2020 ಡಿಸೆಂಬರ್ ಒಂದೇ ತಿಂಗಳಲ್ಲಿ ಬುಕ್ ಆದ ಮಹೀಂದ್ರ ಥಾರ್ ಎಷ್ಟು? ವರ್ಷಾಂತ್ಯದಲ್ಲಿ ದಾಖಲೆ!

First Published | Jan 1, 2021, 6:29 PM IST

ಸೆಕೆಂಡ್ ಜನರೇಶನ್ ಮಹೀಂದ್ರ ಥಾರ್ ಭಾರತದ ಅತ್ಯುತ್ತಮ ಆಫ್ ರೋಡರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಕರ್ಷಕ ವಿನ್ಯಾಸ, ದಕ್ಷ ಎಂಜಿನ್ ಸೇರಿದಂತೆ ಹಲವು ಕಾರಣಗಳಿಂದ ಕಾರು ಪ್ರಿಯರು, ಸೆಲೆಬ್ರೆಟಿಗಳು, ರಾಜಕಾರಣಿಗಳು ಥಾರ್ ಮೋಡಿಗೆ ಬೋಲ್ಡ್ ಆಗಿದ್ದಾರೆ. ಡಿಸೆಂಬರ್ ಒಂದೇ ತಿಂಗಳಲ್ಲಿ ಥಾರ್ ಹೊಸ ದಾಖಲೆ ಬರೆದಿದೆ. ಹೊಸ ವರ್ಷಕ್ಕೆ ಮಹೀಂದ್ರ ನೀಡಿದ ಸಿಹಿ ಸುದ್ದಿ ಏನು? ಇಲ್ಲಿದೆ

2020ಕ್ಕೆ ಗುಡ್ ಬೈ ಹೇಳಿ 2021ನೇ ಹೊಸ ವರ್ಷವನ್ನು ಎಲ್ಲರು ಸ್ವಾಗತಿಸಿದ್ದಾರೆ. ಈ ವರ್ಷ ಎಲ್ಲವೂ ಪ್ರಗತಿ, ಅಭಿವೃದ್ಧಿ ಕಾಣಲಿ ಎಂದು ಹಾರೈಸಿದ್ದಾರೆ. ಇತ್ತ ಮಹೀಂದ್ರ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದೆ.
ಕಾರಣ 2020ರ ಡಿಸೆಂಬರ್ ಒಂದೇ ತಿಂಗಳಲ್ಲಿ ಮಹೀಂದ್ರ ಥಾರ್ ಬರೋಬ್ಬರಿ 6,500 ಬುಕ್ ಆಗಿವೆ. ಭಾರಿ ಬೇಡಿಕೆ ವ್ಯಕ್ತವಾಗುತ್ತಿರುವ ಕಾರಣ ಡೆಲಿವರಿ ವಿಳಂಬವಾಗುತ್ತಿದ್ದರೂ, ಜನರು ಥಾರ್ ಖರೀದಿಗೆ ಮುಂದಾಗುತ್ತಿದ್ದಾರೆ.
Tap to resize

2020ರ ವರ್ಷಾಂತ್ಯದಲ್ಲಿ ಮಹೀಂದ್ರ ಥಾರ್ ಖರೀದಿಸಿದ ಗ್ರಾಹಕರು, ಹೊಸ ವರ್ಷವನ್ನು ಆಫ್ ರೋಡ್ ಕಿಂಗ್ ಜೊತೆ ಆಚರಿಸಿದ್ದಾರೆ. ಈ ಮೂಲಕ ಮಹೀಂದ್ರ ಕೂಡ 2020ನೇ ವರ್ಷಕ್ಕೆ ಅದ್ಧೂರಿಯಾಗಿ ಗುಡ್ ಬೈ ಹೇಳಿದೆ.
ಮಹೀಂದ್ರ ಥಾರ್ ಬೆಲೆ 11.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 13.75 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು 8.90 ಲಕ್ಷ ರೂಪಾಯಿ ಬೆಲೆಯ ಎಂಟ್ರಿ ಲೆವೆಲ್ AX ಮಾಡೆಲ್ ಥಾರ್ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಡಿಸೆಂಬರ್ ತಿಂಗಳಲ್ಲಿ ಬುಕ್ ಆದ 6,500 ಮಹೀಂದ್ರ ಥಾರ್ ಬುಕಿಂಗ್‌ಗಳಲ್ಲಿ ಶೇಕಡಾ 50 ರಷ್ಟು ಆಟೋಮ್ಯಾಟಿಕ್ ವೇರಿಯೆಂಟ್ LX ಬುಕಿಂಗ್ ಆಗಿವೆ.
ಸದ್ಯ ಮಹೀಂದ್ರ ಥಾರ್ ವೈಟಿಂಗ್ ಸಮಯ 9 ತಿಂಗಳು. ಕಾರಣ ಭಾರಿ ಬೇಡಿಕೆ ಹಾಗೂ ಬುಕಿಂಗ್ ಕಾರಣ ಡೆಲಿವರಿ ವಿಳಂಬವಾಗುತ್ತಿದೆ. ಹೊಸ ಥಾರ್ ಇದೀಗ ಜನರ ನೆಚ್ಚಿನ ವಾಹನವಾಗಿದೆ.
ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಹೀಂದ್ರ ಥಾರ್ ವಾಹನ ಚಲಾಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅತ್ಯುತ್ತಮ ವಾಹನ ಎಂದಿದ್ದರು.
ಮಲೆಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಹಲವು ನಟ-ನಟಿಯರು ಥಾರ್ ಖರೀದಿಸಿದ್ದಾರೆ.

Latest Videos

click me!