ಫೋರ್ಡ್ ಇಕೋಸ್ಪೋರ್ಟ್ SUV ಕಾರಿನ ಬೆಲೆ ಕಡಿತ; ಗ್ರಾಹಕರಿಗೆ ಸುವರ್ಣವಕಾಶ!

First Published Jan 4, 2021, 2:30 PM IST

ಭಾರತದಲ್ಲಿ ಜನವರಿ 1, 2021ರಿಂದ ಬಹುತೇಕ ವಾಹನಗಳ ಬೆಲೆ ಏರಿಕೆಯಾಗಿದೆ. ಕಚ್ಚಾ ವಸ್ತುಗಳ ಬೆಲೆ, ಆಮದು, ಉತ್ಪಾದನೆಗಳಿಂದ ವಾಹನ ಬೆಲೆ ಏರಿಕೆ ಮಾಡಲಾಗುತ್ತಿದೆ. ಆದರೆ ಫೋರ್ಡ್ ತನ್ನು ಇಕೋಸ್ಪೋರ್ಟ್ SUV ಕಾರಿನ ಬೆಲೆ ಕಡಿತಗೊಳಿಸಿದೆ. ಪರಿಷ್ಕೃತ ಬೆಲೆ ಮಾಹಿತಿ ಇಲ್ಲಿದೆ.

ಹೊಸ ವರ್ಷದಿಂದ ಕಾರು, ಬೈಕ್, ಸ್ಕೂಟರ್ ಬೆಲೆ ಮತ್ತಷ್ಟು ದುಬಾರಿಯಾಗಿದೆ. ಆದರೆ ಫೋರ್ಡ್ ಭಾರತದಲ್ಲಿ ತನ್ನ ಇಕೋಸ್ಪೋರ್ಟ್ ಕಾರುಗಳ ಮೇಲೆ ಬೆಲೆ ಕಡಿತ ಮಾಡಿದೆ.
undefined
ಇಕೋಸ್ಪೋರ್ಟ್ SUV ಕಾರಿನ ಮೇಲೆ ಫೋರ್ಡ್ ಗರಿಷ್ಠ 39,000 ರೂಪಾಯಿ ಕಡಿಮೆ ಮಾಡಿದೆ. ಈ ಮೂಲಕ ಇದೀಗ ಫೋರ್ಡ್ ಇಕೋಸ್ಪೋರ್ಟ್ ಕಾರು ಖರೀದಿ ಸುಲಭವಾಗಿದೆ.
undefined
8.19 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದ್ದ ಇಕೋಸ್ಪೋರ್ಟ್ ಕಾರಿನ ಬೆಲೆ ಇದೀಗ ದರ ಕಡಿತದ ಬಳಿಕ 7.99 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ.
undefined
ಫೋರ್ಡ್ ಇಕೋಸ್ಪೋರ್ಟ್ ಪೆಟ್ರೋಲ್ ವೇರಿಯೆಂಟ್ ಕಾರಿನಲ್ಲಿ ಆ್ಯಂಬಿಯೆಂಟ್ MT ಬೆಲೆ 20,000 ರೂಪಾಯಿ ಕಡಿತ ಮಾಡಲಾಗಿದೆ. ಇನ್ನು ಟ್ರೆಂಡ್ MT ವೇರಿಯೆಂಟ್ ಬೆಲೆ 35,000 ರೂಪಾಯಿ ಕಡಿತ ಮಾಡಲಾಗಿದೆ.
undefined
ಸ್ಪೋರ್ಟ್ಸ್ MT ವೇರಿಯೆಂಟ್ ಬೆಲೆ 24,000 ರೂಪಾಯಿ ಕಡಿತ ಮಾಡಲಾಗಿದೆ. ಇಕೋಸ್ಪೋರ್ಟ್ +AT(ಟಾಪ್ ಮಾಡೆಲ್) ಕಾರಿ ಮೇಲೆ 39,000 ರೂಪಾಯಿ ಕಡಿತಗೊಳಿಸಲಾಗಿದೆ.
undefined
ಇಕೋಸ್ಪೋರ್ಟ್ ಡೀಸೆಲ್ ವೇರಿಯೆಂಟ್ ಕಾರಿನಲ್ಲಿ ಟ್ರೆಂಡ್ MT ಕಾರಿನ ಬೆಲೆಯಲ್ಲಿ 35,000 ರೂಪಾಯಿ ಕಡಿಮೆ ಮಾಡಲಾಗಿದೆ. ಡೀಸೆಲ್ ಸ್ಪೋರ್ಟ್ಸ್ MT ಕಾರಿನ ಬೆಲೆ 24,000 ರೂಪಾಯಿ ಕಡಿತಗೊಳಿಸಲಾಗಿದೆ.
undefined
ಫೋರ್ಡ್ ಇಕೋಸ್ಪೋರ್ಟ್ ಅತೀ ಕಡಿಮೆ ನಿರ್ವಹಣೆ ವಚ್ಚ ಹೊಂದಿದೆ ಕಾರು ಎಂದು ಕಂಪನಿ ಹೇಳಿದೆ. ಪ್ರತಿ ಕೀಲೋಮೀಟರ್‌ಗೆ 36 ಪೈಸೆ ಮಾತ್ರ ನಿರ್ವಹಣೆ ವೆಚ್ಚ ತಗುಲಲಿದೆ.
undefined
ಇಕೋಸ್ಪೋರ್ಟ್‌ನಲ್ಲಿ ಡೀಸೆಲ್ ವೇರಿಯೆಂಟ್ ಕಾರು 1.5l TDCi ಎಂಜಿನ್ ಹೊಂದಿದೆ. 100 PS ಪವರ್ ಹಾಗೂ 215 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ವೇರಿಯೆಂಟ್ 1.5-litre Ti-VCT ಎಂಜಿನ್ ಹೊಂದಿದೆ.
undefined
click me!