾಗಿ ಸುಧಾರಿತ ಉತ್ಪನ್ನಗಳನ್ನು ನೀಡಿದ ಎಲ್ಲ ಸ್ಪರ್ಧಿಗಳನ್ನು ಅಭಿನಂದಿಸುತ್ತೇನೆ. ನಮ್ಮ ಶ್ರೇಷ್ಠ ತೀರ್ಪುಗಾರರು ಸುರಕ್ಷಿತ ಮತ್ತು ನಿರಾತಂಕವಾದ ವಾತಾವರಣದಲ್ಲಿ ಮೌಲ್ಯಮಾಪನವನ್ನು ನಡೆಸುತ್ತಿರುವುದಕ್ಕೆ ಸಾಕ್ಷಿಯಾಗುವುದು ಅದ್ಭುತವಾಗಿದೆ ಎಂದು ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ ಹೇಳಿದರು
undefined